ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಪೊಗರು ಚಿತ್ರ ಕನ್ನಡ, ತೆಲುಗು, ತಮಿಳು ಮೂರು ಭಾಷೆಗಳಲ್ಲಿ ಬಿಡುಗಡೆಯಾಗಿದ್ದು, ಥಿಯೇಟರ್ ಗಳಲ್ಲಿ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ.
ಲಾಕ್ ಡೌನ್ ಬಳಿಕ ಥಿಯೇಟರ್ ಗಳಲ್ಲಿ 100 ಪರ್ಸೆಂಟ್ ಪರ್ಮಿಷನ್ ಸಿಕ್ಕ ಬಳಿಕ ಸಿಲ್ವರ್ ಸ್ಕ್ರೀನ್ ಗೆ ಅಪ್ಪಳಿಸೋಕೆ ರೆಡಿಯಾಗಿರೋ ಬಿಗ್ ಬಜೆಟ್ ಚಿತ್ರ ಇದಾಗಿದ್ದು, 1100 ಥಿಯೇಟರ್ ಗಳಲ್ಲಿ ಪೊಗರು ಧೂಳೆಬ್ಬಿಸುತ್ತಿದೆ.
ಧ್ರುವ ಸರ್ಜಾ ಅಭಿಮಾನಿಗಳು ಹಲವೆಡೆ ಥಿಯೇಟರ್ ಮುಂದೆ ಬೃಹತ್ ಕಟೌಟ್ ಗೆ ಕ್ಷೀರಾಭಿಷೇಕ ಮಾಡಿದರೆ, ಇನ್ನು ಕೆಲವೆಡೆ ಪೊಗರು ಚಿತ್ರದ ಹಾಡಿಗೆ ಸ್ಟೆಪ್ ಹಾಕಿ ಸಂಭ್ರಮಿಸಿದ್ದಾರೆ.
ನಂದಕಿಶೋರ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಪೊಗರು ಚಿತ್ರಕ್ಕೆ ಧ್ರುವಾಗೆ ರಶ್ಮಿಕಾ ಮಂದಣ್ಣ ನಾಯಕಿಯಾಗಿ ಅಭಿನಯಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ