Latest

ಸೋದರನಂತೆ ನಂಬಿದ್ದ ರಾಹುಲ್ ನಿಂದ ವಂಚನೆ; ಕಾನೂನು ಹೋರಾಟಕ್ಕೆ ಮುಂದಾದ ಸಂಜನಾ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಸ್ಯಾಂಡಲ್ ವುಡ್ ನಟಿ ಸಂಜನಾ ಗಲ್ರಾಣಿ ಮತ್ತೆ ಸುದ್ದಿಯಾಗಿದ್ದಾರೆ. ಡ್ರಗ್ಸ್ ಪ್ರಕರಣದಲ್ಲಿ ಬಂಧನಕ್ಕೀಡಾಗಿದ್ದ ರಾಹುಲ್ ತೋನ್ಸೆ ವಿರುದ್ಧ ಸಂಜನಾ ವಂಚನೆ ಪ್ರಕರಣ ದಾಖಲಿಸಿದ್ದಾರೆ.

ಸಂಜನಾ ಸ್ನೇಹಿತ ರಾಹುಲ್ ತೋನ್ಸೆ ಸೇರಿದಂತೆ ಮೂವರ ವಿರುದ್ಧ ಬೆಂಗಳೂರಿನ ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

ರಾಹುಲ್ ತೋನ್ಸೆ ತನ್ನಿಂದ ಹೂಡಿಕೆಗಾಗಿ ಹಣ ಪಡೆದು ವಾಪಸ್ ನೀಡದೇ ವಂಚಿಸಿದ್ದಾರೆ. ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಹಣ ತೊಡಗಿಸಿದ್ದು, ರಾಹುಲ್ ತಂದೆ ತಾಯಿಯಿಂದಲೂ ತನಗೆ ಜೀವ ಬೆದರಿಕೆಯೊಡ್ಡಿ, ಅವಾಚ್ಯ ಶಬ್ಧಗಳಿಂದ ನಿಂದನೆ ಮಾಡಿ ಮಾನಹಾನಿ ಮಾಡಲಾಗಿದೆ ಎಂದು ಸಂಜಾನಾ ದೂರಿನಲ್ಲಿ ತಿಳಿಸಿದ್ದಾರೆ. ಸಂಜನಾ ಕ್ಯಾಸಿನೋದಲ್ಲಿ ಹಣ ಹೂಡಲು ರಾಹುಲ್ ತೋನ್ಸೆಗೆ ಹಣ ನೀಡಿದ್ದರು. ಆತ ಹಣನ್ನಾಗಲಿ, ಬಂಧ ಲಾಭವನ್ನಾಗಲಿ ಸಂಜನಾಗೆ ನೀಡದ ಕಾರಣ ಸಂಜನಾ ರಾಹುಲ್ ವಿರುದ್ಧ ದೂರು ನೀಡಿದ್ದಾರೆ ಎಂಬ ವದಂತಿಗಳು ಹಬ್ಬಿದ್ದವು.

ಇದೀಗ ರಾಹುಲ್ ತೋನ್ಸೆ ವಿರುದ್ಧ ತಾನು ನೀಡಿರುವ ದೂರಿನ ಬಗ್ಗೆ ಸ್ಪಷ್ಟನೆ ನೀಡಿರುವ ಸಂಜನಾ ಗಲ್ರಾಣಿ, ಕ್ಯಾಸಿನೋ ವ್ಯವಹಾರಕ್ಕಾಗಿ ನಾನು ಹಣ ನೀಡಿರಲಿಲ್ಲ. ಕಾಸಿನೋ ಆಡುವಷ್ಟು ಶ್ರೀಮಂತಳೂ ನಾನಲ್ಲ, ಅಂತಹ ಜೂಜಿನ ದುರಭ್ಯಾಸ ನನಗಿಲ್ಲ. ನಾನೋರ್ವ ಗೃಹಿಣಿ. ನನ್ನ ವಿರುದ್ಧ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ಕೆಲ ವದಂತಿಗಳಿಂದ ನನಗೆ ಬೇಸರ ತಂದಿದೆ ಎಂದಿದ್ದಾರೆ.

ರಾಹುಲ್ ತೋನ್ಸೆಯನ್ನು ಸಹೋದರನಂತೆ ನಾನು ನಂಬಿದ್ದೆ. ಸೋದರನಂತ ರಾಹುಲ್ ವ್ಯವಹಾರದಲ್ಲಿ ಹಣ ಹೂಡಿಕೆ ಮಾಡುವಂತೆ ಹಾಗೂ ಹಣ ವಾಪಸ್ ಕೊಡುವುದಾಗಿ ರಾಹುಲ್ ಹಾಗೂ ಆತನ ತಂದೆ-ತಾಯಿ ಹೇಳಿದ್ದರು. ಹೀಗಾಗಿ ರಾಹುಲ್ ತಂದೆ-ತಾಯಿಯೇ ಕೇಳುತ್ತಿದ್ದಾರೆ ಎಂದು ನಂಬಿ ನಾನು ಕಷ್ಟಪಟ್ಟು ದಿಡಿದ ಹಣವನ್ನು ಆತನ ಖಾತೆಗೆ ವರ್ಗಾವಣೆ ಮಾಡಿದ್ದೆ. ಆದರೆ ಆತ ಹಣ ವಾಪಸ್ ನೀಡದೇ ಅವಾಚ್ಯ ಶಬ್ದಗಳಿಂದ ನನ್ನನ್ನು ನಿಂದಿಸಿದ್ದಾರೆ ಇದರಿಂದ ನಾನು ಕೋರ್ಟ್ ಮೊರೆ ಹೋಗಿದ್ದಾಗಿ ತಿಳಿಸಿದ್ದಾರೆ.

ಸಂಜನಾ ದಾಖಲಿಸಿರುವ ಪ್ರಕರಣದ ವಿಚಾರಣೆ ನಡೆಸಿರುವ 4ನೇ ಎಸಿಎಂಎಂ ನ್ಯಾಯಾಲಯ ರಾಹುಲ್ ತೋನ್ಸೆ ಹಾಗೂ ಇನ್ನಿಬ್ಬರ ವಿರುದ್ಧ ತನಿಖೆ ನಡೆಸುವಂತೆ ಕೋರ್ಟ್ ಆದೇಶ ನೀಡಿತ್ತು. ಈ ಹಿನ್ನೆಲೆಯಲ್ಲಿ ಇದೀಗ ರಾಹುಲ್ ತೋನ್ಸೆ ಸೇರಿದಂತೆ ಮೂವರ ವಿರುದ್ಧ ಇಂದಿರಾ ನಗರ ಪೊಲೀಸರು ಎಫ್ ಐ ಆರ್ ದಾಖಲಿಸಿದ್ದಾರೆ.

ಐಪಿಎಸ್ ಅಧಿಕಾರಿಗಳ ದಿಢೀರ್ ವರ್ಗಾವಣೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button