Kannada NewsKarnataka News

ಸಾಹಿತ್ಯ ಪ್ರತಿಷ್ಠಾನದ ಪ್ರಶಸ್ತಿ ಪ್ರಕಟ

 ಪ್ರಗತಿವಾಹಿನಿ ಸುದ್ದಿ, ಬೆಳಗಾವಿ– ಬೆಳಗಾವಿ ಜಿಲ್ಲಾ ಸಾಹಿತ್ಯ ಪ್ರತಿಷ್ಠಾನದ ಕಾರ್ಯಕಾರಿ ಮಂಡಳಿ ಸಭೆಯಲ್ಲಿ ೨೦೧೮ ನೇ ಸಾಲಿನ  ಪ್ರಶಸ್ತಿಗಳನ್ನು ಪ್ರಕಟಿಸಿದೆ. ಪ್ರತಿಷ್ಠಾನದ ಕಾರ್ಯದರ್ಶಿ ನೀರಜಾ ಗಣಾಚಾರಿ ಈ ಕುರಿತು ವಿವರ ನೀಡಿದ್ದಾರೆ.

ಪ್ರಶಸ್ತಿಗಳ ವಿವರ:-
೧. ೨೦೧೯ ನೇ ಸಾಲಿನ ಸಿರಿಗನ್ನಡ ಗೌರವ ಪ್ರಶಸ್ತಿ 

– * ಪ್ರೋ. ಎಮ್ ಆರ್ ಉಳ್ಳಾಗಡ್ಡಿ ಹಾಗೂ ಆರ್ ಟಿ ಜಂಗಲ್

೨. ೨೦೧೮ ನೇ ಸಾಲಿನ ಸಿರಿಗನ್ನಡ ಪುಸ್ತಕ ಪ್ರಶಸ್ತಿ

–  ಓಡಿಹೋದ ಹುಡುಗ ಮಕ್ಕಳ ಸಾಹಿತ್ಯ ಕೃತಿ -ಲೇಖಕರು ಡಾ. ಬಸು ಬೇವಿನಗಿಡದ
* ಗಾಂಧಿ ಪ್ರಸಂಗ ಕಥಾಸಂಕಲನ -ಲೇಖಕರು ಬಸವಣ್ಣೆಪ್ಪ ಕಂಬಾರ

೩. ೨೦೧೮ ನೇ ಸಾಲಿನ ವಿವಿಧ ದತ್ತಿ ಪ್ರಶಸ್ತಿಗಳು :-

ದಿ ರಾಮರಾವ ಶಿರಹಟ್ಟಿ ದತ್ತಿ ಪ್ರಶಸ್ತಿ – ಜಿಲ್ಲೆಯ ಲೆಖಕರ ಪ್ರಥಮ ಉತ್ತಮ ಕೃತಿಗೆ
-ನನ್ನೊಳಗಿನ ಬುದ್ಧ -ಕವನ ಸಂಕಲನಕ್ಕೆ -ಲೇಖಕಿ ಮಹಾನಂದ ಪಾಟೀಲ

ಕೆ ಚಂದ್ರ ಮೌಳಿ ದತ್ತಿ ಪ್ರಶಸ್ತಿ – ಪ್ರವಾಸ ಕಥನಕ್ಕೆ -ಕಿವಿಗಳ ನಾಡಿನಲ್ಲೊಂದು ಪ್ರವಾಸ ಕೃತಿಗೆ -ಲೇಖಕಿ ಶ್ವೇತಾ ನರಗುಂದ

ದಿ ಶ್ರೀದೇವಿ ದಾಸಪ್ಪ ಶಾನಭಾಗ ದತ್ತಿ ಪ್ರಶಸ್ತಿ -ಜಿಲ್ಲೆಯ ಲೇಖಕರ ಶ್ರೇಷ್ಠ ಅನುವಾದಿತ ಕೃತಿಗೆ
-ರಾಜರ್ಷಿ ಶಾಹು ಛತ್ರಪತಿ ಕೃತಿಗೆ -ಲೇಖಕರು ಡಾ. ಜೆ ಪಿ ದೊಡ್ಡಮನಿ

ಪ್ರಾ ಪ್ರಹ್ಲಾದಕುಮಾರ ಭಾಗೋಜಿ ದತ್ತಿ ಪ್ರಶಸ್ತಿ – ಜಿಲ್ಲೆಯ ಪ್ರತಿಭಾವಂತ ಸಾಹಿತಿಯ ಅವರ ಜೀವನಮಾನ ಸಾಧನೆಗಾಗಿ -ಡಾ. ಬಾಳಾಸಾಹೇಬ ಲೋಕಾಪುರ, ಅಥಣಿ

ದಿ ಡಾ ಹಣಮಂತರಾವ್ ಸವಣೂರ ಸ್ಮಾರಕ ದತ್ತಿ ಪ್ರಶಸ್ತಿ  -ಶ್ರೇಷ್ಠ ಕಥಾಸಂಕಲನಕ್ಕೆ -ಜಾಳಪೋಳ
-ಲೇಖಕರು  ವಾಮನ ಕುಲಕರ್ಣಿ

 ಎಸ್ ಎಮ್ ಕುಲಕರ್ಣಿ ಷಷ್ಠಬ್ಧಿ ಸಮಿತಿ ದತ್ತಿ ಪ್ರಶಸ್ತಿ – ಜಿಲ್ಲೆಯ ಲೇಖಕರ ಶ್ರೇಷ್ಠ ಸೃಜನೇತರ ಕೃತಿಗೆ -ಬಸವಣ್ಣನವರ ವಚನಗಳಲ್ಲಿ ರೂಪಕಗಳು -ಲೇಖಕರು ಡಾ. ಶ್ರೀನಿವಾಸ ಕುಲಕರ್ಣಿ

ದಿ ಚಂದ್ರವ್ವ ಧರ್ಮಾಜಿ ಅನಗೋಳ ದತ್ತಿ ಪ್ರಶಸ್ತಿ – ಜಿಲ್ಲೆಯ ಲೇಖಕಿಯರ ಶ್ರೇಷ್ಠ ಕೃತಿಗೆ  –
ಹೀಗೊಂದು ಗ್ರಾಮಾಯಣ ಕಾದಂಬರಿ -ಲೇಖಕಿ  ಪಾರ್ವತಿ ಪಿಟಗಿ

  ತಾರಾಮತಿ ಪರ್ವತರಾಜ ಪಾಟೀಲ ದತ್ತಿ ಪ್ರಶಸ್ತಿ – ಉತ್ತಮ ಪ್ರಕಾಶನಕ್ಕೆ -ಮೋಟಗಿಮಠ – ಅಥಣಿ

ದಿ ಸೌ ಸುಮನ ಗುರುನಾಥ ಹುದಲಿ ದತ್ತಿ ಪ್ರಶಸ್ತಿ -ಮಹಿಳೆಯರಿಗಾಗಿ -ಸಂಗೀತ ಮತ್ತು ನಾಟಕ ಕ್ಷೇತ್ರದ ಸೇವೆಗಾಗಿ ನಿರ್ಮಲಾ ಪ್ರಕಾಶ

ದಿ ವೆಂ ಲ ಜೋಶಿ ಸ್ಮಾರಕ ದತ್ತಿ ನಿಧಿ ಪ್ರಶಸ್ತಿ – ಜಿಲ್ಲೆಯ ಶ್ರೇಷ್ಠಶಿಕ್ಷಕ ಸಾಹಿತಿಗೆ (ಮಾಧ್ಯಮಿಕ ವಿಭಾಗ)  ಎ ಎ ಸನದಿ

ಡಾ. ಎಮ್‌ಎಲ್ ತುಕ್ಕಾರ ಆಭಿನಂದನ ಸಮಿತಿ ದತ್ತಿ ನಿಧಿ ಪ್ರಶಸ್ತಿ – ನಾಟಕಕ್ಕೆ ಗಾಂಧಾರಿಯ ಶಾಪ ಮತ್ತು ಇತರ ನಾಟಕಗಳು -ಲೇಖಕಿ ಸುನಂದ ಎಮ್ಮಿ

ಶಿವಕವಿ ಉಳವೀಶ ಹುಲೆಪ್ಪನವರಮಠ ದತ್ತಿ ಪ್ರಶಸ್ತಿ – ಚುಟುಕು ಸಾಹಿತ್ಯಕ್ಕಾಗಿ -ಭಾವದ ಹಕ್ಕಿ ಕವನ ಸಂಕಲನಕ್ಕೆ -ಆರತಿ ಘಟಿಕಾರ

ಡಾ ಲತಾ ಗುತ್ತಿ ದತ್ತಿ ನಿಧಿ ಪ್ರಶಸ್ತಿ – ಲೇಖಕಿಯರ ಜೀವಮಾನದ ಸಾಧನೆಗಾಗಿ -ಆಶಾ ಕಡಪಟ್ಟಿ

 ಅಪ್ಪಾಸಾಹೇಬ ಸದರ ಜೋಶಿ ಮತ್ತು ಕುಟುಂಬದ ದತ್ತಿ ಪ್ರಶಸ್ತಿ – ವೈಚಾರಿಕ ಸಾಹಿತ್ಯಕ್ಕೆ
ಮಾತು ಮೌನಗಳ ರಾಗರತಿ ಡಾ ಗುರುಪಾದ ಮರಿಗುದ್ದಿ

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button