Latest

ಕೋರ್ಟ್ ಮೆಟ್ಟಿಲೇರಿದ ಶಿಲ್ಪಾ ಶೆಟ್ಟಿ ದಂಪತಿ; ಕಾರಣ ಗೊತ್ತೇ?

ಪ್ರಗತಿವಾಹಿನಿ ಸುದ್ದಿ; ಮುಂಬೈ: ಅಶ್ಲೀಲ ಚಿತ್ರ ನಿರ್ಮಾಣ ಪ್ರಕರಣದಲ್ಲಿ ಜೈಲು ಸೇರಿ ಬಿಡುಗಡೆಯಾಗಿರುವ ಉದ್ಯಮಿ ರಾಜ್ ಕುಂದ್ರಾ ಹಾಗೂ ಬಾಲಿವಿವುಡ್ ನಟಿ ಶಿಲ್ಪಾ ಶೆಟ್ಟಿ ದಂಪತಿ ಶರ್ಲಿನ್ ಚೋಪ್ರಾ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.

ಅಶ್ಲೀಲ ಚಿತ್ರ ದಂಧೆಯಲ್ಲಿ ಶರ್ಲಿನ್ ಚೋಪ್ರಾ ಹೆಸರು ಕೇಳಿಬಂದಿದ್ದು, ತನ್ನನ್ನು ರಾಜ್ ಕುಂದ್ರಾ ಮೋಸದಿಂದ ಅಶ್ಲೀಲ ಸಿನಿಮಾ ದಂಧೆಗೆ ಎಳೆದು ತಂದರು ಎಂದು ಆರೋಪಿಸಿದ್ದರು. ಶಿಲ್ಪಾ ಶೆಟ್ಟಿ ವಿರುದ್ಧವೂ ಆರೋಪ ಮಾಡಿದ್ದ ಶರ್ಲಿನ್, ತನಗೆ ರಾಜ್ ಕುಂದ್ರಾ ಹಾಗೂ ಶಿಲ್ಪಾ ಶೆಟ್ಟಿ ಇಬ್ಬರೂ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದುದಾಗಿ ಹೇಳಿದ್ದರು.

Home add -Advt

ಅಶ್ಲೀಲ ಸಿನಿಮಾ ನಿರ್ಮಾಣ ದಂಧೆಯಲ್ಲಿ ಪ್ರಮುಖ ಆರೋಪಿಯಾಗಿ ಜೈಲುಸೇರಿದ್ದ ರಾಜ್ ಕುಂದ್ರಾ ಎರಡು ತಿಂಗಳ ಬಳಿಕ ಬಿಡುಗಡೆಯಾಗಿದ್ದು, ಬಿಡುಗಡೆಯಾದ ಬೆನ್ನಲ್ಲೇ ಇದೀಗ ಶಿಲ್ಪಾ ಶೆಟ್ಟಿ, ರಾಜ್ ಕುಂದ್ರಾ ದಂಪತಿ ಶರ್ಲಿನ್ ಚೋಪ್ರಾ ವಿರುದ್ಧ 50 ಕೋಟಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.

ಒಂದು ವಾರದ ಒಳಗಾಗಿ ಶರ್ಲಿನ್ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು ಇಲ್ಲವೇ 50 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ ಪ್ರಕರಣದಡಿ ಹಣ ಪಾವತಿಸಬೇಕು ಎಂದು ಕೋರ್ಟ್ ಮೊರೆ ಹೋಗಿದ್ದಾರೆ.

ಸೋದರನಂತೆ ನಂಬಿದ್ದ ರಾಹುಲ್ ನಿಂದ ವಂಚನೆ; ಕಾನೂನು ಹೋರಾಟಕ್ಕೆ ಮುಂದಾದ ಸಂಜನಾ

Related Articles

Back to top button