Kannada NewsKarnataka NewsLatest
*ಈರುಳ್ಳಿ ಮೂಟೆಗಳಲ್ಲಿ ಶ್ರೀಗಂಧದ ತುಂಡುಗಳ ಅಕ್ರಮ ಸಾಗಾಟ: ನಾಲ್ವರು ಖದೀಮರು ಅರೆಸ್ಟ್*

ಪ್ರಗತಿವಾಹಿನಿ ಸುದ್ದಿ: ಈರುಳ್ಳಿ ಮೂಟೆಯಲ್ಲಿ ಶ್ರೀಗಂಧದ ತುಂಡುಗಳನ್ನು ಸಾಗಿಸುತ್ತಿದ್ದ ನಾಲ್ವರು ಖದೀಮರನ್ನು ಬೆಂಗಳೂರಿನ ಸಿದ್ದಾಪುರ ಪೊಲೀಸರು ಬಂಧಿಸಿದ್ದಾರೆ.
ಆಂಧ್ರಪ್ರದೇಶದ ಕರ್ನೂಲ್ ನಿಂದ ಈಶ್ರೀಗಂದದ ತುಂಡುಗಳನ್ನು ಈರುಳ್ಳಿ ತುಂಬಿದ್ದ ಮೂಟೆಯಲ್ಲಿಟ್ಟು ಬೆಂಗಳೂರಿಗೆ ತಂದು ಸಾಗಿಸುತ್ತಿದ್ದ ವೇಳೆ ಸಿಇದ್ದಾಪುರ ಪೊಲೀಸರು ನಾಲ್ವರನ್ನು ಅರೆಸ್ಟ್ ಮಾಡಿದ್ದಾರೆ.
ಈರುಳ್ಳಿ ಮಾರಾಟಗಾರ ಎಂದು ಹೇಳಿಕೊಂಡು ಸಿರಾಜ್ ಎಂಬಾತ ತನ್ನ ಗ್ಯಾಂಗ್ ನೊಂದಿಗೆ ಕರ್ನೂಲ್ ನಿಂದ ಈರುಳ್ಳಿ ಮೂಟೆಯಲ್ಲಿ ಶ್ರೀಗಂಧ ತಂದಿದ್ದ. ಬೆಂಗಳೂರಿಗೆ ಶ್ರೀಗಂಧದ ತುಂಡುಗಳನ್ನು ತಂದು ಅದನ್ನು ಚೀನಾಗೆ ಸಪ್ಲೈ ಮಾಡುತ್ತಿದ್ದ. ಹೀಗೆ ಸಾಗಾಟ ಮಾಡುತ್ತಿದ್ದ ವೇಳೆ ಆರೋಪಿಗಳಾದ ಶೇಖ್ ಶಾರೂಕ್, ಶೇಖ್ ಅಬ್ದುಲ್, ಪರಮೇಶ್, ರಾಮ್ ಭೂಪಾಲ್ ಎಂಬುವವರನ್ನು ಬಂಧಿಸಿದ್ದಾರೆ. ಒಟ್ಟು 18 ಶ್ರೀಗಂಧದ ತುಂಡುಗಳನ್ನು ವಶಕ್ಕೆ ಪಡೆಯಲಾಗಿದೆ.




