Latest

ಟಾಲಿವುಡ್ ಸ್ಟಾರ್ ದಂಪತಿ ಬೇರೆಯಾಗಲು ಆಮೀರ್ ಖಾನ್ ಕಾರಣ…?

ಪ್ರಗತಿವಾಹಿನಿ ಸುದ್ದಿ; ಮುಂಬೈ: ಟಾಲಿವುಡ್ ಸ್ಟಾರ್ ದಂಪತಿ ಸಮಂತಾ-ನಾಗಚೈತನ್ಯ ವಿಚ್ಛೇದನ ವಿಚಾರವಾಗಿ ತಪ್ಪು ಯಾರದ್ದು ಎಂಬ ಬಗ್ಗೆ ಇದೀಗ ಸಾಕಷ್ಟು ಚರ್ಚೆಯಾಗುತ್ತಿದ್ದು, ಬಾಲಿವುಡ್ ನಟಿ ಕಂಗನಾ ರಾಣಾವೂತ್ ಪರೋಕ್ಷವಾಗಿ ನಾಗಚೈತನ್ಯ ವಿರುದ್ಧ ಕಿಡಿಕಾರಿದ್ದಾರೆ.

ಇನ್ ಸ್ಟಾಗ್ರಾಂ ನಲ್ಲಿ ಎರಡು ಪೋಸ್ಟ್ ಗಳನ್ನು ಹಾಕಿರುವ ಕಂಗನಾ, ವಿಚ್ಛೇದನದಲ್ಲಿ ಯಾವಾಗಲೂ ಪರುಷನದ್ದೇ ತಪ್ಪಿರುತ್ತದೆ. ಇದು ವಿಚಿತ್ರವೆನಿಸಿದರೂ ನಿಜ. ಪುರುಷ ಬೇಟೆಗಾರ ಮಹಿಳೆ ಪೋಷಕಿ… ಮಹಿಳೆಯರನ್ನು ಬಟ್ಟೆಯಂತೆ ಬದಲಾಯಿಸುವ ಮತ್ತು ನಂತರ ಅವರು ಉತ್ತಮ ಸ್ನೇಹಿತರೆಂದು ಹೇಳಿಕೊಳ್ಳುವ ವ್ಯಕ್ತಿ ಮೇಲೆ ದಯೆ ತೋರುವುದನ್ನು ನಿಲ್ಲಿಸಿ. ನೂರರಲ್ಲಿ ಒಬ್ಬ ಮಹಿಳೆ ತಪ್ಪು ಮಾಡಬಹುದು…ಅಭಿಮಾನಿಗಳಿಂದ, ಮಾಧ್ಯಮಗಳಿಂದ ಪ್ರೋತ್ಸಾಹ ಪಡೆಯುವ ಇವರಿಗೆಲ್ಲ ನಾಚಿಕೆಯಾಗಬೇಕು ಎಂದು ಗುಡುಗಿದ್ದಾರೆ.

ದಕ್ಷಿಣ ಭಾರತದ ಈ ನಟ ಈಗ ಪತ್ನಿಗೆ ವಿಚ್ಛೇದನ ನೀಡಿದ್ದಾರೆ. 10 ವರ್ಷ ಜೊತೆಗಿದ್ದ ಇವರು, ನಾಲ್ಕು ವರ್ಷಗಳ ಹಿಂದೆ ವಿವಾಹವಾಗಿದ್ದರು. ಈ ನಟ ಇತ್ತೀಚೆಗೆ ಡಿವೋರ್ಸ್ ಎಕ್ಸ್ ಪರ್ಟ್, ಬಾಲಿವುಡ್ ಸೂಪರ್ ಸ್ಟಾರ್ (ಆಮಿರ್ ಖಾನ್) ಭೇಟಿಯಾಗಿದ್ದರು. ಅಲ್ಲಿವರೆಗೂ ಎಲ್ಲಾ ಸರಿಯಾಗಿಯೇ ಇತ್ತು. ಆದರೆ ನಂತರ ಬದಲಾಯಿತು. ನಾನು ಯಾರ ಬಗ್ಗೆ ಮಾತನಾಡುತ್ತಿದ್ದೇನೆ ಎಂಬುದು ನಿಮಗೆ ತಿಳಿದಿರುತ್ತದೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ಆಮೀರ್ ಖಾನ್ ವಿರುದ್ಧ ಆರೋಪಿಸಿದ್ದಾರೆ.
ಐಷಾರಾಮಿ ಹಡಗಿನಲ್ಲಿ ರೇವ್ ಪಾರ್ಟಿ; ಶಾರುಖ್ ಖಾನ್ ಪುತ್ರ ಎನ್ ಸಿಬಿ ಬಲೆಗೆ

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button