ಪ್ರಕೃತಿ ವಿಕೋಪ ಪರಿಹಾರದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ಪ್ರಸ್ತುತ ಬೆಳಗಾವಿ ಸೇರಿದಂತೆ ಜಿಲ್ಲೆಯಾಧ್ಯಂತ ಅತಿವೃಷ್ಠಿ ಪ್ರವಾಹದಿಂದ ಜನರು ಕಷ್ಟಗಳನ್ನು ಅನುಭವಿಸುತ್ತಿದ್ದು, ಮನೆ, ಮಠಗಳನ್ನು ಕಳೆದಕೊಂಡು ಸರ್ಕಾರ ನಿರ್ಮಿಸಿರುವ ಗಂಜಿ ಕೇಂದ್ರಗಳಲ್ಲಿ ಆಶ್ರಯವನ್ನು ಪಡೆದಿದ್ದಾರೆ.
ನೀರಿನ ಪ್ರವಾಹದಿಂದ ಕಷ್ಟದಲ್ಲಿ ಸಿಲುಕಿರುವ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವ ಕಾರ‍್ಯದಲ್ಲಿ ಆರ್.ಎಸ್.ಎಸ್ ಸ್ವಯಂಸೇವಕರು ಸ್ವಯಂಪ್ರೇರಿತರಾಗಿ ತಮ್ಮನ್ನು ತೊಡಗಿಸಿಕೊಂಡು ನಿರಾಶ್ರಿತರಿಗೆ ಮೂಲ ಸೌಲಭ್ಯಗಳಾದ ಆಹಾರ, ಔಷಧಿ, ಹೊದಿಕೆ, ನೀರು ಇತ್ಯಾದಿಗಳನ್ನು ಪೂರೈಸುವ ಹೊಣೆಯನ್ನು ಹೊತ್ತುಕೊಂಡಿದ್ದಾರೆ.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಜೊತೆಯಲ್ಲಿ ರೋಟರಿ ಕ್ಲಬ್, ಲೈನ್ಸ ಕ್ಲಬ್, ಕ್ರೆಡೈ ಸೇರಿದಂತೆ ಇನ್ನು ಹತ್ತು ಹಲವಾರು ಸ್ವಯಂಸೇವಾ ಸಂಸ್ಥೆಗಳು ಆಹಾರ, ಹೊದಿಕೆ, ಔಷಧಿ ಇತ್ಯಾದಿ ಅಗತ್ಯ ವಸ್ತುಗಳನ್ನು ನೀಡುವ ಮೂಲಕ ತಮ್ಮ ಸಹಾಯ ಸಹಕಾರವನ್ನು ನೀಡಿವೆ.
ಆರ್.ಎಸ್.ಎಸ್. ನಿಸರ್ಗ ವಿಕೋಪ ರಕ್ಷಣಾ ತಂಡ ಹಾಗೂ ಸರ್ಕಾರದೊಂದಿಗೆ ಕೈಜೋಡಿಸಿ ಸುರಕ್ಷಿತ ಸ್ಥಳಗಳಿಗೆ ಜನರನ್ನು ಮುಟ್ಟಿಸುವದಲ್ಲದೆ ಅವರ ಮುಂದಿನ ಜೀವನೋಪಾಯಕ್ಕೆ ಮುನ್ನುಡಿಯನ್ನು ಬರೆಯಲು ನಿರ್ಧರಿಸಿದೆ.
ಪ್ರಸ್ತುತ ಚಿಕ್ಕೋಡಿ, ಗೋಕಾಕ, ನಿಪ್ಪಾಣಿ, ಸೇರಿದಂತೆ ಬೆಳಗಾವಿ ಜಿಲ್ಲೆಯ ಹಲವಾರು ಗ್ರಾಮಗಳಲ್ಲಿ ಅತಿವೃಷ್ಠಿ ಪ್ರವಾಹದಿಂದ ನೀರು ನುಗ್ಗಿದ್ದು ಜನರು ಮನೆ ಮಠ ಜಾನುವಾರಗಳನ್ನು ಕಳೆದುಕೊಂಡಿದ್ದು ಈ ವರೆಗೆ ಆರ್.ಎಸ್.ಎಸ್ ಸ್ವಯಂ ಸೇವಕರು 18000 ಆಹಾರ ಪೊಟ್ಟಣಗಳನ್ನು ಹಾಗೂ 8001 ಹೊದಿಕೆಗಳನ್ನು ಮತ್ತು 20 ಲೀಟರನ 130 ನೀರಿನ ಕ್ಯಾನಗಳನ್ನು ಅತಿವೃಷ್ಠಿ ಪ್ರವಾಹ ಪೀಡಿತ ಗೋಕಾಕ, ರಾಮದುರ್ಗ, ಚಿಕ್ಕೋಡಿ, ಮುನವಳ್ಳಿ ಸೇರಿದಂತೆ ಇತರ ಗ್ರಾಮಗಳಿಗೆ ಖುದ್ದಾಗಿ ತೆರಳಿ ಪ್ರವಾಹ ಪೀಡಿತ ಜನರಲ್ಲಿ ಧೈರ‍್ಯವನ್ನು ಹೇಳುವ ಮೂಲಕ ಅವಶ್ಯವಿರುವ ವಸ್ತುಗಳನ್ನು ಪೂರೈಸುತ್ತಿದ್ದಾರೆ.
ಬೆಳಗಾವಿ ಜಿಲ್ಲೆಯಾಧ್ಯಂತ 68 ಆರ್.ಎಸ್.ಎಸ್ ಶಾಖೆಗಳು ಕಾರ‍್ಯ ನಿರ್ವಹಿಸುತ್ತಿದ್ದು, ಆಯಾ ತಾಲೂಕಿನ ಶಾಖೆಗಳ ಸ್ವಯಂಸೇವಕರು ಅತಿ ಶೀಘ್ರದಲ್ಲಿ ಅತಿವೃಷ್ಠಿಯ ಗ್ರಾಮಗಳಲ್ಲಿ ಕಷ್ಟದಲ್ಲಿರುವ ಜನರನ್ನು ಸ್ಫಂದಿಸಲು ಸಾಧ್ಯವಾಗುತ್ತಿದೆ. ಇದರ ಮೇಲುಸ್ತುವಾರಿಯನ್ನು ಬೆಳಗಾವಿಯ ಆರ್.ಎಸ್.ಎಸ್. ಮುಖ್ಯ ಶಾಖೆಯ ಅನೇಕ ಪ್ರಮುಖರು ವಹಿಸಿಕೊಂಡಿದ್ದು ಇಬ್ಬರು ವೈಧ್ಯರು ಕೂಡ ತಂಡದಲ್ಲಿದ್ದು, ಹಗಲು ರಾತ್ರಿಯೆನ್ನದೆ ಗಂಭೀರ ಪರಿಸ್ಥತಿಯನ್ನು ನಿಭಾಯಿಸುತ್ತಿದ್ದಾರೆ.
ಸಾರ್ವಜನಿಕರು ಈ ಸಂದರ್ಭದಲ್ಲಿ ಸಂತ್ರಸ್ಥರಿಗೆ ಸಹಾಯ ಸಹಕಾರವನ್ನು ನೀಡಬಹುದಾಗಿದ್ದು, ಇಚ್ಛೆವುಳ್ಳವರು ಗೂಡಶೆಡ್ ರಸ್ತೆಯಲ್ಲಿರುವ ಆರ್.ಎಸ್.ಎಸ್ ಕಾರ‍್ಯಾಲಯಕ್ಕೆ ಸಂಪರ್ಕಿಸಬಹುದಾಗಿದೆ. ಅಥವಾ ಆರ್.ಎಸ್.ಎಸ್ ಸಂಚಾಲಿತ ಸಂತ್ರಸ್ತ ಪರಿಹಾರ ನಿಧಿ, ಕ್ಯಾನರಾ ಬ್ಯಾಂಕ ಸ್ಟೇಶನ್ ರೋಡ, ಹುಬ್ಬಳ್ಳಿ ಖಾತೆ ಸಂ.೦೫೧೪೧೦೧೦೪೨೮೮೦ ನೇರವಾಗಿ ನಗದನ್ನು ವರ್ಗಾಯಿಸಬಹುದಾಗಿದೆ. ತಾವು ವರ್ಗಾಯಿಸಿದ ಮೊತ್ತಕ್ಕೆ ಆದಾಯ ತೆರಿಗೆ ವಿನಾಯಿತಿಯೂ ಇರುತ್ತದೆ ಎಂದು ಆರ್.ಎಸ್.ಎಸ್.ಕಾರ‍್ಯಾಲಯ ತಿಳಿಸಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ