
https://www.youtube.com/watch?v=9gN-3GPdjLM&t=9s
https://www.youtube.com/watch?v=oeirlZCOpkA
https://www.youtube.com/watch?v=m7QXj1LRjSs
ಪ್ರಗತಿವಾಹಿನಿ ಸುದ್ದಿ, ಖಾನಾಪುರ – ಖಾನಾಪುರ ಯುಥ್ ಕಾಂಗ್ರೆಸ್ ಅಧ್ಯಕ್ಷ ಇರ್ಫಾನ್ ತಾಳಿಕೋಟಿ ಮತ್ತು ಖಾನಾಪುರ ಪಟ್ಟಣ ಪಂಚಾಯಿತಿ ಸದಸ್ಯ ರಫೀಕ್ ವಾರಿಮನಿ ನಡುವೆ ಭಾರೀ ಬೀದಿ ಜಗಳ, ಮಾರಾಮಾರಿ ನಡೆದಿದೆ. ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಬಹುಕೋಟಿ ಛಾಪಾಕಾಗದ ಹಗರಣದ ಆರೋಪಿ ಕರೀಂ ಲಾಲಾ ತೆಲಗಿಯ ಅಳಿಯ ಮತ್ತು ಯುಥ್ ಕಾಂಗ್ರೆಸ್ ತಾಲೂಕಾ ಅಧ್ಯಕ್ಷ ಇರ್ಫಾನ್ ತಾಳೀಕೋಟೆ ಮತ್ತು ಖಾನಾಪುರ ಪಟ್ಟಣ ಪಂಚಾಯತಿ ಸದಸ್ಯ , ಜೆಡಿಎಸ್ ಕಾರ್ಯಕರ್ತ ರಫೀಕ್ ವಾರಿಮನಿ ನಡುವೆ ಜನದಟ್ಟಣೆಯ ರಸ್ತೆಯಲ್ಲಿಯೇ ಮಾರಾಮಾರಿ ನಡೆದಿದೆ.
ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಜೋರಾಗಿ ಹರಿದಾಡುತ್ತಿದೆ. ಒಬ್ಬರಿಗೊಬ್ಬರು ಮನಬಂದಂತೆ ಹೊಡೆದಾಡಿಕೊಂಡಿದ್ದಾರೆ. ಸ್ಥಳದಲ್ಲಿಯೇ ಇರ್ಫಾನ್ ತಾಳಿಕೋಟಿ ಯವರಿಗೆ ಇನ್ನೂ ಕೆಲವರು ಮನಬಂದಂತೆ ಥಳಿಸಿರುವ ವಿಡಿಯೋಗಳು ಕೂಡ ವೈರಲ್ ಆಗಿವೆ. ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ಇಬ್ಬರೂ ದಾಖಲಾಗಿದ್ದಾರೆ.
ಇರ್ಫಾನ್ ತಾಳಿಕೋಟಿ ಪತ್ನಿ ಖಾನಾಪುರ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿರುವುದಾಗಿ ತಿಳಿದು ಬಂದಿದೆ. ಇದಕ್ಕೆ ಪ್ರತಿಯಾಗಿ ರಫೀಕ್ ವಾರಿಮನಿ ಕೂಡಾ ದೂರು ನೀಡುವ ಸಾಧ್ಯತೆಗಳಿವೆ. ಘಟನೆಗೆ ಮೂಲ ಕಾರಣ ತಿಳಿದು ಬಂದಿಲ್ಲ. ಆದರೆ ದೀಪಾವಳಿಯ ಹಬ್ಬದ ಸಂದರ್ಭದಲ್ಲಿ ಈ ಘಟನೆಯಂತೂ ಸಾರ್ವಜನಿಕರಿಗೆ ಆತಂಕ ಹಾಗೂ ಬೀದಿ ಮನರಂಜನೆ ಕೂಡಾ ನೀಡಿತು.
 
					 
				 
					 
					 
					 
					
 
					 
					 
					


