Latest

ಯುವತಿಯಿಂದಲೇ ಯುವಕನ ಮೇಲೆ ಆ್ಯಸಿಡ್ ದಾಳಿ

ಪ್ರಗತಿವಾಹಿನಿ ಸುದ್ದಿ; ಹೈದರಾಬಾದ್: ಯುವತಿಯೊಬ್ಬಳು ಮಾಜಿ ಪ್ರಿಯಕರನ ಮೇಲೆ ಆ್ಯಸಿಡ್ ದಾಳಿ ನಡೆಸಿರುವ ಘಟನೆ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿ ನಡೆದಿದೆ.

ಆ್ಯಸಿಡ್ ದಾಳಿಗೆ ಒಳಗಾದ ಯುವಕನನ್ನು ನಾಗೇಂದ್ರ ಎಂದು ಗುರುತಿಸಲಾಗಿದೆ. ನಾಗೇಂದ್ರ ಹಾಗೂ ಯುವತಿ ಕಳೆದ ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದೇವು. ಆದರೆ ಇಬ್ಬರ ಪೋಷಕರು ಮದುವೆಗೆ ನಿರಾಕರಿಸಿದ್ದರಿಂದ ನಾಗೇಂದ್ರ ಕಳೆದ ತಿಂಗಳು ಲಕ್ಷ್ಮಿ ಎಂಬಾಕೆ ಜೊತೆ ಮದುವೆಯಾಗಿದ್ದಾನೆ.

ಇದರಿಂದ ಬೇಸರಗೊಂಡ ಯುವತಿ ನಾಗೇಂದ್ರನ ಮೇಲೆ ಆ್ಯಸಿಡ್ ದಾಳಿ ನಡೆಸಿದ್ದಾಳೆ. ಯುವಕನನ್ನು ನಂದ ದಯಾಳ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಪೊಲೀಸರ ಮುಂದೆ ಹೇಳಿಕೆ ದಾಖಲಿಸಿರುವ ನಾಗೇಂದ್ರ, ಯುವತಿಯ ಬಳಿ ಚರ್ಚಿಸಿ ನಾನು ಲಕ್ಷ್ಮಿಯನ್ನ ಮದುವೆಯಾಗಿರೋದಾಗಿ ತಿಳಿಸಿದ್ದಾನೆ.

Related Articles

Back to top button