ಪ್ರಗತಿವಾಹಿನಿ ಸುದ್ದಿ, ಖಾನಾಪುರ –ಕೆಲವು ಪ್ರಮುಖ ಮಾರ್ಪಾಡು ಮಾಡುವ ಮೂಲಕ ಪಟ್ಟಣವನ್ನು ಸಂಚಾರ ದಟ್ಟಣೆಯಿಂದ ಮುಕ್ತ ಮಾಡುವ ಮತ್ತು ಸುಂದರಪಟ್ಟಣವಾಗಿಸುವ ಸಂಕಲ್ಪ ತೊಟ್ಟಿರುವ ಶಾಸಕಿ ಡಾ. ಅಂಜಲಿ ನಿಂಬಾಳಕರ್ ಇದೀಗ ಮೀನು ಮಾರುಕಟ್ಟೆಯನ್ನು ಸ್ಥಳಾಂತರಿಸಿದ್ದಾರೆ.
ಹೆಸ್ಕಾಂ ಕಾರ್ಯಾಲಯದ ಪಕ್ಕದಲ್ಲಿ ಇದ್ದ ಮೀನು ಮಾರುಕಟ್ಟೆಯನ್ನು ಇದೀಗ ಸುಸಜ್ಜಿತವಾದ ಕಟ್ಟಡಗಳಿಗೆ ಸ್ಥಳಾಂತರಿಸಲು ಅವರು ಯಶಸ್ವಿಯಾಗಿದ್ದಾರೆ.
ಖಾನಾಪುರದಲ್ಲಿ ಮಲಪ್ರಭಾ ನದಿಯ ಸೇತುವೆ ಸಮೀಪ ರಾಹುಲ್ ಸಾವಂತ ಇವರ ಒಡೆತನದ ಜಾಗದಲ್ಲಿ ನವೀನ ಮೀನು ಮಾರಕಟ್ಟೆ ಉದ್ಘಾಟನೆಯನ್ನು ಡಾ.ಅಂಜಲಿ ನಿಂಬಾಳ್ಕರ ಅವರು ಭಾನುವಾರ ನೆರವೇರಿಸಿದರು.
ಸ್ಥಳೀಯ ಲಕ್ಷ್ಮೀ ಜಾತ್ರೆಯ ಸಂದರ್ಭದಲ್ಲಿ ಅವರು ಸುಂದರ, ಸುಸಜ್ಜಿತ ಪಟ್ಟಣವನ್ನಾಗಿ ಮಾರ್ಪಡಿಸಲು ಪ್ರಣತೊಟ್ಟಿದ್ದರು. ಈ ಹಿನ್ನೆಲೆಯಲ್ಲಿ ಕೆಲವು ಪ್ರಮುಖ ಬೀದಿಗಳ ಸಂಚಾರ ದಟ್ಟಣೆ ಇರುವ ಪ್ರದೇಶಗಳಲ್ಲಿ ಸಂಚರಿಸಿ ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕೆಲವು ಪ್ರಮುಖ ಮಾರ್ಪಾಡುಗಳನ್ನು ಮಾಡಲು ಮುಂದಾಗಿದ್ದಾರೆ.
ಈ ಸಂದರ್ಭದಲ್ಲಿ ಪ.ಪಂ. ಸದಸ್ಯರು, ಮೀನು ವ್ಯಾಪಾರಸ್ಥರು, ಸಾರ್ವಜನಿಕರು ಬಹುಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ