Latest

ಕ್ರಿಕೇಟ್ ಈಗಿನಂತಿದ್ದರೆ ಸಚಿನ್ 1 ಲಕ್ಷ ರನ್ ಬಾರಿಸುತ್ತಿದ್ರು ಎಂದ ಶೋಯೆಬ್ ಅಕ್ತರ್

ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಅಂತರಾಷ್ಟ್ರೀಯ ಕ್ರಿಕೇಟ್‌ನಲ್ಲಿ ಐಸಿಸಿ ಇತ್ತೀಚಿನ ದಿನಗಳಲ್ಲಿ ತಂದಿರುವ ಕೆಲ ಬದಲಾವಣೆಗಳ ಬಗ್ಗೆ ರಾವಲ್ಪಿಂಡಿ ಎಕ್ಸ್ಪ್ರೆಸ್ ಖ್ಯಾತಿಯ ಪಾಕಿಸ್ತಾನದ ಮಾಜಿ ವೇಗಿ ಶೋಯಬ್ ಅಕ್ತರ ತೀವ್ರ ಟೀಕೆ ವ್ಯಕ್ತಪಡಿಸಿದ್ದಾರೆ. ಬ್ಯಾಟ್ಸ್ ಮನ್ ಗಳಿಗೆ ಅನುಕೂಲ ಕಲ್ಪಿಸುವ ಇಂತಹ ನಿಯಮಗಳು ನಮ್ಮ ಸಮಯದಲ್ಲಿ ಇದ್ದಿದ್ದರೆ ಸಚಿನ್ ತೆಂಡೂಲ್ಕರ್ 1 ಲಕ್ಷ ರನ್ ಸಿಡಿಸುತ್ತಿದ್ದರು ಎಂದೂ ಅವರು ಹೇಳಿದ್ದಾರೆ.

ತಮ್ಮ ಅಧೀಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿರುವ ಶೋಯೆಬ್, ಏಕದಿನ ಪಂದ್ಯಗಳಲ್ಲಿ ಈಗ 2 ಹೊಸ ಬಾಲ್‌ಗಳನ್ನು ನೀಡುತ್ತಿರುವುದು ಬ್ಯಾಟ್ಸವiನ್‌ಗಳಿಗೆ ಅನುಕೂಲಕರವಾಗಿದೆ. ಬೌಲರ್‌ಗಳು ವಿಕೇಟ್ ಕೀಳಲು ಪರದಾಡುವಂತಾಗಿದೆ. ಐಸಿಸಿ ತಂದಿರುವ ಹೊಸ ನಿಯಮಗಳು ಕೇವಲ ಬ್ಯಾಟರ್‌ಗಳಿಗೆ ಅನುಕೂಲ ಕಲ್ಪಿಸಿದೆ ಎಂದಿದ್ದಾರೆ.

ಇನ್ನು ಟೆಸ್ಟ್ ಮ್ಯಾಚ್‌ಗಳಲ್ಲಿ ಮೂರು ರಿವ್ಯೂಗಳಿಗೆ ಅವಕಾಶ ನೀಡಿರುವುದು ಸಹ ಬ್ಯಾಟ್ಸö್ಮನ್‌ಗಳಿಗೆ ಹೆಚ್ಚು ಅನುಕೂಲ ಕಲ್ಪಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ಸಚಿನ್ ಹಾಡಿಹೊಗಳಿದ ಶೋಯೆಬ್

Home add -Advt

ಇದೇ ವೇಳೆ ಭಾರತೀಯ ಕ್ರಿಕೇಟ್‌ನ ದೇವರು ಎಂದೇ ಖ್ಯಾತಿ ಪಡೆದಿರುವ ಸಚಿನ್ ತೆಂಡೂಲ್ಕರ್ ಅವರನ್ನು ಶೋಯೆಬ್ ಹಾಡಿಹೊಗಳಿದ್ದಾರೆ. ಸಚಿನ್ ಕ್ರಿಕೇಟ್‌ಗೆ ಪಾದಾರ್ಪಣೆ ಮಾಡಿದಾಗ ವಸೀಂ ಅಕ್ರಂ, ವಕಾರ್ ಯೂನಸ್, ಬ್ರೆಟ್‌ಲಿ ಮೊದಲಾದ ವೇಗಿಗಳನ್ನು ಎದುರಿಸಬೇಕಾಯಿತು. ಅವರು ಎರಡನೇ ತಲೆಮಾರಿನ ಬೌಲರ್‌ಗಳನ್ನು ಎದುರಿಸವಾಗ ಸಾಕಷ್ಟು ಗಟ್ಟಿಯಾಗಿ ನೆಲೆಯೂರಿದ್ದರು. ಇದು ಸಚಿನ್ ಅವರ ಬ್ಯಾಟಿಂಗ್ ಸಾಮರ್ಥ್ಯಕ್ಕೆ ಸಾಕ್ಷಿ ಎಂದಿದ್ದಾರೆ. ಒನ್ ಡೆಯಲ್ಲಿ ಸಚಿನ್ 18426 ರನ್ ಮತ್ತು ಟೆಸ್ಟ್ನಲ್ಲಿ ಒಟ್ಟು 15921 ರನ್‌ಗಳ ಮಳೆ ಹರಿಸಿದ್ದಾರೆ ಎಂದು ಶೋಯೆಬ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಐಪಿಎಲ್‌ಗೆ ಹೆಸರು ನೋಂದಾಯಿಸಿದ ಭೂತಾನ್‌ನ ಮೊದಲ ಕ್ರಿಕೇಟ್ ಆಟಗಾರನಿಗೆ ಎಂ. ಎಸ್. ಧೋನಿ ಕಿವಿಮಾತು

Related Articles

Back to top button