Kannada NewsKarnataka NewsLatest

ನಿವೃತ್ತ ಪ್ರಾಚಾರ್ಯ ಶಂಕರ ಮಹಾದೇವ ಶಿವಾಪೂರ ನಿಧನ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿ ನಗರದ ಸೌಥ್ ಕೊಂಕಣ್ ಶಿಕ್ಷಣ ಸಂಸ್ಥೆಯ, ರಾಣಿ ಪಾರ್ವತಿದೇವಿ ಮಹಾವಿದ್ಯಾಲಯದ ನಿವೃತ್ತ  ಪ್ರಾಚಾರ್ಯ ಶಂಕರ ಮಹಾದೇವ ಶಿವಾಪೂರ ನಿಧನರಾಗಿದ್ದಾರೆ.  ಅವರಿಗೆ 78 ವರ್ಷ ವಯಸ್ಸಾಗಿತ್ತು.

ಆರ್ ಪಿಡಿ ಕಾಲೇಜಿನಲ್ಲಿ ೧೯೬೯ ರಿಂದ ೨೦೦೦ ವರೆಗೆ ೩೧ ವರ್ಷಗಳ ಕಾಲ ಅವರು ಕೆಲಸ ನಿರ್ವಹಿಸಿದ್ದರು. ಇಂದು ಮುಂಜಾನೆ ಅವರು ಬೆಳಗಾವಿಯಲ್ಲಿ ನಿಧನರಾದರು.

Home add -Advt

ಇವರು ಪತ್ನಿ, ಇಬ್ಬರು ಗಂಡು ಮಕ್ಕಳು, ಮೂವರು ಮೊಮ್ಮಕ್ಕಳು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ರಾಣಿ ಪಾರ್ವತಿದೇವಿ ಮಹಾವಿದ್ಯಾಲಯದ ಸಮಸ್ತ ಸಿಬ್ಬಂದಿ ಹಾಗೂ ಆಡಳಿತ ಮಂಡಳಿಯು ಸಭೆ ಕರೆದು ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿ ಅವರ ಆತ್ಮಕ್ಕೆ ಚಿರಶಾಂತಿ ಕೋರಿತು.

Related Articles

Back to top button