ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಸ್ಯಾಂಡಲ್ ವುಡ್ ಗೆ ಡ್ರಗ್ಸ್ ಮಾಫಿಯಾ ನಂಟು ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರಿಂದ ಬಂಧನಕ್ಕೊಳಗಾಗಿರುವ ನಟಿ ರಾಗಿಣಿ ಮಹಿಳಾ ಸಾಂತ್ವನ ಕೇಂದ್ರದಲ್ಲಿದ್ದಾರೆ. ಸಾಂತ್ವನ ಕೇಂದ್ರದಲ್ಲೇ ನಟಿ ಒಂದು ರಾತ್ರಿ ಕಳೆದಿದ್ದಾರೆ.
ಬೆಂಗಳೂರಿನ ಮಡಿವಾಳದಲ್ಲಿರುವ ಮಹಿಳಾ ಸಾಂತ್ವನ ಕೇಂದ್ರದಲ್ಲಿ ರಾಗಿಣಿ ಇದ್ದು, ಬೆಳಿಗ್ಗೆ ರಾಗಿಣಿ ಪೋಷಕರು ಉಪಹಾರ ಹಾಗೂ ಬಟ್ಟೆಗಳನ್ನು ತಂದಿದ್ದಾರೆ. ಅಲ್ಲದೇ ಮಗಳಿಗೆ ಧೈರ್ಯತುಂಬಿದ್ದಾರೆ.
ಇನ್ನು ಕೆಲವೇ ಹೊತ್ತಲ್ಲಿ ರಾಗಿಣಿ ಮತ್ತೆ ಸಿಸಿಬಿ ಕಚೇರಿಗೆ ತೆರಳಿ ವಿಚಾರಣೆಗೆ ಒಳಗಾಗಲಿದ್ದಾರೆ. ಡ್ರಗ್ಸ್ ಮಾಫಿಯಾ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ರಾಗಿಣಿ ಆಪ್ತ ರವಿಶಂಕರ್ ನೀಡಿರುವ ಹೇಳಿಕೆ ಹಾಗೂ ಮತ್ತೋರ್ವ ಆರೋಪಿ ವಿರೇನ್ ಖನ್ನಾ ನೀಡಿರುವ ಹೇಳಿಕೆಗಳು ಸ್ಯಾಂಡಲ್ ವುಡ್ ನಟಿಯ ಸಂಕಷ್ಟಕ್ಕೆ ಕಾರಣವಾಗಿದೆ ಎನ್ನಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ