
ಪ್ರಗತಿವಾಹಿನಿ ಸುದ್ದಿ: ಬೆಳಗಾವಿ ಜಿಲ್ಲೆಯ ಅಥಣಿ-ಗೋಕಾಕ್ ಮುಖ್ಯ ರಸ್ತೆಯಲ್ಲಿ ದರೂರ ಗ್ರಾಮದ ಬಸ್ ನಿಲ್ದಾಣದ ಬಳಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಉದ್ಯಮಿ ಸಾವನ್ನಪ್ಪಿದ್ದಾರೆ.
ಮೃತ ದುರ್ದೈವಿಯನ್ನು ಸಪ್ತಸಾಗರ ಗ್ರಾಮದ ನಿವಾಸಿ, ಇಟ್ಟಿಗೆ ಉದ್ಯಮಿ ಶ್ರೀಶೈಲ ಹವಾಲದಾರ ಎಂದು ಗುರುತಿಸಲಾಗಿದೆ.
ಕವಟಗೊಪ್ಪ ಗ್ರಾಮದಿಂದ ಕಬ್ಬು ತುಂಬಿಕೊಂಡು ಕೃಷ್ಣಾ ಸಕ್ಕರೆ ಕಾರ್ಖಾನೆಗೆ ಹೊರಟಿದ್ದ ಟ್ರ್ಯಾಕ್ಟರ್ನ ಟ್ರಾಲಿಗೆ ಬೈಕ್ ಸವಾರ ಆಯತಪ್ಪಿ ಬಿದ್ದು ಈ ದುರ್ಘಟನೆ ಸಂಭವಿಸಿದೆ.
