Kannada NewsKarnataka News

85 ಲಕ್ಷ ರೂ. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ; ಚಾಲನೆ ನೀಡಿದ ಚನ್ನರಾಜ ಹಟ್ಟಿಹೊಳಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ :  ಬೆಳಗಾವಿ ಗ್ರಾಮೀಣ ಕ್ಷೇತ್ರದ ಕುಕಡೊಳ್ಳಿ – ವಿರಪನಕೊಪ್ಪ ಗ್ರಾಮದವರೆಗಿನ ರಸ್ತೆಯ ಅಭಿವೃದ್ಧಿಗಾಗಿ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಅವರು ಲೋಕೋಪಯೋಗಿ ಇಲಾಖೆಯ ವತಿಯಿಂದ 85 ಲಕ್ಷ ರೂ. ಮಂಜೂರು ಮಾಡಿಸಿದ್ದು, ಕಾಮಗಾರಿಗಳಿಗೆ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಭೂಮಿ ಪೂಜೆಯನ್ನು ನೆರವೇರಿಸಿ ಚಾಲನೆ ನೀಡಿದರು.

ಮೊದಲ ಬಾರಿಗೆ ಶಾಸಕರಾದರೂ ಕಳೆದ 5 ವರ್ಷದ ಅವಧಿಯಲ್ಲಿ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಅವರು ದಾಖಲೆಯ ಪ್ರಮಾಣದಲ್ಲಿ ಅಭಿವೃದ್ಧಿ ಕಾಮಗಾರಿ ಮಾಡಿದ್ದು, ಮುಂದಿನ ಅವಧಿಗೂ ಅವರನ್ನು ಅತ್ಯಧಿಕ ಬಹುಮತದೊಂದಿಗೆ ಆಯ್ಕೆ ಮಾಡಬೇಕೆಂದು ವಿನಂತಿಸಿದರು. 

ಕೊರೋನಾದಂತಹ ಸಂಕಷ್ಟ ಬಂದರೂ ನಮ್ಮ ಇಡೀ ಕುಟುಂಬ ಕ್ಷೇತ್ರದ ಜನರ ಸೇವೆಯನ್ನು ಸ್ವಲ್ಪವೂ ಲೋಪವಿಲ್ಲದೆ ಮಾಡಿದೆ. ಪ್ರವಾಹದ ಸಂದರ್ಭದಲ್ಲೂ ಜನರೊಂದಿಗಿದ್ದೇವೆ. ಜನರೊಂದಿಗೆ ನಿಂತಿದ್ದೇವೆ. ಅಗತ್ಯವಿದ್ದವರಿಗೆ ಆಹಾರ, ಔಷಧದ ಕಿಟ್ ಗಳನ್ನು ವಿತರಿಸಿದ್ದೇವೆ. ದಿನದ 24 ಗಂಟೆಯೂ ಅಂಬುಲೆನ್ಸ್ ಸೇವೆ ಒದಗಿಸಿದ್ದೇವೆ. ನಿಮ್ಮ ಪ್ರೀತಿ, ವಿಶ್ವಾಸದಿಂದಾಗಿ ಇಡೀ ಕ್ಷೇತ್ರವೇ ನಮ್ಮ ಕುಟುಂಬ ಎನ್ನುವ ರೀತಿಯಲ್ಲಿ ಸೇವೆ ಮಾಡಿದ್ದೇವೆ. ಹಾಗಾಗಿ ಬರುವ ಚುನಾವಣೆಯಲ್ಲಿ ಖಂಡಿತ ನಮ್ಮ ಬೆಂಬಲಕ್ಕೆ ನಿಲ್ಲುತ್ತೀರಿ ಎನ್ನುವ ವಿಶ್ವಾಸವಿದೆ ಎಂದು ಅವರು ಹೇಳಿದರು.

ಈ ಸಮಯದಲ್ಲಿ ಗ್ರಾಮದ ಹಿರಿಯರು, ಬಾಳಪ್ಪ ವಡ್ಡಿನ, ಗಂಗಪ್ಪ ಲಕಮೋಜಿ, ಮಂಜು ಹುಬ್ಬಳ್ಳಿ, ರಮೇಶ ಮರಕಟ್ಟಿ, ವೀರನಗೌಡ  ಪಾಟೀಲ, ರಾಮಪ್ಪ ಕರವಿಕೊಪ್ಪ, ಬಸವರಾಜ ಬಡಸ್, ಗದಿಗೆಪ್ಪ ವಡ್ಡಿನ, ಬಸ್ಸು ವಡ್ಡಿನ, ಮಾರುತಿ ಸಾರವರಿ, ನಾಗೇಶ ಮೆಟ್ಟಿನ, ತಾಯಪ್ಪ ಮರಕಟ್ಟಿ, ಬಸವರಾಜ ಗಾಡಿಕೊಪ್ಪ ಮುಂತಾದವರು ಉಪಸ್ಥಿತರಿದ್ದರು.

https://pragati.taskdun.com/karnatakarain3days/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button