ದೊಡ್ಡಪತ್ರೆ ಗೊಜ್ಜು
ದೂಡ್ಡಪತ್ರೆಗೆ ಇನ್ನೊಂದು ಹೆಸರು ಸಾಂಬಾರ ಸೊಪ್ಪು. ಈ ಎಲೆಯಗೊಜ್ಜು ಅನ್ನದ ಜೊತೆ ಸೇವಿಸಲು ತುಂಬಾನೇ ಚೆನ್ನಾಗಿರುತ್ತೆ. ಖಾರಾ, ಹುಳಿ, ಸಿಹಿ ರುಚಿಯ ಗೊಜ್ಜು ಬಿಸಿ ಬಿಸಿ ಅನ್ನಕ್ಕೆ ಸೂಪರ್ ಆಗಿರುತ್ತೆ.
ಬೇಕಾದ ಸಾಮಗ್ರಿಗಳು:
ಸಂಬಾರ ಸೂಪ್ಪು 15-20 , ಹಸಿಮೆಣಸು 3-4, ಉದ್ದಿನ ಬೇಳೆ 1 ಚಮಚ, ಬಿಳಿಯಳ್ಳು ಅರ್ಧ ಚಮಚ, ಅರ್ಧ ಲಿಂಬುಗಾತ್ರದ ಹುಣಸೆ ಹಣ್ಣು, ಬೆಲ್ಲ 4 ಚಮಚ, 1ಸಣ್ಣ ಕಪ್ ಹಸಿ ಕೊಬ್ಬರಿ ತುರಿ, ರುಚಿಗೆ ಉಪ್ಪು.
ಮಾಡುವ ವಿಧಾನ:
ಉದ್ದಿನ ಬೇಳೆ, ಎಳ್ಳು , ಮೆಣಸನ್ನು ಸ್ವಲ್ಪ ಎಣ್ಣೆಹಾಕಿ ಹುರಿಯಬೇಕು. ದೊಡ್ಡಪತ್ರೆ ಎಲೆಯನ್ನು ಹಾಕಿ ಮತ್ತೆ ಸ್ವಲ್ಪ ಹುರಿಯ ಬೇಕು. ಎಲೆ ಬಾಡಿದನಂತರ ಹುಣಸೆಹಣ್ಣು ಕೊಬ್ಬರಿ ತುರಿ ಸೇರಿಸಿ ರುಬ್ಬಬೇಕು. ಉಪ್ಪು ಬೆಲ್ಲಸೇರಿಸಿ ಸ್ವಲ್ಪ ನೀರು ಹಾಕಿ ಕುದಿಸ ಬೇಕು.ಕೊನೆಯದಾಗಿ ಸಾಸಿವೆ ಒಣಮೆಣಸು ಹಾಕಿ ಓಗ್ಗರಣೆ ಕೊಡಬೇಕು. ದೊಡ್ಡಪತ್ರೆ ಗೊಜ್ಜು ಅನ್ನದ ಜೊತೆ ಸವಿಯಲು ತಯಾರಾಗಿದೆ. (ಹಸಿಮೆಣಿನ ಬದಲು ಒಣಮೆಣಸನ್ನು ಸಹ ಹಾಕಬಹುದು)
– ಸಹನಾ ಭಟ್,
ಸಹನಾಸ್ ಕಿಚನ್
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ