*ಗುತ್ತಿಗೆಯಲ್ಲಿ ಮುಸ್ಲಿಂಮರಿಗೆ ಮೀಸಲಾತಿ ನೀಡಿರುವದು ಅಸಂವಿಧಾನಿಕವಾಗಿದೆ: ವಿಜಯೇಂದ್ರ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಸರ್ಕಾರಿ ಗುತ್ತಿಗೆಯಲ್ಲಿ ಶೇ4ರಷ್ಟು ಮುಸ್ಲಿಂಮರಿಗೆ ಮೀಸಲಾತಿ ನೀಡಿರುವ ಸರ್ಕಾರದ ತೀರ್ಮಾನ ಅಸಂವಿಧಾನಿಕ ತೀರ್ಮಾನವಾಗಿದೆ. ಧರ್ಮದ ಆಧಾರದ ಮೀಸಲಾತಿ ಕೊಡುವ ಬಗ್ಗೆ ಸಂವಿಧಾನದಲ್ಲಿ ಎಲ್ಲಿಯೂ ಉಲ್ಲೇಖ ಆಗಿಲ್ಲ. ಕಾಂಗ್ರೆಸ್ ಸರ್ಕಾರದ ನಿರ್ಧಾರ ಧರ್ಮ ಧರ್ಮಗಳ ಮಧ್ಯೆ ಕಂದಕ ನಿರ್ಮಾಣದ ಷಡ್ಯಂತ್ರ್ಯ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಹೇಳಿದರು.
ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಓಲೈಕೆ ರಾಜಕೀಯ ಎಷ್ಟರ ಮಟ್ಟಿಗೆ ಬಂದಿದೆ ಎಂಬುದು ಇದರಿಂದ ಗೊತ್ತಾಗುತ್ತೆ. ಬಿಜೆಪಿ ಇದನ್ನು ಬಲವಾಗಿ ಖಂಡಿಸುತ್ತೆ. ಸದನದ ಒಳಗೆ ಬಿಜೆಪಿ- ಜೆಡಿಎಸ್ ಸರ್ಕಾರದ ಕಿವಿ ಹಿಂಡುವ ಕೆಲಸ ಮಾಡಿದೆ. ಹಣಕಾಸಿನ ಮುಗ್ಗಟ್ಟು ಇದೆ ಎಂದು ವಿವಿ ಮುಚ್ಚುವ ನಿರ್ಧಾರ ಕೈಹಾಕಿತಗತ್ತು. ನಮ್ಮ ಹೋರಾಟದ ಹಿನ್ನೆಲೆಯಲ್ಲಿ ಸರ್ಕಾರದ ಒಂದು ಹೆಜ್ಜೆ ಹಿಂದೆ ಇಟ್ಟಿದೆ. ತಮ್ಮ ನಿಲುವಿನಿಂದ ಸರ್ಕಾರ ಹಿಂದೆ ಸರಿದೆ ಎಂದರು.
ನಿನ್ನೆ ಬೆಳಗಾವಿ ಪಾಲಿಕೆಯ ಮೇಯರ್ ಮಂಗೇಶ ಪವಾರ್, ವಾಣಿ ವಿಲಾಸ್ ಜೋಶಿ ಆಯ್ಕೆಯಾಗಿದ್ದಾರೆ. ಇಬ್ಬರಿಗೂ ಅಭಿನಂದನೆ ಸಲ್ಲಿಸುತ್ತೇನೆ.
ಇಬ್ಬರ ನೇತೃತ್ವದಲ್ಲಿ ಅತಿ ಹೆಚ್ಚು ಅಭಿವೃದ್ಧಿ ಕೆಲಸ ಆಗಲಿ. ಎಲ್ಲಾ ಭಾಷಿಕರು, ಜಾತಿಯರನ್ನು ಒಟ್ಟಿಗೆ ತೆಗೆದುಕೊಂಡು ಹೋಗವಂತೆ ಆಗಲಿ ಎಂದರು
ಕಾಂಗ್ರೆಸ್ ನಡಿಗೆ ಕೃಷ್ಣಯ ಕಡೆಗೆ ಎಂದಿದ್ರು. ಈ ವಿಚಾರವನ್ನು ಕಾಂಗ್ರೆಸ್ ನವರು ಮರೆತಿದ್ದಾರೆ. ಗ್ಯಾರಂಟಿ ಅನುಷ್ಠಾನ ಹಿನ್ನೆಲೆಯಲ್ಲಿ ಅಭಿವೃದ್ಧಿ ಮರೆತಿದ್ದಾರೆ. ಮುಗಿಗೆ ತುಪ್ಪ ಹಚ್ಚುವ ಕೆಲಸ ಸರ್ಕಾರ ಮಾಡಿದೆ. ಸರ್ಕಾರಕ್ಕೆ ಅಭಿವೃದ್ಧಿ ಬಗ್ಗೆ ಚಿಂತನೆ ಇಲ್ಲ. ಸರ್ಕಾರ ಕೇವಲ ಪೇಪರ್ ಟೈಗರ್ ಎಂದರು
ಗ್ಯಾರಂಟಿ ಇದೆಲ್ಲ ಅರ್ಥ ಇಲ್ಲದೆ ಇರೋದು. ಜನರನ್ನು ತೃಪ್ತಿ ಪಡಿಸಲು ಮಾಡಿದ್ದಾರೆ. ಯಾವುದು ಕಾರ್ಯರೂಪಕ್ಕೆ ಬರ್ತಾ ಇಲ್ಲ. ತುಗಲಿಕ್ ದರ್ಬಾರ್ ನಡೆಯುತ್ತಿದೆ ಎಂದರು.
ಫೈನಾನ್ಸ್ ಕಿರುಕುಳ ರಾಜ್ಯ ಸರ್ಕಾರ ನಿಟ್ಟಿನಲ್ಲಿ ಬಿಲ್ ಪಾಸ್ ಮಾಡಿದೆ. ಈಗಾಗಲೇ ಸಾಕಷ್ಟು ಸಾವು- ನೋವು ಆಗಿದೆ. ಬಡವರಿಗೆ ಕಿರುಕುಳ ನೀಡುವ ಕೆಲಸ ಆಗುತ್ತೆ. ನಾವು ಈ ನಿಟ್ಟಿನಲ್ಲಿ ಸದನದಲ್ಲಿ ಹೋರಾಟ ಮಾಡ್ತಿವಿ. ಉತ್ತರ ಕರ್ನಾಟಕ ನೀರಾವರಿ ಯೋಜನೆಗೆ ಯಾವುದೇ ಅನುದಾನ ನೀಡಿಲ್ಲ. ಈ ಸರ್ಕಾರ ಯಾವುದೇ ಯೋಜನೆ ನೀಡಿಲ್ಲ. ನಮ್ಮ ಸರ್ಕಾರ ನೀಡಿದ ಯೋಜನೆಯನ್ನು ತಡೆಹಿಡಿದ್ದಾರೆ. ಎಂಇಎಸ್ ಸಂಘಟನೆಯಿಂದ ಬೆಳಗಾವಿಯಲ್ಲಿ ಪುಂಡಾಟ ಪ್ರಕರಣದ ಕುರಿತು ಮಾತನಾಡಿದ ಅವರು, ಕನ್ನಡಿಗರು, ಮರಾಠಿಗರು ಅನ್ಯೋನ್ಯತೆ ಇಂದ ಇರಬೇಕು. ಯಾರೊ ಕೆಲ ಕಿಡಿಗೇಡಿಗಳು ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಇದನ್ನು ರಾಜ್ಯ ಸರ್ಕಾರ ಗಮನಿಸಬೇಕು ಎಂದು ಆಗ್ರಹಿಸಿದರು.