Kannada NewsLatest

ಸಂಕೇಶ್ವರ: ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿದ್ದ ಪಡಿತರ ಅಕ್ಕಿ ವಶ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಅಕ್ರಮವಾಗಿ ಲಾರಿಯೊಂದರಲ್ಲಿ ಇಲ್ಲಿನ ಗಾಂಧಿನಗರದಿಂದ ಕೊಲ್ಲಾಪುರಕ್ಕೆ ಸಾಗಾಟ ಮಾಡಲಾಗುತ್ತಿದ್ದ 12  ಕ್ವಿಂಟಾಲ್ ಪಡಿತರ ಅಕ್ಕಿಯನ್ನು ಸಂಕೇಶ್ವರ ಪೊಲೀಸರು ವಶಪಡಿಸಿಕೊಂಡಿದ್ದಾರೆ.

 ಬೆಳಗಾವಿಯ ಶಾಂತಿನಾಥ ಪಾಟೀಲ ಎಂಬುವವರು ಈ ಅಕ್ಕಿ ಸಾಗಾಟ ಮಾಡುತ್ತಿದ್ದು  ಲಾರಿ ಚಾಲಕ,  ಸಂಕೇಶ್ವರ ವಡ್ಡರಗಲ್ಲಿ ನಿವಾಸಿ ರಮೇಶ ನಾರಾಯಣ ಮನುವಡ್ಡರ್ ನನ್ನು ಬಂಧಿಸಲಾಗಿದೆ. ಶಾಂತಿನಾಥ ವಿರುದ್ಧವೂ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

Home add -Advt

ಸಂಕೇಶ್ವರ ಠಾಣೆ ಪಿಎಸ್ಐ ನೇತೃತ್ವದಲ್ಲಿ ಖಚಿತ ಮಾಹಿತಿ ಮೇರೆಗೆ ಲಾರಿ ತಡೆದು ಪರಿಶೀಲನೆ ಮಾಡಿದಾಗ  ನಾಗರಿಕ ಪೂರೈಕೆಗಾಗಿ ವಿತರಣೆಯಾದ ಅಕ್ಕಿಯನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿರುವುದು ಬಯಲಿಗೆ ಬಂದಿದೆ.

ಆಹಾರ ಮತ್ತು ನಾಗರಿಕ ಪೂರೈಕೆ ಅಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು. ಅಗತ್ಯವಸ್ತುಗಳ ಕಾಯಿದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

ಶಿರಾಡಿಘಾಟ್ ನಲ್ಲಿ ಭೂಕುಸಿತ; ವಾಹನ ಸಂಚಾರ ಸ್ಥಗಿತ

 

Related Articles

Back to top button