Kannada NewsKarnataka News

*ಜೈನ್ ಸಮುದಾಯ ಭವನಕ್ಕೆ 50 ಲಕ್ಷ ರೂ: ಶಂಕುಸ್ಥಾಪನೆ ನೆರೇರಿಸಿದ ಲಕ್ಷ್ಮೀ ಹೆಬ್ಬಾಳಕರ್*

​ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಹಲಗಾ ಗ್ರಾಮದಲ್ಲಿ ನೂತನ ಜೈನ್ ಸಮುದಾಯ ಭವನದ ನಿರ್ಮಾಣಕ್ಕಾಗಿ ಅಲ್ಪ ಸಂಖ್ಯಾತರ ನಿಧಿಯಿಂದ 50 ಲಕ್ಷ ರೂ,ಗಳನ್ನು ಮಂಜೂರಾಗಿದ್ದು, ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಮಂಗಳವಾರ ಸಮುದಾಯ ಭವನ ನಿರ್ಮಾಣದ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದರು.

ಈ ಸಂಬಂಧ ನಡೆದ ಸರಳ ಕಾರ್ಯಕ್ರಮದಲ್ಲಿ ಮಾತನಾಡಿದ ಲಕ್ಷ್ಮೀ ಹೆಬ್ಬಾಳಕರ್, ಜೈನ ಧರ್ಮ ಅಹಿಂಸಾ ಧರ್ಮವಾಗಿದ್ದು, ಜನರು ಅತ್ಯಂತ ಸೌಮ್ಯವಾದಿಗಳು. ಇಡೀ ವಿಶ್ವಕ್ಕೆ ಅಹಿಂಸೆಯ ತತ್ವಗಳನ್ನು ಸಾರಿರುವ, ಎಲ್ಲರನ್ನೂ ಸಮಾನವಾಗಿ, ಪ್ರೀತಿ, ವಿಶ್ವಾಸದಿಂದ ಕಾಣುವ ಧರ್ಮವಾಗಿದೆ. ಕ್ಷೇತ್ರದಾದ್ಯಂತ ಜೈನ ಸಮುದಾಯದವರಿಗೆ ಅನೇಕ ಸೌಲಭ್ಯಗಳನ್ನು ಒದಗಿಸಿಕೊಟ್ಟಿದ್ದೇನೆ. ನಿಮ್ಮ ಸಹಕಾರ ಎಂದಿನಂತೆ ಮುಂದಿನ ದಿನಗಳಲ್ಲಿ ಸಹ ಇರಲಿ ಎಂದು ವಿನಂತಿಸಿದರು.

 ಈ ಸಮಯದಲ್ಲಿ ಬಾಲ ಆಚಾರ್ಯ ಶ್ರೀ 108 ಸಿದ್ದಸೇನಾ ಮುನಿ ಮಹಾರಾಜರು, ಸಹೋದರ, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಗ್ರಾಮದ ಹಿರಿಯರು, ಜೈನ ಸಮಾಜದ ಎಲ್ಲ ಮುಖಂಡರು, ಧನ್ಯಕುಮಾರ ದೇಸಾಯಿ, ಸುಕುಮಾರ ಹುಡೇದ, ಬಾಬು ದೇಸಾಯಿ, ಚಾರುಕೀರ್ತಿ ಸೈಬಣ್ಣವರ, ಸಂತೋಷ ಪಾಟೀಲ, ಮಹಾವೀರ ಅಲಾರವಾಡ, ಶಾಂತು ಬೆಲ್ಲದ, ಅಪ್ಪಣ್ಣ ಪಾಟೀಲ, ಚಂದಾ ದೊಡ್ಡಪರಪ್ಪ, ಆನಂದ ಕಂಗಳಿಗೌಡ, ಬಾಹುಬಲಿ, ದೇಸಾಯಿ, ಅಣ್ಣಾಸಾಹೇಬ್ ದೇಸಾಯಿ, ರಾಜು ದೇಸಾಯಿ, ಧರಣೇಂದ್ರ ಪಾಯಕ್ಕಾ, ಮಹಾವೀರ ಬಸ್ತವಾಡ, ಸರ್ಜು ಕಂಗಳಿಗೌಡ, ಭರತೇಶ ಬೆಲ್ಲದ, ಧರಣೇಂದ್ರ ಚಿಕ್ಕಪರಪ್ಪ, ಮಹಾವೀರ ಬೆಲ್ಲದ, ದೇವೆಂದ್ರ ಬೆಲ್ಲದ, ಬಾಹುಬಲಿ ಕಳ್ಳಿಮನಿ, ಮನೋಹರ ಬಾಂಡಗಿ, ಮಹಾವೀರ ಪಾಟೀಲ, ನಾಗಯ್ಯ ಸಾಮಿಗೋಳ ಮುಂತಾದವರು ಉಪಸ್ಥಿತರಿದ್ದರು.

​ 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button