Election NewsKannada NewsKarnataka NewsNationalPolitics

*ರಾಜ್ಯಸಭಾ ಚುನಾವಣೆ: ಅಭ್ಯರ್ಥಿಗಳ ಹೆಸರು ಘೋಷಿಸಿದ ಬಿಜೆಪಿ*

ಪ್ರಗತಿವಾಹಿನಿ ಸುದ್ದಿ: ಮಹಾರಾಷ್ಟ್ರದಿಂದ ರಾಜ್ಯಸಭೆಗೆ ಚುನಾವಣೆ ನಡೆಯಲಿದ್ದು, ಆಯ್ಕೆಯಾಗಲಿರುವ ಏಳು ಸ್ಥಾನಗಳಿಗಾಗಿ ಬಿಜೆಪಿ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ. 

ಮಹಾರಾಷ್ಟ್ರದಿಂದ ಈ ಬಾರಿ ನಿವೃತ್ತಿಯಾಗುತ್ತಿರುವ ಪ್ರಮುಖ ರಾಜ್ಯಸಭಾ ಸದಸ್ಯರಲ್ಲಿ ಶರದ್ ಪವಾ‌ರ್, ರಾಮದಾಸ್ ಅಠವಳೆ, ಫೌಜಿಯಾ ಖಾನ್, ರಜನಿ ಪಾಟೀಲ್, ಪ್ರಿಯಾಂಕಾ ಚತುರ್ವೇದಿ, ಧೈರ್ಯಶೀಲ್ ಪಾಟೀಲ್ ಹಾಗೂ ಭಾಗವತ್ ಕರಡ್ ಸೇರಿದ್ದಾರೆ.

Home add -Advt

ಹಾಗಾಗಿ ಪ್ರಸ್ತುತ ನಡೆಯುವ ಚುನಾವಣೆಗೆ ರಾಮದಾಸ್‌ ಅಠವಳೆ, ವಿನೋದ್ ತಾವಡೆ, ಮಾಯಾ ಚಿಂತಾಮನ್ ಇಟ್ನಾಟೆ ಹಾಗೂ ರಾಮರಾವ್ ವಾಚ್ಯುಟೆ ಅವರನ್ನು ಕಣಕ್ಕಿಳಿಸಿದೆ.

ಮಹಾರಾಷ್ಟ್ರದಲ್ಲಿ ಪ್ರಸ್ತುತ ವಿಧಾನಸಭಾ ಬಲದ ಲೆಕ್ಕಾಚಾರ ಪ್ರಕಾರ ಬಿಜೆಪಿ ಕನಿಷ್ಠ ನಾಲ್ಕು ಅಭ್ಯರ್ಥಿಗಳನ್ನು ಗೆಲ್ಲಿಸುವ ಸ್ಥಿತಿಯಲ್ಲಿ ಇರುವುದರಿಂದ ಈ ಘೋಷಣೆ ಮಹತ್ವ ಪಡೆದುಕೊಂಡಿದೆ. 

ಮಾರ್ಚ್ 5 ರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನ ಇದ್ದು, ಮಾರ್ಚ್ 6 ರಂದು ಅರ್ಜಿಗಳ ಪರಿಶೀಲನೆ ನಡೆಯಲಿದೆ. ಮಾರ್ಚ್ 9ಕ್ಕೆ ಉಮೇದುವಾರಿಕೆ ಹಿಂಪಡೆಯಲು ಕೊನೆಯ ದಿನವಾಗಲಿದೆ. ಮಾರ್ಚ್ 16ರ ಬೆಳಿಗ್ಗೆ 9ರಿಂದ ಸಂಜೆ 4ರವರೆಗೆ ಮತದಾನ ನಡೆದು ಸಂಜೆ 5 ನಂತರ ಎಣಿಕೆ ಆರಂಭವಾಗಿ ಅಂತಿಮ ಫಲಿತಾಂಶ ಪ್ರಕಟವಾಗಲಿದೆ.‌

Related Articles

Back to top button