ಪ್ರಗತಿವಾಹಿನಿ ಸುದ್ದಿ, ನವದೆಹಲಿ – ಭಾರತ -ಚೀನಾ ಮಧ್ಯೆ ನಡೆದ ಘರ್ಷಣೆಯಲ್ಲಿ ತೆಲಂಗಾಣದ ಯೋಧ ಸಂತೋಷ ಬಾಬು ಹುತಾತ್ಮರಾಗಿದ್ದಾರೆ.
ಕಳೆದ ರಾತ್ರಿ ಗಸ್ತು ತಿರುಗುತ್ತಿದ್ದ ವೇಳೆ ಚೀನಾ ಸೈನಿಕರು ಅಪ್ರಚೋದಿತ ದಾಳಿ ನಡೆಸಿ 20 ಭಾರತೀಯ ಸೈನಿಕರನ್ನು ಹತ್ಯೆಗೈದಿದ್ದಾರೆ. ನಂತರ ಭಾರತೀಯ ಸೈನಿಕರು ಮರುದಾಳಿ ನಡೆಸಿ 43 ಚೀನಾ ಸೈನಿಕರನ್ನು ಕೊಂದು ಹಾಕಿದ್ದಾರೆ.
ಲಡಾಖ್ ನ ಗಲ್ವಾನ್ ಗಡಿಯಲ್ಲಿ ಉಭಯ ದೇಶಗಳ ಸೈನಿಕರ ನಡುವೆ ಯಾವುದೇ ಗುಂಡಿನ ದಾಳಿ, ಶಸ್ತ್ರಾಸ್ತ್ರ ಬಳಕೆಯಾಗಿಲ್ಲ. ಪರಸ್ಪರ ಕಲ್ಲುತೂರಾಟ ನಡೆದಿದ್ದು, ಕೈಕೈ ಮಿಲಾಯಿಸಿಕೊಂಡಿದ್ದಾರೆ. ಭಾರತದ ಗಡಿಯೊಳಗೆ ನುಗ್ಗಿದ ಚೀನಾ ಸೈನಿಕರು ಮೂವರು ಭಾರತೀಯ ಸೈನಿಕರನ್ನು ಮೊದಲು ಹತ್ಯೆಗೈದಿದ್ದಾರೆ. ಘರ್ಷಣೆಯಲ್ಲಿ ಭಾರತೀಯ ಸೇನೆಯ ಓರ್ವ ಸೈನ್ಯಾಧಿಕಾರಿ ಸೇರಿ 20 ಸೈನಿಕರು ಹುತಾತ್ಮರಾಗಿದ್ದಾರೆ.
ಶಾಂತಿ ಮಾತುಕತೆ ಬಳಿಕ ಎರಡೂ ದೇಶಗಳ ಸೈನಿಕರನ್ನು ಗಡಿಯಿಂದ ಹಿಂಪಡೆಯುವ ಪ್ರಕ್ರಿಯೆ ನಡುವೆಯೇ ಚೀನಿ ಸೈನಿಕರು ಉದ್ಧಟತನ ಮೆರೆದಿರುವುದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಕಲ್ಲುತೂರಾಟದಲ್ಲಿ ಎರಡೂ ಕಡೆಯ ಸೈನಿಕರಿಗೆ ಗಾಯಗಳಾಗಿವೆ.
20 ಭಾರತೀಯ, 43 ಚೀನಾ ಸೈನಿಕರ ಹತ್ಯೆ
ಭಾರತ-ಚೀನಾ ಗಡಿಯಲ್ಲಿ ಸಂಘರ್ಷ; ಮೂವರು ಭಾರತೀಯ ಯೋಧರು ಹುತಾತ್ಮ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ