Kannada NewsKarnataka NewsLatest

*ಬೆಳಗಾವಿ: ಬೃಹತ್ ಶೋಭಾಯಾತ್ರೆಗೆ ಅರ್ಜಿ ವಜಾಗೊಳಿಸಿದ ಹೈಕೋರ್ಟ್*

ಪ್ರಗತಿವಾಹಿನಿ ಸುದ್ದಿ: ಅಯೋಧ್ಯೆಯಲ್ಲಿ ನಾಳೆ ಭವ್ಯ ರಾಮ ಮಂದಿರ ಉದ್ಘಾಟನೆ ಹಾಗೂ ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ ನಡೆಯಲಿದೆ. ಐತಿಹಾಕಿಸ ಕ್ಷಣಕ್ಕೆ ಕ್ಷಣಗಣನೆ ಆರಂಭವಾಗಿದೆ.

ಈ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ನಾಳೆ ಬೃಹತ್ ಶೋಭಾಯಾತ್ರೆ ಆಯೋಜಿಸಲಾಗಿತ್ತು. ಆದರೆ ಹೈಕೋರ್ಟ್ ವಿಭಾಗೀಯ ಪೀಠ ಅನುಮತಿ ನಿರಾಕರಿಸಿದೆ.

Home add -Advt

ನಾಳೆ ಶೋಭಾಯಾತ್ರೆಗೆ ನಡೆಸಲು ಅನುಮತಿ ನಿರಾಕರಿಸಿರುವ ಹೈಕೋರ್ಟ್ ಧಾರವಾಡ ಪೀಠದ ವಿಭಾಗೀಯ ಪೀಠ, ಅರ್ಜಿ ವಜಾಗೊಳಿಸಿ ಆದೇಶ ಹೊರಡಿಸಿದೆ.

ಶ್ರೀರಾಮ ಸೇನೆ ಹಿಂದೂಸ್ತಾನ್ ವತಿಯಿಂದ ಅಧ್ಯಕ್ಷ ರಮಾಕಾಂತ್ ಕೊಂಡುಸ್ಕರ್ ನೇತೃತ್ವದಲ್ಲಿ ನಾಳೆ ಬೆಳಗಾವಿಯಲ್ಲಿ ಮಧ್ಯಾಹ್ನದಿಂದ ರಾತ್ರಿ 9ಗಂಟೆಯವರೆಗೆ ಬೃಹತ್ ಶೋಭಾಯಾತ್ರೆ ಆಯೋಜಿಸಲಾಗಿತ್ತು.

ನಗರದ ಸಂಬಾಜಿ ವೃತ್ತದಿಂದ ಶಹಾಪುರದವರೆಗೂ ಶೋಭಾಯಾತ್ರೆ ನಡೆಯಲಿತ್ತು. ಆದರೆ ಕಾನೂನು ಸುವಸ್ಥೆ ದೃಷ್ಟಿಯಿಂದ ಶೋಭಾಯಾತ್ರೆಗೆ ಪೊಲೀಸರು ಅನುಮತಿ ನಿರಾಕರಿಸಿದ್ದರು. ಪೊಲೀಸರ ಕ್ರಮ ಪ್ರಶ್ನಿಸಿ ರಮಾಕಾಂತ್ ಕೊಂಡುಸ್ಕರ್ ಹೈಕೋರ್ಟ್ ವಿಭಾಗೀಯ ಪೀಠಕ್ಕೆ ಅರ್ಜಿ ಸಲ್ಲಿಸಿದ್ದರು. ಇದೀಗ ಹೈಕೋರ್ಟ್ ವಿಭಾಗೀಯ ಪೀಠ ಕೂಡ ಅರ್ಜಿ ವಜಾಗೊಳಿಸಿದೆ.

Related Articles

Back to top button