*ಪತ್ನಿಗೆ ಅಶ್ಲೀಲ ಮೇಸೆಜ್: ಯುವಕನಿಗೆ ಬುದ್ಧಿ ಹೇಳಿದ ಹಾಸ್ಯ ನಟ ಸಂಜು ಬಸಯ್ಯ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ವಿಜಯನಗರ ಮೂಲದ ಯುವ ನಟ ಸಂಜು ಬಸಯ್ಯ ಪತ್ನಿ ಪಲ್ಲವಿ ಅವರ ಇನ್ಸಾಗ್ರಾಮ್ ಗೆ ವ್ಯಕ್ತಿಯೊಬ್ಬ ಅಶ್ಲೀಲ ಸಂದೇಶ ಕಳುಹಿಸಿದ್ದ. ಆದರೆ ನಟ ಸಂಜು ಬಸಯ್ಯ ಕಾನೂನು ಕೈಗೆತ್ತಿಕೊಳ್ಳದೆ ಪೊಲೀಸ್ ಠಾಣೆ ಮೆಟ್ಟಿಲೇರುವ ಮೂಲಕ ಯುವಕನಿಗೆ ಕಾನೂನಿನ ಮೂಲಕ ಬುದ್ಧಿ ಹೇಳಿಸಿದ್ದಾರೆ.
ಪತ್ನಿಗೆ ಇನ್ಸಾಗ್ರಾಂ ನಲ್ಲಿ ಅಶ್ಲೀಲ ಮೆಸೇಜ್ ಕಳಿಸಿದ ಕಾಲೇಜು ಯುವಕನಿಗೆ ಹಾಸ್ಯನಟ ಸಂಜು ಬಸಯ್ಯ ಸಮಾಜಕ್ಕೆ ಮಾದರಿಯಾಗುವಂತೆ ಬುದ್ಧಿವಾದ ಹೇಳಿದ್ದಾರೆ.
ಆರೋಪಿ ಕಾಲೇಜು ವಿದ್ಯಾರ್ಥಿಯಾಗಿರುವುದರಿಂದ ಆತನ ಭವಿಷ್ಯ ಹಾಳಾಗಬಾರದೆಂದು ಈ ರೀತಿಯ ತೀರ್ಮಾನಕ್ಕೆ ಬಂದಿರುವುದಾಗಿ ಸಂಜು ಬಸಯ್ಯ ಹೇಳಿದ್ದಾರೆ.
ದಂಪತಿಗಳು ಆರೋಪಿಯಿಂದ ಮುಕ್ತಿ ನೀಡುವಂತೆ ಮನವಿ ಮಾಡಿಕೊಂಡಿದ್ದರು. ಪೊಲೀಸರು ಯುವಕನನ್ನು ಬಂಧಿಸಿ ಕರೆತಂದಾಗ ಸೌಹಾರ್ದವಾಗಿಯೇ ನಡೆದುಕೊಂಡ ಸಂಜು ಬಸಯ್ಯ, ಯುವಕನಿಗೆ ಬುದ್ಧಿವಾದ ಹೇಳಿ ಕಳಿಸುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ.
ಲಿವಿನ್ ರಿಲೇಷನ್ ಶಿಪ್ ಗೆಳತಿ ಪವಿತ್ರಾಗೌಡ ಗೆ ಅಶ್ಲೀಲ ಮೆಸೇಜ್ ಕಳಿಸಿದ್ದನೆಂಬ ಕಾರಣಕ್ಕೆ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿಯನ್ನು ನಟ ದರ್ಶನ್ ಗ್ಯಾಂಗ್ ಅಪಹರಿಸಿ ಕ್ರೂರವಾಗಿ ಚಿತ್ರಹಿಂಸೆ ನೀಡಿ ಕೊಲೆಗೈದ ಆರೋಪದ ಮೇಲೆ ಜೈಲು ಸೇರಿತ್ತು. ಈ ಘಟನೆಯಿಂದ ಪ್ರೇರೇಪಿತರಾಗಿ ಹಲವು ಯುವಕರು ಇತ್ತೀಚಿಗೆ ಹಲ್ಲೆ ನಡೆಸಿ ಹಿಂಸಿಸುತ್ತಿರುವ ಪ್ರಕರಣಗಳು ವರದಿಯಾಗುತ್ತಿವೆ. ಇಂತಹ ಘಟನೆಗಳ ನಡುವೆ ಹಾಸ ಕಲಾವಿದ ಸಂಜು ಬಸಯ್ಯ ಕಿಡಿಗೇದಿಗೆ ಬುದ್ಧಿ ಹೇಳಿ ತಿದ್ದುಕೊಳ್ಳಲು ಅವಕಾಶ ನೀಡಿದ್ದಾರೆ.