
ಪ್ರಗತಿವಾಹಿನಿ ಸುದ್ದಿ: ಖ್ಯಾತ ಬಾಲಿವುಡ್ ನಿರ್ದೇಶಕ ಖ್ಯಾತ ನಟ, ಮನೋಜ್ ಕುಮಾರ್ (87) ಕೊನೆಯುಸಿರು ಎಳೆದಿದ್ದಾರೆ.
ಇವರನ್ನು 1992 ರಲ್ಲಿ ಭಾರತ ಸರ್ಕಾರ ಪದಶ್ರೀ ಪ್ರಶಸ್ತಿ ನೀಡಿ ಗೌರವಿಸಿತ್ತು. ತಮ್ಮ ದೇಶಭಕ್ತಿ ಸಂದೇಶ ನೀಡುವ ಸಿನಿಮಾಗಳಿಂದ ಪ್ರಸಿದ್ಧರಾಗಿದ್ದ ಇವರು, ಕ್ರಾಂತಿ, ರೋಟಿ ಕಪಡಾ ಔರ್ ಮಕಾನ್, ಪುರಬ್ ಪಶ್ಚಿಮ್, ವೋ ಕೌನ್ ಥೀ, ಶೋರ್ ಮುಂತಾದ ಸಿನಿಮಾಗಳಿಂದ ವಿಖ್ಯಾತಿ ಗಳಿಸಿದ್ದ ಅವರು “ಭರತ್ ಕುಮಾಋ ” ಎಂಬ ಹೆಸರಿನಿಂದಲೇ ಜನಪ್ರಿಯರಾಗಿದ್ದರು.
ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಮುಂಬೈನ ಕೋಕಿಲಾ ಬೆನ್ ಧೀರೂಬಾಯ್ ಅಂಬಾನಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಅವರು ನಿನ್ನೆ ತಡರಾತ್ರಿ ಮೃತಪಟ್ಟಿದ್ದಾರೆ.