Latest

ಲವ್ ಜಿಹಾದ್ ತಡೆಗೆ ಕಾನೂನು ಜಾರಿ; 23 ದಿನದಲ್ಲಿ ದಾಖಲಾಯ್ತು 23 ಪ್ರಕರಣ

ಪ್ರಗತಿವಾಹಿನಿ ಸುದ್ದಿ; ಭೋಪಾಲ್: ಮಧ್ಯಪ್ರದೇಶದಲ್ಲಿ ಲವ್ ಜಿಹಾದ್ ತಡೆಗೆ ಸುಗ್ರೀವಾಜ್ಞೆ ಮೂಲಕ ಕಾನೂನು ಜಾರಿಯಾಗಿದ್ದು, ಕಾನೂನು ಜಾರಿಯಾದ 23 ದಿನಗಳಲ್ಲಿ 23 ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ವಿವಾಹದ ಹೆಸರಲ್ಲಿ ಯುವತಿಯರನ್ನು ವಂಚಿಸುವ ಪ್ರಕರಣ ತಡೆಯುವ ನಿಟ್ಟಿನಲ್ಲಿ ರಾಜ್ಯದಲ್ಲಿ ಜ.9ರಂದು ಹೊಸ ಕಾನೂನು ಜಾರಿಗೆ ತರಲಾಗಿತ್ತು. ಕಾನೂನು ಜಾರಿಯಾದಾಗಿನಿಂದ 23 ಪ್ರಕರಣ ದಾಖಲಾಗಿದೆ.

ಭೋಪಾಲ್ ನಲ್ಲಿ 7 ಲವ್ ಜಿಹಾದ್ ಪ್ರಕರಣ ದಾಖಲಾಗಿದೆ. ಇಂಧೋರ್ ನಲ್ಲಿ 5, ಜಬಲ್ಪುರ ಮತ್ತು ರೇವಾದಲ್ಲಿ ತಲಾ 4 ಪ್ರಕರಣ ಹಾಗೂ ಗ್ವಾಲಿಯರ್ ನಲ್ಲಿ ಮೂರು ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

Related Articles

Back to top button