Latest

ಚಂದನವನದಲ್ಲಿ ಕೃಷ್ಣನ ಊರಿನ ಬೆಡಗಿ

 ಪ್ರಗತಿವಾಹಿನಿ ಸುದ್ದಿ, ಮಂಗಳೂರು –  ಅನೇಕ ಅನೇಕ ಪ್ರತಿಭಾವಂತರನ್ನು ಕರಾವಳಿ ಕನ್ನಡ ಹಾಗು ವಿಶ್ವ ಚಿತ್ರರಂಗಕ್ಕೆ ಕೊಡುಗೆ ನೀಡಿದೆ.. ಇದೀಗ ಈ ಸಾಲನ್ನು ಸೇರಲು ಕರಾವಳಿಯಿಂದ ಮತ್ತೊಂದು ಸುಂದರ ಬೆಡಗಿ ಹೊರಟಿದ್ದಾಳೆ. ಈ ಪ್ರತಿಭಾವಂತ ಯುವನಟಿಯ ಹೆಸರೇ ನಿಖಿತಾ ದೇವಾಡಿಗ..

ಕೃಷ್ಣನ ಊರು ಉಡುಪಿಯ ಕಟಪಾಡಿ ನಿವಾಸಿ ನಿಖಿತಾ ಸದ್ಯ ಎಂಜಿನೀಯರಿಂಗ್ ವಿದ್ಯಾರ್ಥಿನಿಯಾಗಿದ್ದು ವಿದ್ಯಾಭ್ಯಾಸದ ಜೊತೆಗೆ ನಟನೆಯ ಕನಸು ಕಂಡವರು. ಯಶಸ್ವಿ ನಟಿಯಾಗುವ ಬಯಕೆ ಹೊಂದಿದ್ದ ನಿಖಿತಾಗೆ ಮೊದಲ ಚಿತ್ರದಲ್ಲಿ ನಟಿಯಾಗುವ ಅದೃಷ್ಟ ಒಲಿದಿದೆ.. ಸವ್ಯಸಾಚಿ ಕ್ರಿಯೇಷನ್ ಅರ್ಪಿಸಿವ ಕನಿಕ ಕವಿತಾ ಪೂಜಾರಿ ನಿರ್ಮಿಸುತ್ತಿರುವ ಗಣಿ ದೇವ್ ಕಾರ್ಕಳ ಅವರ ಎರಡನೇ ನಿರ್ದೇಶನದ ಜಿಷ್ಣು ಎಂಬ ಪಂಚಭಾಷಾ ಚಿತ್ರದಲ್ಲಿ ಅಭಿನಯಿಸುತ್ತಿರುವ ನಿಖಿತಾ ಮೊದಲ ಚಿತ್ರದಲ್ಲೇ ಕನ್ನಡ, ಮಲಯಾಳಂ, ತಮಿಳ್, ಹಿಂದಿ, ತೆಲುಗು ಹೀಗೆ ಪಂಚ ಭಾಷೆಗೆ ಕಾಲಿಡುತ್ತಿರುವ ಮೊದಲ ಕರಾವಳಿ ಪ್ರತಿಭೆ ಎನ್ನುವ ಹೆಗ್ಗಳಿಕೆ ಪಡೆಯಲಿದ್ದಾರೆ…

ಸದಾ ತನ್ನ ಸಾಧನೆಯಲ್ಲಿ ಹೆತ್ತವರ ಸಹಯೋಗ ನೆನಪಿಸುವ ನಿಖಿತಾ ತನ್ನ ಎಲ್ಲ ಸಾಧನೆಗೆ ಅವರೇ ಪ್ರೇರಣೆ ಎನ್ನುತ್ತಾರೆ… ಕನ್ನಡ ಚಿತ್ರರಂಗದಲ್ಲಿ ಏನಾದರೂ ಸಾಧಿಸಬೇಕು ಎಂದು ಕನಸು ಕಂಡಿರುವ ಬೆಳಂದಿಗಳ ಬಾಲೆ ಈಕೆ.

Home add -Advt

Related Articles

Back to top button