
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ನಗರದ ಶಹಾಪೂರನಲ್ಲಿ ಸಾರ್ವಜನಿಕರು ರಂಗ ಪಂಚಮಿ ಆಚರಿಸಲಿದ್ದು, ಶಹಾಪೂರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಯಾವುದೇ ಅಹೀತಕರ ಘಟನೆ ನಡೆಯದಂತೆ ಮುಂಜಾಗೃತಾ ಕ್ರಮವಾಗಿ ಮಾ.8 ರಂದು 6 ಗಂಟೆಯಿಂದ ರಾತ್ರಿ 24 ಗಂಟೆಯವರೆಗೆ ಮದ್ಯ ಮಾರಾಟದ ಅಂಗಡಿಗಳು, ಬಾರ್/ರೆಸ್ಟೋರೆಂಟ್‌ಗಳು, ಕ್ಲಬ್‌ಗಳು ಹಾಗೂ ದಾಸ್ತಾನು ಡಿಪೋಗಳಿಂದ ಸರಬರಾಜನ್ನು ಬಂದ್ ಮಾಡುವಂತೆ ಬೆಳಗಾವಿ ನಗರ ಪೊಲೀಸ್ ಆಯುಕ್ತರು ಆದೇಶವನ್ನು ಹೊರಡಿಸಿದ್ದಾರೆ.


