ಪ್ರಗತಿವಾಹಿನಿ ಸುದ್ದಿ, ಹುಕ್ಕೇರಿ; ತಾಲೂಕಿನ ಕಣಗಲಾ ರಾಷ್ಟೀಯ ಹೆದ್ದಾರಿಯಲ್ಲಿ ಸೋವಾರ ರಾತ್ರಿ ವಾಹನವೊಂದು ಡಿಕ್ಕಿಹೊಡೆದ ಪರಿಣಾಮವಾಗಿ ಓರ್ವ ಸ್ಥಳದಲ್ಲಿ ಮೃತಪಟ್ಟಿದ್ದಾನೆ.
ತಿಪ್ಪಣ್ಣಾ ಲಕ್ಷ್ಮಣ ತಿಲಾರೆ (೩೭) ಮೃತ ವ್ಯಕ್ತಿ. ಈತ ಮೂಲತಃ ಎಲಿಮುನ್ನೋಳಿ ಗ್ರಾಮದವನಾಗಿದ್ದು ಆತನ ಪತ್ನಿಯ ಗ್ರಾಮವಾದ ನೇರ್ಲಿಯಲ್ಲಿ ವಾಸವಾಗಿದ್ದನು. ಕಣಗಲಾ ಗ್ರಾಮದಲ್ಲಿ ಗೌಂಡಿ ಕೆಲಸಕ್ಕೆ ಹೋಗಿ ಮರಳಿ ತನ್ನ ಗ್ರಾಮಕ್ಕೆ ತೆರಳಬೇಕೆಂದು ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ ನಿಂತಿದ್ದಾಗ ವಾಹನ ಡಿಕ್ಕಿ ಹೊಡೆದು ಹೋಗಿದೆ. ತೀವ್ರ ಗಾಯಗೊಂಡಿದ್ದರಿಂದ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಸಂಕೇಶ್ವರ ಪಿಎಸ್‌ಐ ಗಣಪತಿ ಕೂಂಗನ್ನೋಳಿ, ಪ್ರಕರಣ ದಾಖಲಿಸಿಕೊಂಡಿದ್ದು, ವಾಹನ ಶೋಧನೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ