Belagavi NewsBelgaum NewsPolitics

*ಆಡಳಿತ ಪಕ್ಷದ ಮುಖಂಡರು ಉತ್ತರ ಕರ್ನಾಟಕದ ಬಗ್ಗೆ ಚರ್ಚೆ ಮಾಡಲು ತಯಾರಿಲ್ಲ; ವಿಜಯೇಂದ್ರ ಆರೋಪ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಸರ್ಕಾರಕ್ಕೆ ಉತ್ತರ ಕರ್ನಾಟಕದ‌ ಬಗ್ಗೆ ಸಮಗ್ರ ಚರ್ಚೆ ಮಾಡುವ ವ್ಯವಧಾನವೂ ಇಲ್ಲ. ಅಧಿವೇಶನ ಆರಂಭಕ್ಕೂ‌ ಮುನ್ನ‌ ವಿಪಕ್ಷ ಒತ್ತಾಯ ಮಾಡಿತ್ತು. ಇಂದು ಮತ್ತು‌ ನಾಳೆ ಈ‌ ಬಗ್ಗೆ ಚರ್ಚೆ ಮಾಡುವುದಾಗಿ ಸಭಾಧ್ಯಕ್ಷರು ಭರವಸೆ ನೀಡಿದ್ದಾರೆ. ಆದ್ರೆ ಈ ನಡುವೆ ಆಡಳಿತ ಪಕ್ಷದ ಮುಖಂಡರು ಯಾವುದೆ ಚರ್ಚೆ ಮಾಡುವುದಕ್ಕೆ ತಯಾರಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.

ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನನ್ನ ಬಗ್ಗೆ ಮುನಿರತ್ಮ‌ ಬಗ್ಗೆ ಚರ್ಚೆ ಮಾಡುವ ಕುರಿತು ಸಚಿವರು, ಶಾಸಕರು ಮುಂದಾಗಿದ್ದಾರೆ. ಆದ್ರೆ ನಾವು ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ಬಿಜೆಪಿ ಹಾಗೂ ಜೆಡಿಎಸ್ ಸದನದಲ್ಲಿ ಉತ್ತರ ಕರ್ನಾಟಕ‌ಭಾಗದ ಚರ್ಚೆ ಮಾಡೇ ಮಾಡುತ್ತೇವೆ. ರಾಜ್ಯದಲ್ಲಿ ಕಬ್ಬು‌ಬೆಳೆಗಾರರು, ತೊಗರಿ ಬೆಳೆಗಾರರು‌ ಸಂಕಷ್ಟದಲ್ಲಿದ್ದಾರೆ. ಗುಲ್ಬರ್ಗಾ ಜಿಲ್ಲೆಯಲ್ಲಿಯೇ ಅತೀ ಹೆಚ್ಚು ತೊಗರೆ ಬೆಳೆ ನಾಶವಾಗಿದೆ. ರೈತರಿಗೆ ಪರಿಹಾರ ನೀಡುವ ವಿಚಾರವಾಗಿ ಸರ್ಕಾರ ಮುಂದಾಗಬೇಕು ಎಂದರು.

ವಿಜಯೇಂದ್ರ ಮೇಲೆ 150 ಕೋಟಿ ಆರೋಪ ವಿಚಾರವಾಗಿ ಮಾತನಾಡಿದ ಅವರು, ಈ‌ ಬಗ್ಗೆ ಪ್ರಿಯಾಂಕ್ ಖರ್ಗೆ ಸದನದಲ್ಲಿ ಆರೋಪ ಮಾಡಿದ್ದಾರೆ. ನಾನು ಸದನದಲ್ಲೇ ಉತ್ತರ ನೀಡುತ್ತೇನೆ ಎಂದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button