ಪ್ರವಾಹ ಸಂತ್ರಸ್ಥರ ಮನೆ ನಿರ್ಮಾಣಕ್ಕೆ ರೂ.47.78 ಕೋಟಿ ಪರಿಹಾರ ಹಸ್ತಾಂತರ: ಸಚಿವೆ ಶಶಿಕಲಾ ಜೊಲ್ಲೆ

೨೦೧೯ರ ಪ್ರವಾಹದಲ್ಲಿ ಉಳಿದುಕೊಂಡಿದ್ದ ೪೭೭ ಸಂತ್ರಸ್ತರ ಮನೆಗಳಿಗೆ ಮರುನೋಂದಣಿಗೆ ಜ.೧೫ ಕೊನೆ ದಿನ
ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ – ’೨೦೧೯, ೨೦೨೦ ಮತ್ತು ೨೦೨೧ ರ ಪ್ರವಾಹದಲ್ಲಿ ಹಾನಿಯಾದ ಮನೆಗಳ ಪುನರ್ ನಿರ್ಮಾಣಕ್ಕಾಗಿ ಸರಕಾರದಿಂದ ಒಟ್ಟು ರೂ. ೪೭.೭೮ ಕೋಟಿ ಹಣ ಅನುಮೋದನೆ ಪಡೆದು ತಾಲ್ಲೂಕಿನ ಸಂತ್ರಸ್ತರಿಗೆ ಹಸ್ತಾಂತರಿಸಲಾಗಿದೆ. ೨೦೧೯ರ ಪ್ರವಾಹದಲ್ಲಿ ನೋಂದಣಿಯಾಗದೆ ಉಳಿದುಕೊಂಡಿದ್ದ ೪೭೭ ಸಂತ್ರಸ್ತರಿಗೆ ಮರುನೋಂದಣಿ ಮಾಡಲು ಜ.೧೫ ಕೊನೆ ದಿನವಾಗಿದ್ದು ಅವರು ಇದರ ಲಾಭ ಪಡೆದುಕೊಳ್ಳಬೇಕು’ ಎಂದು ಮುಜರಾಯಿ, ಹಜ್ ಮತ್ತು ವಕ್ಫ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.
ಸ್ಥಳೀಯ ತಮ್ಮ ಕಛೇರಿಯಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ೨೦೧೯ ರಲ್ಲಿ ’ಎ’ ವರ್ಗದ ೩೨೮ ಮನೆಗಳ ನಿರ್ಮಾಣಕ್ಕಾಗಿ ರೂ.೧೨.೭೬ ಕೋಟಿ, ’ಬಿ’ ವರ್ಗದ ೬೧೯ ಮನೆಗಳಿಗೆ ರೂ.೧೯.೭೬ ಕೋಟಿ ಮತ್ತು ’ಸಿ’ ವರ್ಗದ ೧೪೮೨ ಮನೆಗಳಿಗೆ ರೂ.೭.೪೨ ಕೋಟಿ ಹೀಗೆ ಒಟ್ಟು ೨೪೨೯ ಮನೆಗಳಿಗೆ ರೂ.೩೯.೯೪ ಕೋಟಿ ಸಂತ್ರಸ್ತರಿಗೆ ಹಸ್ತಾಂತರಿಸಲಾಗಿದೆ’ ಎಂದರು.
’೨೦೨೦ರಲ್ಲಿ ರೂ ೧೯.೫೦ ಲಕ್ಷಗಳನ್ನು ಸರಕಾರದಿಂದ ಅನುಮೋದನೆ ಪಡೆದು ಹಸ್ತಾಂತರಿಸಲಾಗಿದೆ. ೨೦೨೧ ರಲ್ಲಿ ’ಎ’ ವರ್ಗದ ೭೧ ಮನೆಗಳಿಗೆ ರೂ.೬೭.೫೨ ಲಕ್ಷ, ’ಬಿ’ ವರ್ಗದ ೪೭೬ ಮನೆಗಳಿಗೆ ರೂ.೪.೫೨ ಕೋಟಿ ಮತ್ತು ’ಸಿ’ ವರ್ಗದ ೪೯೧ ಮನೆಗಳಿಗೆ ರೂ.೨.೪೫ ಕೋಟಿ ಹೀಗೆ ಒಟ್ಟು ೧೦೩೮ ಮನೆಗಳಿಗೆ ರೂ.೭.೬೫ ಕೋಟಿ ಹಣ ಸಂತ್ರಸ್ತರಿಗೆ ಹಸ್ತಾಂತರಿಸಲಾಗಿದೆ. ಜೊತೆಗೆ ೬೭೮೯ ಮನೆಗಳಿಗೆ ಪ್ರವಾಹದ ನೀರು ನುಗ್ಗಿದ ಪರಿಹಾರವಾಗಿ ತಲಾ ರೂ. ೧೦,೦೦೦/- ರಂತೆ ಒಟ್ಟು ರೂ.೬.೮ ಕೋಟಿ ಸಂತ್ರಸ್ತರಿಗೆ ಹಸ್ತಾಂತರಿಸಲಾಗಿದೆ’ ಎಂದರು.
’೨೦೧೯ರ ಪ್ರವಾಹದಲ್ಲಿ ಹಾನಿಗೊಂಡ ೪೭೭ ಮನೆಗಳು ತಾಂತ್ರಿಕ ಕಾರಣದಿಂದ ಹಾಗೂ ದಾಖಲೆಗಳು ಸಲ್ಲಿಕೆಯಾಗದ ಪರಿಣಾಮ ನೋಂದಣಿಯಾಗದೆ ಉಳಿದು ಹೋಗಿದ್ದವು. ಅವುಗಳನ್ನು ಮರು ನೋಂದಣಿ ಮಾಡಲು ಜ.೧೫ ಕೊನೆಯ ದಿನಾಂಕವಾಗಿದ್ದು ಸಂತ್ರಸ್ತರು ರೂ.೨೦ ಸ್ಟ್ಯಾಂಪ್ ಪೇಪರ್ ಸಹಿತ ದಾಖಲೆಗಳನ್ನು ಸಲ್ಲಿಸಬೇಕು. ಇದರಲ್ಲಿ ’ಎ’ ವರ್ಗದ ೭೦, ’ಬಿ’ ವರ್ಗದ ೧೦೦ ಮತ್ತು ’ಸಿ’ ವರ್ಗದ ೩೦೭ ಮನೆಗಳಿವೆ. ’ಬಿ’ ವರ್ಗದಲ್ಲಿ ’ಬಿ೧’ ಮತ್ತು ’ಬಿ೨’ ಎಂದು ವಿಭಜಿಸಿ ’ಬಿ೧’ ವರ್ಗದ ಸಂತ್ರಸ್ತರಿಗೆ ಮನೆ ದುರುಸ್ತಿಗೆ ರೂ.೩ ಲಕ್ಷ ಮತ್ತು ’ಬಿ೨’ ವರ್ಗದ ಸಂತ್ರಸ್ತರಿಗೆ ಮನೆ ಪುನರ್ ನಿರ್ಮಾನಕ್ಕೆ ರೂ.೫ ಲಕ್ಷ ದಂತೆ ಮಂಜೂರಾತಿ ಪಡೆಯಲು ರೂ.೨೦/- ರ ಸ್ಟ್ಯಾಂಪ್ ಪೇಪರ್ ಮೇಲೆ ಈ ಕುರಿತು ಸ್ಪಷ್ಟವಾಗಿ ಬರೆದು ಕೊಟ್ಟನಂತರ ಅವುಗಳನ್ನು ಸರಕಾರದ ಅನುಮೋದನೆಗೆ ಸಲ್ಲಿಸಲಾಗುವುದು ಎಂದರು.
ಶಾಲೆಗಳಿಗೆ ರಜೆ ಆದೇಶ ಬದಲಾವಣೆ ಮಾಡಿ ಮರು ಆದೇಶ ಹೊರಡಿಸಿದ ಜಿಲ್ಲಾಧಿಕಾರಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ