ಪ್ರಗತಿವಾಹಿನಿ ಸುದ್ದಿ, ಖಾನಾಪುರ: ಪ್ರಯಾಣಿಕರ ಟೆಂಪೋ ಟ್ರಾವಲರ್ ರಸ್ತೆ ಬದಿಯ ತಡೆಗೋಡೆಗೆ ಡಿಕ್ಕಿ ಹೊಡೆದ
ಪರಿಣಾಮ ಸಂಭವಿಸಿದ ರಸ್ತೆ ಅಪಘಾತದಲ್ಲಿ ಓರ್ವ ಪ್ರಯಾಣಿಕ ಸಾವನ್ನಪ್ಪಿ 12 ಜನರು
ಗಾಯಗೊಂಡ ಘಟನೆ ಶುಕ್ರವಾರ ಕರ್ನಾಟಕ-ಗೋವಾ ಗಡಿಯ ಚೋರ್ಲಾ ಘಟ್ಟ ಪ್ರದೇಶದಲ್ಲಿ
ವರದಿಯಾಗಿದೆ.
ಬಾಗಲಕೋಟೆ ಜಿಲ್ಲೆ ಜಮಖಂಡಿಯಿಂದ ಒಟ್ಟು 14 ಜನರು ಗೋವಾ ಪ್ರವಾಸಕ್ಕೆಂದು
ಹೊರಟಿದ್ದರು. ಇವರಲ್ಲಿ ಮಕ್ಕಳು ಮತ್ತು ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿದ್ದರು.
ಗೋವಾ ಘಟ್ಟದಲ್ಲಿ ಇವರು ತೆರಳುತ್ತಿದ್ದ ವಾಹನ ಚಾಲಕನ ನಿಯಂತ್ರಣ ಕಳೆದುಕೊಂಡು
ಅಪಘಾತಕ್ಕೀಡಾಗಿದೆ. ಅಪಘಾತದಲ್ಲಿ ಜಮಖಂಡಿ ಮೂಲದ ಶಿವಾನಂದ ಸಜ್ಜನ (28)
ಮೃತಪಟ್ಟಿದ್ದು, ಶಿರೀಷ್ ಪೋತದಾರ (3), ಸತೀಶ ಪೋತದಾರ (41), ವೈಭವ ಸಜ್ಜನ (5),
ಮಹಾದೇವ (30), ಶಿವಕುಮಾರ (38), ವೆಂಕಪ್ಪ (49), ಪಾರ್ವತಿ (38), ಸುರೇಶ (52),
ಲಕ್ಷ್ಮೀ (21), ಶ್ರೀಶೈಲ (47), ಗಾಯತ್ರಿ (40), ಮಹಾಂತೇಶ ((30), ಶ್ರೀದೇವಿ (33)
ಗಾಯಗೊಂಡಿದ್ದಾರೆ ಎಂದು ದೂರು ದಾಖಲಿಸಿಕೊಂಡಿರುವ ಗೋವಾದ ವಾಳಪೈ ಠಾಣೆಯ ಪೊಲೀಸರು
ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ