Kannada News

ಬಸ್ ಸೌಲಭ್ಯ ಕಲ್ಪಿಸುವಂತೆ ಶಾಲಾ ಕಾಲೇಜು ವಿದ್ಯಾರ್ಥಿಗಳಿಂದ ಮನವಿ

ಬಸ್ ಸೌಲಭ್ಯ ಕಲ್ಪಿಸುವಂತೆ ಶಾಲಾ ಕಾಲೇಜು ವಿದ್ಯಾರ್ಥಿಗಳಿಂದ ಮನವಿ

ಪ್ರಗತಿವಾಹಿನಿ ಸುದ್ದಿ – ಗೋಕಾಕ : ತಾಲೂಕಿನ ತಪಸಿ ಗ್ರಾಮಕ್ಕೆ ವಾಯಾ ನಿಂಗಾಪೂರ (ದಂಡಿನ ಮಾರ್ಗವಾಗಿ) ಬಸ್ ಸೌಲಭ್ಯ ನೀಡುವಂತೆ ತಪಸಿ ಕೆಮ್ಮನಕೂಲ, ಸಜ್ಜಿಹಾಳ ಹಾಗೂ ನಿಂಗಾಪೂರ ಗ್ರಾಮಗಳ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಸೋಮವಾರ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದರು.

ಈಗಿರುವ ತಪಸ್ಸಿ ಬಸ್ ಹಲವಾರು ನಿಲ್ದಾಣಗಳಲ್ಲಿ ನಿಲ್ಲಿಸುತ್ತಿರುವುದರಿಂದ ಶಾಲೆ ಹಾಗೂ ಕಾಲೇಜುಗಳಿಗೆ ಸರಿಯಾದ ಸಮಯಕ್ಕೆ ತಲುಪಲು ಸಾಧ್ಯವಾಗುತ್ತಿಲ್ಲ. ಅಲ್ಲದೇ ಸಂಜೆ 4ಗಂಟೆಗೆ ತಪಸ್ಸಿ ಗ್ರಾಮಕ್ಕೆ ತೆರಳುವ ಬಸ್ಸಿನಲ್ಲಿ ತಪಸ್ಸಿ, ಕೆಮ್ಮನಕೂಲ ಹಾಗೂ ನಿಂಗಾಪೂರ ವಿದ್ಯಾರ್ಥಿಗಳಿಗೆ ದಟ್ಟನೆಯಲ್ಲಿ ಸಂಚರಿಸಬೇಕು. ಇಲ್ಲವಾದಲ್ಲಿ ಬೆಟಗೇರಿ ಅಥವಾ ಸುತ್ತಲಿನ ಬೇರೆ ಬಸ್ಸುಗಳಲ್ಲಿ ಸಂಚರಿಸಬೇಕಾದ ಅನಿವಾರ್ಯತೆ ಬಂದೊದಗಿದ್ದು ಸರಿಯಾದ ಬಸ್  ವ್ಯವಸ್ಥೆ ಕಲ್ಪಿಸುವಂತೆ ಮನವಿಯಲ್ಲಿ ತಿಳಿಸಿದ್ದಾರೆ.

ಮನವಿ ಸ್ವೀಕರಿಸಿ ಮಾತನಾಡಿದ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ತಳವಾರ ಅವರು, ಈ ಕುರಿತು ಈಗಾಗಲೇ ನಮ್ಮ ಸಿಬ್ಬಂಧಿಯೊಂದಿಗೆ ಚರ್ಚೆ ಮಾಡಿದ್ದು ಅತಿ ಶೀಘ್ರದಲ್ಲಿ ತಪಸ್ಸಿ, ಕೆಮ್ಮನಕೂ ಹಾಗೂ ನಿಂಗಾಪೂರ ಗ್ರಾಮಗಳ ವಿದ್ಯಾರ್ಥಿಗಳಿಗೆ ಸೂಕ್ತ ಬಸ್ಸಿನ ವ್ಯವಸ್ಥೆ ಕಲ್ಪಿಸುವುದಾಗಿ ಭರವಸೆ ನೀಡಿದರು.

ಯುವ ಧುರೀಣ ಭೀಮಶಿ ಭರಮಣ್ಣವರ ನೇತೃತ್ವದಲ್ಲಿ, ಪವನ ಮಹಾಲಿಂಗಪೂರ, ಶಂಕರ ಭರಮನ್ನವರ, ಲಕ್ಷಣ ನಾಯಕ, ಮಲ್ಲಪ್ಪ ದಂಡಿನ, ವಿದ್ಯಾರ್ಥಿಗಳಾದ ಮಂಜು ಪಾಟೀಲ, ಮದಗೊಂಡ ಬಡಿಗೇರ, ದುಂಡಪ್ಪ ಕಿಚಡಿ, ಸಿದ್ದಣ್ಣ ನಾಯಕ, ಬಸು ಕುರೇರ, ವಿಠ್ಠಲ ನಾಯಕ, ಭೀಮಪ್ಪ ಕುಲಗೋಡ, ರಮೇಶ ಕೊಪ್ಪದ, ದಶರಥ ಐದುಡ್ಡಿ, ಮಲ್ಲಪ್ಪ ನಾಯಕ, ಸಿದ್ದು ವಾಳದ, ಸದಾನಂದ ಬನ್ನಿಶೆಟ್ಟಿ, ರಾಯಪ್ಪ ಕಟ್ಟಿಕಾರ, ಪ್ರಕಾಶ ವಾಳದ, ಬಸವರಾಜ ನಿಗದಿ, ಹನಮಂತ ಹನಜಿ, ಪಾಂಡು ಸಾಯನ್ನವರ ಸೇರಿದಂತೆ 50ಕ್ಕೂ ಹೆಚ್ಚು ಶಾಲೆ ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಇದ್ದರು. ////

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button