ಪ್ರಗತಿವಾಹಿನಿ ಸುದ್ದಿ; ರಾಯಚೂರು: ರಾಯಚೂರಿನ ಆರ್ ಟಿ ಪಿ ಎಸ್ ಶಾಖೋತ್ಪನ್ನ ಕೇಂದ್ರದಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ವಿದ್ಯುತ್ ಉತ್ಪಾದನೆ ವೇಳೆ ಕಲ್ಲಿದ್ದಲು ಸಾಗಿಸುವ ಕೋಲ್ ಬೆಲ್ಟ್ ಹೊತ್ತಿ ಉರಿದಿದೆ.
ಕಲ್ಲಿದ್ದಲು ಉರಿಸುವ ಒಲೆಗೆ ಉರುವಲು ಸರಬರಾಜು ಮಾಡುವ ಸುಮಾರು 25 ಕನ್ ವೇಯರ್ ಬೆಲ್ಟ್ ಗಳು ಹೊತ್ತಿ ಉರಿದಿವೆ. ಘಟಕದ 5 ಹಾಗೂ 8ನೇ ಘಟಕಕ್ಕೆ ಕಲ್ಲಿದ್ದಲು ಸರಬರಾಜು ಸ್ಥಗಿತಗೊಂಡಿದ್ದು, ವಿದ್ಯುತ್ ಉತ್ಪಾದನೆಯಲ್ಲಿ ವ್ಯತ್ಯಯವಾಗಿದೆ.
ಸ್ಥಳದಲ್ಲಿದ್ದ ಸಿಬ್ಬಂದಿಗಳು ತಕ್ಷಣ ಕಾರ್ಯಪ್ರವೃತ್ತರಾಗಿ ಅನಾಹುತವೊಂದನ್ನು ತಪ್ಪಿಸಿದ್ದಾರೆ. ರಾಯಚೂರು ವಿದ್ಯುತ್ ಘಟಕದಲ್ಲಿ 8 ವಿದ್ಯುತ್ ಘಟಕಗಳಿದ್ದು ಇಂದು ಬೆಳಿಗ್ಗೆ ವಿದ್ಯುತ್ ಉತ್ಪಾದನೆ ವೇಳೆಯೇ ಈ ಅವಘಡ ಸಂಭವಿಸಿದೆ.
ಆರ್ ಟಿ ಪಿ ಎಸ್ ಸಿಬ್ಬಂದಿಗಳ ಜೊತೆ ಅಗ್ನಿಶಾಮಕ ಸಿಬ್ಬಂದಿಗಳು ಕೈ ಜೋಡಿಸಿ ಬೆಂಕಿಯನ್ನು ನಂದಿಸಿದ್ದಾರೆ. ಸಂಭವಿಸಲಿದ್ದ ಭಾರಿ ಅನಾಹುತ ಸ್ವಲ್ಪದರಲ್ಲಿ ತಪ್ಪಿದೆ.
ಹಿಂದೂ ಪದದ ಬಗ್ಗೆ ವಿವಾದಾತ್ಮಕ ಹೇಳಿಕೆ; ಸ್ಪಷ್ಟನೆ ನೀಡಿದ ಶಾಸಕ ಸತೀಶ್ ಜಾರಕಿಹೊಳಿ
https://pragati.taskdun.com/politics/satish-jarakiholiclarificationhindhu-dharma/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ