ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಇತ್ತೀಚೆಗೆ ಸಮಾಜದಲ್ಲಿ ಜಾತಿ ಜಾತಿಗಳಿಗೂ ಮೀಸಲಾತಿ ನೀಡಬೇಕೆಂದು ಸಮಾಜವನ್ನು ಮಾರ್ಗದರ್ಶನ ಮಾಡುವ ಸ್ವಾಮೀಜಿಗಳು ಹೋರಾಟಕ್ಕೆ ಇಳಿದಿರುವುದು ಬಹು ಚರ್ಚಿತ ಅಂಶವಾಗಿದೆ. ಧರ್ಮದ ಅನುಯಾಯಿಗಳಾದ ಪೂಜ್ಯರುಗಳೇ ಈ ರೀತಿಯ ಹಾದಿಯಲ್ಲಿ ಹೊರಟಿರುವುದು ಬೇಸರತರಿಸಿದೆ ಎಂದು ಹೈಕೋರ್ಟ್ ವಕೀಲ ಎಸ್.ವಿ.ಶ್ರೀನಿವಾಸ್ ಕಳವಳ ವ್ಯಕ್ತಪಡಿಸಿದ್ದಾರೆ.
ಸನ್ಯಾಸತ್ವದ ಮೂಲತ್ವವೇ ಸರ್ವಸಂಘ ಪರಿತ್ಯಾಗ ಎಂಬ ಅರ್ಥವನ್ನು ವೇದಗಳ ಕಾಲದಿಂದಲೂ ಅಳವಡಿಕೆಯಾಗಿದೆ. ಧರ್ಮದ ತಳಹದಿಯೇ ಜಾತಿ. ಈ ಜಾತಿ ಜಾತಿಗಳ ಸಮಷ್ಟಿಯೇ ಧರ್ಮ. ಆದರೆ ಈ ಜಾತಿ ಜಾತಿಗಳ ಮೀಸಲಾತಿ ಹೋರಾಟಗಳಿಂದ ಎಲ್ಲೋ ಒಂದುಕಡೆ ಧರ್ಮದ ತಳಹದಿಗೆ ಮಾರಕವಾಗುತ್ತದೆಯೇನೋ ಎಂಬ ಆತಂಕ ನಿರ್ಮಾಣವಾಗಿದೆ ಎಂದಿದ್ದಾರೆ.
ಸಮಾಜದಲ್ಲಿ ನೊಂದವರು, ಅವಕಾಶ ವಂಚಿತರು, ದುರ್ಬಲರು, ಆರ್ಥಿಕವಾಗಿ ಹಿಂದುಳಿದವರು ಎಲ್ಲಾ ಜಾತಿಯಲ್ಲಿಯೂ ಇದ್ದಾರೆ. ಅಂತಹವರಿಗೆ ಮೀಸಲಾತಿ ಕೊಡಿಸಿದರೆ ಅದು ನಿಜವಾಗಲೂ ಧರ್ಮಕಾರ್ಯ ಆಗುತ್ತದೆ. ಇದನ್ನು ಹೋರಾಟದಲ್ಲಿರುವ ಪ್ರತಿಯೊಬ್ಬರೂ ಅರಿಯಬೇಕು. ಜಾತಿ ಜಾತಿಗಳ ಮೀಸಲಾತಿಯ ಬದಲಾಗಿ ಸಮಾಜದಲ್ಲಿ ಇರುವ ಆರ್ಥಿಕ ಹಿಂದುಳಿದವರಿಗೆ ಆದ್ಯತೆ ನೀಡುವ ಮೂಲಕ ಆರ್ಥಿಕ ದುರ್ಬಲರಿಗೆ ಮೀಸಲಾತಿ ಸೌಕರ್ಯ ನೀಡಿದರೆ ಸದೃಢ ಸಮಾಜ ನಿರ್ಮಾಣದಲ್ಲಿ ಸಹಕಾರಿ ಆಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ