ಪ್ರಾಮಾಣಿಕ ನಾಯಕನ ಅವಶ್ಯಕತೆಯಿದೆ: ಬಾಬಾಗೌಡ ಪಾಟೀಲ
ಪ್ರಗತಿವಾಹಿನಿ ಸುದ್ದಿ – ನೇಗಿನಹಾಳ : ಚೆನ್ನಮ್ಮ ಕಿತ್ತೂರು ಮತಕ್ಷೇತ್ರದ ಮತದಾರರಿಗೆ ಓರ್ವ ನೇರ ನಿಷ್ಠುರವಾದಿ, ಸರಳ ಸಜ್ಜನ, ಪ್ರಾಮಾಣಿಕ ನಾಯಕನ ಅವಶ್ಯಕತೆಯಿದೆ ಎಂದು ಮಾಜಿ ಕೇಂದ್ರ ಸಚಿವ ಬಾಬಾಗೌಡ ಪಾಟೀಲ ಹೇಳಿದರು.
ಸೋಮವಾರ ಸಮೀಪದ ಎಂ.ಕೆ.ಹುಬ್ಬಳ್ಳಿ ಮಲಪ್ರಭಾ ಸಕ್ಕರೆ ಕಾರ್ಖಾನೆ ಬಳಿಯ ಬಂಡೆಮ್ಮ ದೇವಸ್ಥಾನದಲ್ಲಿ ಮಾಜಿ ಜಿ.ಪಂ.ಸದಸ್ಯ ಬಾಬಾಸಾಹೇಬ ಪಾಟೀಲ ಅವರ ಹುಟ್ಟು ಹಬ್ಬ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕರ್ನಾಟಕ ರಾಜ್ಯ ರಾಜಕೀಯದಲ್ಲಿ ಅರಾಜಕತ ಸೃಷ್ಟಿಯಾಗಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಕಿತ್ತೂರು ಮತಕ್ಷೇತ್ರದ ರೈತರು, ದೀನದಲಿತರು, ನೊಂದವರ ಪಾಲಿಗೆ ಬಾಬಾಸಾಹೇಬ ಪಾಟೀಲರಂತಹ ಜನನಾಯಕನ ಅವಶ್ಯಕತೆಯಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಜಿ.ಪಂ.ಸದಸ್ಯೆ ರೋಹಿಣಿ ಪಾಟೀಲ,
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮಲಪ್ರಭಾ ಸಕ್ಕರೆ ಕಾರ್ಖಾನೆ ಉಪಾಧ್ಯಕ್ಷ ವಿರೇಶ ಕಂಬಳಿ, ಜಿ.ಪಂ.ಸದಸ್ಯ ನಿಂಗಪ್ಪ ಅರಕೇರಿ, ಎಪಿಎಂಸಿ ಸದಸ್ಯ ಚಂದ್ರಗೌಡ ಪಾಟೀಲ, ಮಾಜಿ ಜಿ.ಪಂ.ಅಧ್ಯಕ್ಷ ಯಲ್ಲಪ್ಪ ವಕ್ಕುಂದ, ನಿವೃತ್ತ ಅರಣ್ಯಾಧಿಕಾರಿ ಸಿ.ಬಿ.ಪಾಟೀಲ, ಉದ್ಯಮಿಗಳಾದ ಹಬೀಬ ಶಿಲೇದಾರ ಮಾತನಾಡಿದರು.
ಕಾರ್ಯಕ್ರಮದಲ್ಲಿ ಜಿ.ಪಂ.ಸದಸ್ಯರಾದ ರಾಧಾ ಕಾದ್ರೊಳ್ಳಿ, ಲಾವಣ್ಯ ಶಿಲೇದಾರ್, ನಿರ್ದೇಶಕರಾದ ಫಕೀರಗೌಡ ಪಾಟೀಲ, ಗುರುಲಿಂಗ ಬೆಡಿಗೇರಿ, ಶಿವನಗೌಡ ಪಾಟೀಲ, ಎಪಿಎಂಸಿ ಸದಸ್ಯರಾದ ರಾವಸಾಹೇಬ ಪಾಟೀಲ, ತಾ.ಪಂ.ಸದಸ್ಯ ಮುದಕಪ್ಪ ಮರಡಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಅದೃಶಪ್ಪ ಗದ್ದಿಹಳ್ಳಿಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಿದ್ದನಗೌಡ ಪಾಟೀಲ ಸ್ವಾಗತಿಸಿದರು. ಕೆ.ಆರ್.ಕುಲಕರ್ಣಿ ನಿರೂಪಿಸಿದರು.////
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ