Latest

ಭಾವನಾತ್ಮಕ ಸಾಲುಗಳ ಮೂಲಕ ನಿಜ ಜೀವನದ ಘಟನೆ ಬಿಚ್ಚಿಟ್ಟ ನಟಿ

ಪ್ರಗತಿವಾಹಿನಿ ಸುದ್ದಿ; ಮುಂಬೈ: ದಿ ಕಾಶ್ಮೀರ್ ಫೈಲ್ಸ್ ಚಿತ್ರ ಕಾಶ್ಮೀರಿ ಪಂಡಿತರ ಮೇಲಿನ ದಾಳಿ, ದುರಂತ ಕಥೆಗಳನ್ನು ಹೇಳುತ್ತಿದ್ದು, ಇದೀಗ ಬಾಲಿವುಡ್ ನಟ-ನಟಿಯರು ಅಂದು ತಮ್ಮ ಕುಟುಂಬದ ಮೇಲೆ ನಡೆದ ದೌರ್ಜನ್ಯದ ಬಗ್ಗೆ ಬಹಿರಂಗಪಡಿಸುತ್ತಿದ್ದಾರೆ.

ಇತ್ತೀಚೆಗೆ ನಟಿ ಯಾಮಿ ಗೌತಮ್ ತಮ್ಮ ಕುಟುಂಬದ ಮೇಲೆ ನಡೆದ ದಾಳಿಯ ಬಗ್ಗೆ ಹೇಳಿಕೆ ನಿಡಿದ್ದರು. ಇದೀಗ ಮತ್ತೋರ್ವ ನಟಿ ಸಂದೀಪಾ ದರ್, ಕಾಶ್ಮೀರ್ ಫೈಲ್ ಚಿತ್ರದ ಕಥೆ ನನ್ನ ಕುಟುಂಬದ ಕಥೆಯಂತಿದೆ ಎಂದು ಹೇಳಿದ್ದಾರೆ.

I asked the rose, where is your scent?
It said, “The autumn took it away.”
I asked the spring, why the lines on your forehead?
It said, “For my wounds have been salted.”
So I left the garden that once bloomed
And since then,
I wander, aimless. ಎಂದು ಭಾವನಾತ್ಮಕವಾಗಿ ಕವಿತೆಯ ಸಾಲುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿರುವ ಸಂದೀಪಾ ಧರ್, ತೊಂಭತ್ತರ ದಶಕದಲ್ಲಿ ಶ್ರೀನಗರದಲ್ಲಿದ್ದ ತಮ್ಮ ಮನೆಯ ಫೋಟೋವನ್ನು ಹಂಚಿಕೊಂಡಿದ್ದಾರೆ.

ನಮ್ಮ ಕುಟುಂಬಕ್ಕೆ ರಾತ್ರೋ ರಾತ್ರಿ ಕಾಶ್ಮೀರ ತೊರೆಯಲು ಸೂಚಿಸಲಾಯಿತು. ಇದ್ದಕ್ಕಿದ್ದಂತೆ ಮನೆ ಬಿಟ್ಟು ಹೋಗುವುದು ಎಲ್ಲಿ? ಆದರೆ ದೌರ್ಜನ್ಯ ತಡೆಯಲಾಗದೇ ಅನಿವಾರ್ಯವಾಗಿ ನಾವು ಹೊರಡಲೇ ಬೇಕಿತ್ತು. ಅದಕ್ಕಾಗಿ ಅಪ್ಪ ಟ್ರಕ್ ಸಹಾಯ ಪಡೆದರು. ಟ್ರಕ್ ನಲ್ಲಿ ಬಚ್ಚಿಟ್ಟುಕೊಂಡೆ ನಾವು ಸಾಗಿದೆವು. ನನ್ನ ತಂಗಿಯನ್ನು ಉಳಿಸಿಕೊಳ್ಳಲು ಆಕೆಯನ್ನು ಟ್ರಕ್ ಸೀಟಿನಡಿ ಬಚ್ಚಿಡಲಾಗಿತ್ತು. ಮಧ್ಯ ರಾತ್ರಿಯಲ್ಲಿ ಹೀಗೆ ಟ್ರಕ್ ನಲ್ಲಿ ಬಚ್ಚಿಟ್ಟುಕೊಂಡು ಹೊರಟಿದ್ದೆವು. ಇಂಥದ್ದೇ ದೃಶ್ಯ ದಿ ಕಾಶ್ಮೀರ್ ಫೈಲ್ಸ್ ಸಿನಿಮಾದಲ್ಲಿದೆ. ಇದನ್ನು ನೋಡಿ ನನಗೆ ಜೀವವಏ ಹೋದಂತಾಯಿತು. ಸದಾ ತವರುಮನೆಯನ್ನು ನೆನೆಯುತ್ತಿದ್ದ ಅಜ್ಜಿ ಸಾವನ್ನಪ್ಪಿದರು. ಅದೊಂದು ನರಕಯಾತನೆ ಬದುಕು…ಎಂದು ಬರೆದುಕೊಂಡಿದ್ದಾರೆ. ಇಡೀ ಪ್ರಪಂಚಕ್ಕೆ ಸತ್ಯವನ್ನು ತೋರುತ್ತಿರುವ ನಿರ್ದೇಶಕ ವಿವೇಕ್ ಅಗ್ನಿಹೋತ್ರಿಗೆ ಧನ್ಯವಾದಗಳು ಎಂದು ಹೇಳಿದ್ದಾರೆ.

ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಟಿವಿ ನಟಿ
ಕರಾಸ್ತ್ರ ಚಿತ್ರದ ಪೋಸ್ಟರ್ ಬಿಡುಗಡೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button