
ಪ್ರಗತಿವಾಹಿನಿ ಸುದ್ದಿ: ಶ್ರೀ ಸಂತ ಶಿರೋಮಣಿ ಭೀಮಾಪ್ಪಾ ಅಜ್ಜ ಅವರಗೋಳ ಅವರ ಸುಕ್ಷೇತ್ರ ಅವರಗೊಳದಿಂದ ಶ್ರೀಕ್ಷೇತ್ರ ಪಂಡರಾಪುರದವರೆಗೆ ಪಲ್ಲಕ್ಕಿ ರಥೋತ್ಸವ ನಡೆಯಲಿದೆ.
ಜ್ಯೇಷ್ಠಮಧ್ಯ ದಶಮಿ 02/07/2024 ರಂದು ಸಂತ ಶಿರೋಮಣಿ ಭೀಮಾಪ್ಪಾ ಅಜ್ಜಾ ಅವರಗೋಳ ಮನೆಯಿಂದ ಪಂಡರಾಪುರದ ಶ್ರೀ ವಿಠ್ಠಲ ರುಕ್ಮಿಣಿ ದೇವಸ್ಥಾನವರೆಗೆ ಪಲ್ಲಕ್ಕಿ ರಥೋತ್ಸವ ನಡೆಯಲಿದೆ. ನಾಳೆ ಮುಂಜಾನೆ 6ಗಂಟೆಗೆ ರಥೋತ್ಸವ ಹೊರಡಲಿದೆ.

ಈ ವಿಶೇಷ ಪಾದಯಾತ್ರೆ ಪಲ್ಲಕ್ಕಿಗಳೊಂದಿಗೆ ಪ್ರಾರಂಭವಾಗಿ ಯಾತ್ರೆಯಲ್ಲಿ ಪಾಲ್ಗೊಳ್ಳುವ ಭಕ್ತರು ತುಳಸಿ ಮಾಲೆ ಧರಿಸಿ, ”ತ್ಯಾಗ, ದಯೆ, ಸೌಹಾರ್ದ, ಅಹಿಂಸೆ, ಪ್ರೀತಿ, ಮಾನವೀಯತೆ, ಕ್ಷಮಾ ಗುಣಗಳೊಂದಿಗೆ ಸರಳ ಜೀವನ ನಡೆಸುತ್ತಾರೆ. ಆಶಾಡ ವಾರಿ ಏಕಾದಶಿ ಉಪವಾಸ ಕೈಗೊಂಡು ಪಾಂಡುರಂಗನ ಕೃಪೆಗೆ ಪಾತ್ರರಾಗುತ್ತಾರೆ. ಭಜನೆ, ಕೀರ್ತನೆಗಳನ್ನು ಮಾಡುತ್ತಾ ಕಾಲ ಕಳೆದಂತೆ ಅಂತರಂಗದಲ್ಲಿ ಭಗವಂತನನ್ನು ಮನದಲ್ಲಿ ಸ್ಮರಿಸಿ,” ಕಾರಣ ಪಾದಯಾತ್ರೆಗೆ ಬರುವ ಭಕ್ತಾದಿಗಳು 01/07/2024 ರಂದು ಮದ್ಯಾಹ್ನ 02:00 ಗಂಟೆಗೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕ ಅವರಗೋಳ ಗ್ರಾಮಕ್ಕೆ ಸಮಸ್ಥ ಸದ್ಭಕ್ತರು ಆಗಮಿಸಬೇಕು ಎಂದು ಕೋರಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ