Latest

ADGP ಹೆಸರು ಮಾತ್ರ ಅಮೃತ ಆದರೆ ಆತ ವಿಷಾಮೃತ; ವಿಪಕ್ಷ ನಾಯಕ ಸಿದ್ದರಾಮಯ್ಯ ವ್ಯಂಗ್ಯ

ಪ್ರಗತಿವಾಹಿನಿ ಸುದ್ದಿ; ಮೈಸೂರು: ರಾಜ್ಯ ಬಿಜೆಪಿ ಸರ್ಕಾರ ಯುವಕರಿಂದ ಲೂಟಿ ಮಾಡಿದೆ. ಪಿಎಸ್ ಐ ನೇಮಕಾತಿ ಹಗರಣದಲ್ಲಿ 300 ಕೋಟಿ ಭ್ರಷ್ಟಾಚಾರ ನಡೆಸಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಮೈಸೂರಿನಲ್ಲಿ ಭಾರತ್ ಜೋಡೋ ಯಾತ್ರೆ ಪೂರ್ವಸಿದ್ಧತಾ ಸಭೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ಪಿಎಸ್ ಐ ಹಗರಣದಲ್ಲಿ ಬಿಜೆಪಿ ನಾಯಕರೂ ಇದ್ದಾರೆ, ಮಂತ್ರಿಗಳೂ ಇದ್ದಾರೆ. ಸರ್ಕರದ 40% ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಯ್ಯ ಅವರು ಪ್ರಧಾನಿ ಮೋದಿಯವರಿಗೆ ಎರಡು ಬಾರಿ ಪತ್ರ ಬರೆದಿದ್ದಾರೆ. ಸರ್ಕಾರದ ಕಮಿಷನ್ ದಂಧೆ ಬಗ್ಗೆ ದೂರು ನೀಡಿದ್ದಾರೆ. ಇಂತಹ ಭ್ರಷ್ಟ ಸರ್ಕಾರವನ್ನು ನನ್ನ ರಾಜಕೀಯ ಜೀವನದಲ್ಲಿಯೇ ನೋಡಿರಲಿಲ್ಲ ಎಂದು ಹೇಳಿದರು.

ಪಿಎಸ್ ಐ ನೇಮಕಾತಿ ಪರೀಕ್ಷೆಯಲ್ಲಿ ಖಾಲಿ ಪೇಪರ್ ಪಡೆದು ಬಳಿಕ ಎಡಿಜಿಪಿ ಕಚೇರಿಯಲ್ಲಿ ಪಿಎಸ್ ಐ ಪರೀಕ್ಷೆಗೆ ಉತ್ತರ ಬರೆದಿದ್ದಾರೆ. ಎಡಿಜಿಪಿಯಾಗಿದ್ದ ಅಮೃತ ಪೌಲ್ ಹೆಸರು ಮಾತ್ರ ಅಮೃತ ಆದರೆ ಆತ ಅಮೃತವಲ್ಲ ವಿಷಾಮೃತ ಎಂದು ಕಿಡಿಕಾರಿದ್ದಾರೆ.

ನಿರುದ್ಯೋಗಿಗಳಿಗೆ ಉದ್ಯೋಗ ನೀಡಿ ಎಂದರೆ ಪ್ರಧಾನಿ ಮೋದಿಯವರು ಪಕೋಡ ಮಾರಿ ಎಂದರು. ಪಕೋಡಾ ಮಾರಿ ಮಾರ‍ಾಟ ಮಾರಲು ಅಡುಗೆ ಎಣ್ಣೆ, ಗ್ಯಾಸ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ. ಪಕೋಡಾ ಮಾರುವುದಾದು ಹೇಗೆ? ಎಂದು ಪ್ರಶ್ನಿಸಿದರು.

Home add -Advt

ದೇಶದ ಐಕ್ಯತೆಗಾಗಿ ರಾಹುಲ್ ಗಾಂಧಿ ನೇತೃತ್ವದಲ್ಲಿ ಭಾರತ್ ಜೋಡೋ ಯಾತ್ರೆ ಆರಂಭವಾಗಿದೆ. ಭಾರತ್ ಜೋಡೋ ಯಾತ್ರೆಯಲ್ಲಿ ಹೆಚ್ಚು ಹೆಚ್ಚು ಜನರು ಪಾಲ್ಗೊಳ್ಳಬೇಕು. ಮುಂದೆ ಚುನಾವಣೆ ಬರುತ್ತಿದೆ. ಒಬ್ಬೊಬ್ಬ ನಾಯಕರು ಹೆಚ್ಚೆಚ್ಚು ಜನರನ್ನು ಕರೆತಂದರೆ ಮಾತ್ರ ರಾಜಕೀಯ ಲಾಭ ಎಂದರು.

ಬರಿ ಮುಖ ತೋರಿಸಿ ತಿಂಡಿ ತಿಂದು ಹೋಗೋದಲ್ಲ; ಒಬ್ಬೊಬ್ಬರು 100 ಜನರನ್ನು ಕರೆತರಬೇಕು; ಭಾರತ್ ಜೋಡೋ ಯಾತ್ರೆಗೆ ಡಿ.ಕೆ.ಶಿ ತಾಕೀತು

https://pragati.taskdun.com/politics/d-k-shivakumarbharath-jodo-yatremysore/

Related Articles

Back to top button