ಪ್ರಗತಿವಾಹಿನಿ ಸುದ್ದಿ; ಮೈಸೂರು: ಕೆ.ಎಸ್.ಮಂಜುನಾಥ್ ಅಲಿಯಾಸ್ ಸ್ಯಾಂಟ್ರೋ ರವಿ ಸೇರಿದಂತೆ ಒಟ್ಟು ನಾಲ್ವರನ್ನು ಬಂಧಿಸಲಾಗಿದೆ ಎಂದು ಕಾನೂನು ಹಾಗೂ ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ತಿಳಿಸಿದ್ದಾರೆ.
ಮೈಸೂರು ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಎಡಿಜಿಪಿ ಅಲೋಕ್ ಕುಮಾರ್, ಸ್ಯಾಂಟ್ರೋ ರವಿಯನ್ನು ಇಂದು ಗುಜರಾತ್ ನ ಅಹಮದಾಬಾದ್ ನಲ್ಲಿ ಬಂಧಿಸಲಾಗಿದೆ. ಬೆಳಿಗ್ಗೆ 11 ಗಂಟೆಗೆ ಆತ ಗುಜರಾತ್ ಗೆ ಎಂಟ್ರಿಯಾಗಿದ್ದ ಮೈಸೂರು ಪೊಲೀಸರು ಗುಜರಾತ್ ಪೊಲೀಸರ ಸಹಾಯದಿಂದಾಗಿ ಆತನನ್ನು ಬಂಧಿಸಿದ್ದಾರೆ ಎಂದು ತಿಳಿಸಿದರು.
ಸ್ಯಾಂಟ್ರೋ ರವಿ ಸೇರಿ ಒಟ್ಟು ನಾಲ್ವರನ್ನು ಬಂಧಿಸಲಾಗಿದೆ. ಸ್ಯಾಂಟ್ರೋ ರವಿ, ರಾಮ್ ಜಿ, ಸತೀಶ್ ಹಾಗೂ ಮಧುಸೂಧನ್ ಬಂಧಿತರು. ಸ್ಯಾಂಟ್ರೋ ರವಿ ಒಬ್ಬ ವೈಟ್ ಕಾಲರ್ ಕ್ರಿಮಿನಲ್. ಎಸ್ಕೇಪ್ ಆಗೋದು ಹೇಗೆ ಎಂಬುದು ಆತನಿಗೆ ಚೆನ್ನಾಗಿ ಗೊತ್ತು, ಹತ್ತಾರು ಬಾರಿ ಎಕೇಪ್ ಆಗೋಕೆ ಯತ್ನಿಸಿದ್ದಾನೆ. ಈ ಹಿಂದೆ 2005ರಲ್ಲಿ ಆತನನ್ನು ಗೂಂಡಾಕಾಯ್ದೆಯಡಿಯಲ್ಲಿ ಬಂಧಿಸಲಾಗಿತ್ತು. 11 ತಿಂಗಳ ಕಾಲ ಜೈಲುಸೇರಿದ್ದ. ಬಳಿಕ ಹೊರಬಂದಿದ್ದ .
ಪೊಲೀಸರ ದಿಕ್ಕುತಪ್ಪಿಸಲು ಲೊಕೇಷನ್ ಗೊತ್ತಾಗಬಾರದೆಂದು ಮೊಬೈಲ್, ಸಿಮ್ ಕಾರ್ಡ್ ಬದಲಿಸಿ ಓಡಾಡುತ್ತಿದ್ದ. ತನ್ನ ಗೆಟಪ್ ನ್ನು ಬದಲಿಸಿಕೊಂಡಿದ್ದ. ಅಹಮದಾಬಾದ್ ನಿಂದ ಆತನನ್ನು ರಾಜ್ಯಕ್ಕೆ ಕರೆತರಲಾಗುತ್ತಿದೆ ಎಂದು ಮಾಹಿತಿ ನೀಡಿದರು.
*BREAKING NEWS: ಸ್ಯಾಂಟ್ರೋ ರವಿ ಅರೆಸ್ಟ್*
https://pragati.taskdun.com/santro-raviarrestedgujarat/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ