ವಿಶ್ವದಲ್ಲಿಯೇ ಮೊದಲ ಬಾರಿಗೆ ಕೆಎಲ್ಇ ಆಸ್ಪತ್ರೆಯಲ್ಲಿ ಆರ್‌ಟಿಎಸ್ ಕಾರ್ಬೆಟೋಸಿನ್ ಚುಚ್ಚುಮದ್ದು

ಕೆ.ಎಲ್.ಇ. ಜವಾಹರಲಾಲ ನೆಹರು ವೈದ್ಯಕೀಯ ಮಹಾವಿದ್ಯಾಲಯ, ಬೆಳಗಾವಿಯಲ್ಲಿ ಆರ್‌ಟಿಎಸ್ ಕಾರ್ಬೆಟೋಸಿನ್‌ನ ಜಾಗತಿಕ ಅನಾವರಣ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಗರ್ಭಿಣಿ ಮಹಿಳೆಯರಿಗೆ ಹೆರಿಗೆಯಾದ ನಂತರ ಉಂಟಾಗುವ ಅಧಿಕ ರಕ್ತಸ್ರಾವವನ್ನು (ಪ್ರಸವಾನಂತರದ ರಕ್ತಸ್ರಾವ ಪಿಪಿಎಚ್) ತಡೆಗಟ್ಟಲು ಬಳಸುವ ಆರ್.ಟಿ.ಎಸ್ ಕಾರ್ಬೆಟೋಸಿನ್‌ನ ಜಾಗತಿಕ ಅನಾವರಣವನ್ನು ಬೆಳಗಾವಿಯ ಕೆ.ಎಲ್.ಇ. ಉನ್ನತ ಶಿಕ್ಷಣ ಹಾಗೂ ಸಂಶೋಧನಾ ಅಕಾಡೆಮಿ ಡೀಮ್ಡ್ ವಿಶ್ವವಿದ್ಯಾಲಯ, ಜವಾಹರಲಾಲ ನೆಹರು ವೈದ್ಯಕೀಯ ಮಹಾವಿದ್ಯಾಲಯದ ಮಹಿಳೆಯರ ಮತ್ತು ಮಕ್ಕಳ ಆರೋಗ್ಯ ಸಂಶೋಧನಾ ಘಟಕದ ವತಿಯಿಂದ ಜುಲೈ ೨೩, ೨೦೨೧ರಂದು ಜೆಎನ್‌ಎಂಸಿ ಕ್ಯಾಂಪಸನ್ ಕೆಎಲ್‌ಇ ಕನ್ವನ್ಷನ್ ಸೆಂಟರ್ ನಲ್ಲಿ ಆಯೋಜಿಸಲಾಗಿತ್ತು.
ಆರ್‌ಟಿಎಸ್ ಕಾರ್ಬೆಟೋಸಿನ್‌ನ ಚುಚ್ಚುಮದ್ದನ್ನು ವಿಶ್ವದಲ್ಲಿಯೇ ಮೊದಲ ಬಾರಿಗೆ ಇದೇ ದಿನದಂದು ಕೆಎಲ್‌ಇ ಡಾ. ಪ್ರಭಾಕರ್ ಕೋರೆ ಚಾರಿಟೇಬಲ್ ಆಸ್ಪತ್ರೆಯಲ್ಲಿ ನೀಡಲಾಯಿತು. ಜೆಎನ್‌ಎಂಸಿ ಮಹಿಳಾ ಮತ್ತು ಮಕ್ಕಳ ಆರೋಗ್ಯ ಸಂಶೋಧನಾ ಘಟಕವು ಕೆಎಲ್‌ಇ ಡಾ. ಪ್ರಭಾಕರ್ ಕೋರೆ ಚಾರಿಟೇಬಲ್ ಆಸ್ಪತ್ರೆಗೆ ಮೊದಲ ಬ್ಯಾಚ್‌ನ ೧೦೦೦ ಆಂಪ್ಯೂಲ್‌ಗಳನ್ನು ಉಚಿತವಾಗಿ ನೀಡಿದೆ.
ಈ ಸಮಾರಂಭದ ಅಧ್ಯಕ್ಷತೆಯನ್ನು ಬೆಳಗಾವಿಯ ಕೆಎಲ್‌ಇ ಸೊಸೈಟಿಯ ಕಾರ್ಯಾಧ್ಯಕ್ಷರು ಮತ್ತು ಕೆ.ಎಲ್.ಇ. ಉನ್ನತ ಶಿಕ್ಷಣ ಹಾಗೂ ಸಂಶೋಧನಾ ಅಕಾಡೆಮಿ ಡೀಮ್ಡ್ ವಿಶ್ವವಿದ್ಯಾಲಯದ ಗೌರವಾನ್ವಿತ ಕುಲಾಧಿಪತಿಗಳಾದ ಡಾ. ಪ್ರಭಾಕರ್ ಕೋರೆಯವರು ವಹಿಸಿದ್ದರು.
ಪ್ರಮುಖ ಪ್ರಸೂತಿ ತಜ್ಞರೂ, ಭಾರತದ ಪ್ರಸೂತಿ ಹಾಗೂ ಸ್ತ್ರೀರೋಗ ತಜ್ಞರ ರಾಷ್ಟ್ರೀಯ ಸಂಸ್ಥೆ FOGSIಯ ಅಧ್ಯಕ್ಷರು ಹಾಗೂ ಹೈದರಾಬಾದಿನ ಯಶೋಧಾ ಆಸ್ಪತ್ರೆಗಳ ಹಿರಿಯ ಪ್ರಸೂತಿ ತಜ್ಞರಾದ ಡಾ. ಶಾಂತಾ ಕುಮಾರಿ, ಬೆಂಗಳೂರಿನ ದಿವಾಕರ್ ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರು ಹಾಗೂ ಗರ್ಭಧಾರಣೆ ಮತ್ತು ಎನ್‌ಸಿಡಿ ಸಮಿತಿಯ ಸಲಹೆಗಾರರು ಆದ ಡಾ. ಹೇಮಾ ದಿವಾಕರ್, FOGSIಯ ಪೂರ್ವ ಉಪಾಧ್ಯಕ್ಷರು ಹಾಗೂ ಗವರ್ನಿಂಗ್ ಕೌನ್ಸಿಲ್ ಸದಸ್ಯರಾದ ಡಾ. ಶೀಲಾ ಮಾನೆ, ಕರ್ನಾಟಕ ರಾಜ್ಯ ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರ ಸಂಘದ ಅಧ್ಯಕ್ಷರಾದ ಡಾ. ಬಸವರಾಜ ಸಜ್ಜನ್ ಹಾಗೂ ಸ್ವಿಡ್ಜ್‌ರ್‌ಲ್ಯಾಂಡ್ ಫೆರಿಂಗ್ ಫಾರ್ಮಾಸ್ಯುಟಿಕಲ್ಸ್ ಪ್ರತಿನಿಧಿಗಳಾದ ಸುಧೀಂದ್ರ ಕುಲಕರ್ಣಿ, ಭಾವಿನ್ ವೈದ್ಯ, ಡಾ. ವಿಶಾಲ ರಾವ್, ಒಲೆಗ್ ಜುರೋವ್, ಮಿಸ್ ಮೋನಿಕ್ಕ್ಯೂ ಬ್ಲಾಮ್ ಮುತ್ತು ಆಲೋಕ್ ದೇವ್ ಭಾಗವಹಿಸಿ ಹಿತನುಡಿಗಳನ್ನಾಡಿದರು.
ಕೆ.ಎಲ್.ಇ. ಉನ್ನತ ಶಿಕ್ಷಣ ಹಾಗೂ ಸಂಶೋಧನಾ ಅಕಾಡೆಮಿ ಡೀಮ್ಡ್ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ವಿವೇಕ ಸಾವಜಿ ಅವರು ಪರಿಚಯಾತ್ಮಕವಾಗಿ ಮಾತನಾಡಿದರು. ಜೆಎನ್‌ಎಂಸಿ ಮಹಿಳಾ ಮತ್ತು ಮಕ್ಕಳ ಆರೋಗ್ಯ ಸಂಶೋಧನಾ ಘಟಕದ ನಿರ್ದೇಶಕರಾದ ಡಾ. ಶಿವಪ್ರಸಾದ್ ಎಸ್. ಗೌಡರ ಅವರು ಪ್ರಸವಾನಂತರದ ರಕ್ತಸ್ರಾವವನ್ನು ತಡೆಗಟ್ಟುವ ಸಂಶೋಧನೆಗಳ ಹಿನ್ನಲೆಯನ್ನು ವಿವರಿಸಿದರು.
ಕಾಹೆರ್‌ನ ಕುಲಸಚಿವರಾದ ಡಾ. ವಿ. ಎ. ಕೋಟಿವಾಲೆ ಹಾಗೂ ಜೆಎನ್‌ಎಂಸಿಯ ಪ್ರಾಂಶುಪಾಲರಾದ ಡಾ. ಎನ್. ಎಸ್. ಮಹಾಂತಶೆಟ್ಟಿಯವರು ಅತಿಗಳನ್ನು ಸನ್ಮಾನಿಸಿದರು. ಹಿರಿಯ ಸಂಶೋಧನಾ ಅಧಿಕಾರಿಗಳಾದ ಡಾ. ಎನ್. ವಿ. ಹೊನ್ನುಂಗಾರ್ ಅವರನ್ನು ತಾಯಿ ಮತ್ತು ಮಕ್ಕಳ ಆರೋಗ್ಯ ಸಂಶೋಧನೆಗಾಗಿ ನೀಡಿದ ಸೇವೆಯನ್ನು ಗುರುತಿಸಿ ಸನ್ಮಾನಿಸಲಾಯಿತು.
ದೇಶಾದ್ಯಂತ ಪ್ರಸ್ತುತ ಅಧ್ಯಯನದಲ್ಲಿ ಭಾಗವಹಿಸಿದ ಸಂಶೋಧನಾ ಅಧಿಕಾರಿಗಳು ಪ್ರಸೂತಿ ತಜ್ಞರು ವೈದ್ಯರು ಈ ಕಾರ್ಯಕ್ರಮದಲ್ಲಿ ನೇರವಾಗಿ ಹಾಗೂ ಆನ್‌ಲೈನ್ ಮುಖಾಂತರವಾಗಿ ಭಾಗವಹಿಸಿದರು. ಸ್ತ್ರೀ ರೋಗ ಶಾಸ್ತ್ರ ಪ್ರಾಧ್ಯಾಪಕರಾದ ಡಾ. ಯಶಿತಾ ಪೂಜಾರ ಅವರು ವಂದನಾರ್ಪಣೆಯನ್ನು ಸಲ್ಲಿಸಿದರು. ಸಮುದಾಯ ವೈದ್ಯಕೀಯ ವಿಭಾಗದ ಸಹ ಪ್ರಧ್ಯಾಪಕರಾದ ಡಾ. ಅವಿನಾಶ್ ಕವಿಯವರು ಕಾರ್ಯಕ್ರಮವನ್ನು ನಿರೂಪಿಸಿದರು.
ಇನ್ನೊಂದು ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ –
Global Launch of RTS Carbetocin Ferring at KLE-JNMC, Belagavi
ಯಾವೊಬ್ಬ ತಾಯಿಯೂ ಹೆರಿಗೆ ವೇಳೆ ಸಾಯಬಾರದು – ಡಾ. ಹೇಮಾ ದಿವಾಕರ್
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ