Kannada NewsKarnataka NewsLatest

ರಮೇಶ್ ಜಾರಕಿಹೊಳಿಗೆ ಸತೀಶ್ ಜಾರಕಿಹೊಳಿ ಕಿವಿ ಮಾತು

ಇತಿ, ಮಿತಿಯಲ್ಲಿರಬೇಕು, ಜನ ಗಮನಿಸುತ್ತಿರುತ್ತಾರೆ

 

ಪ್ರಗತಿವಾಹಿನಿ ಸುದ್ದಿ, ಗೋಕಾಕ – ಸಚಿವ ರಮೇಶ ಜಾರಕಿಹೊಳಿ ಸಿಡಿ ಪ್ರಕರಣದ ಕುರಿತು ಕಾಂಗ್ರೆಸ್ ಶಾಸಕ ಸತೀಶ ಜಾರಕಿಹೊಳಿ ಪ್ರತಿಕ್ರಿಯ ನೀಡಿದ್ದಾರೆ.  ಸಹೋದರ ರಮೇಶ್ ಜಾರಕಿಹೊಳಿ ನಡೆ, ನುಡಿಯ ಕುರಿತು ಹಿಂದಿನಿಂದಲೂ ಎಚ್ಚರಿಕೆ ನೀಡುತ್ತ ಬಂದಿರುವ ಸತೀಶ್, ಈಗಲೂ ಕೆಲವು ಸಲಹೆಗಳನ್ನು ನೀಡಿದ್ದಾರೆ.

ಸಿಡಿ ಬಗ್ಗೆ ಮಾಹಿತಿ ಇಲ್ಲ. ನಾವು ಬೆಲೆ ಏರಿಕೆ ಕುರಿತು ಪ್ರತಿಕ್ರಿಯಿಸುತ್ತೇವೆ. ಸಿಡಿ ಸತ್ಯಾಸತ್ಯತೆ ಕುರಿತು ತನಿಖೆಯಾಗಲಿ. ಸತ್ಯ ಹೊರಬರಲಿ. ಕಾದು ನೋಡೋಣ ಎಂದಿದ್ದಾರೆ ಸತೀಶ್.

ಜೊತೆಗೆ, ರಮೇಶ ಜಾರಕಿಹೊಳಿ ಸಾಕಷ್ಟು ಬದಲಾಗಬೇಕು. ಹಿಂದೂ ಸಾಕಷ್ಟು ಬಾರಿ ಹೇಳಿದ್ದೇನೆ. ಅಧಿಕಾರದಲ್ಲಿದ್ದಾಗ ಇತಿ ಮಿತಿಯಲ್ಲಿರಬೇಕು. ಜನ ಎಲ್ಲವನ್ನೂ ಗಮನಿಸುತ್ತಿರುತ್ತಾರೆ ಎಂದು ಕಿವಿಮಾತು ಹೇಳಿದ್ದಾರೆ.

Home add -Advt

ಆಗಿದೆ, ಏನೂ ಮಾಡಕ್ಕಾಗಲ್ಲ. ಅವರದ್ದು ಸ್ಪೀಡ್ ಗಾಡಿ ಇದೆ. ಸೌಹಾರ್ದತೆಯಿಂದ ರಾಜಕೀಯ ಮಾಡಿಕೊಂಡು ಹೋಗಬೇಕು. ಅಧಿಕಾರ ಇರುತ್ತದೆ, ಹೋಗುತ್ತದೆ. ಜನ ಶಾಶ್ವತವಾಗಿರುತ್ತಾರೆ. ನಮ್ಮ ನಡೆ ನುಡಿಯನ್ನು ಎಲ್ಲರೂ ಗಮನಿಸುತ್ತಿರುತ್ತಾರೆ ಎಂದೂ ಅವರು ಎಚ್ಚರಿಕೆ ನೀಡಿದರು.

ಸೋಮವಾರದಿಂದ ಅಧಿವೇಶನಕ್ಕೆ ಹೋಗುತ್ತೇನೆ. ಅಲ್ಲಿಯವರೆಗೆ ಕ್ಷೇತ್ರದಲ್ಲಿ ಬೇರೆ ಬೇರೆ ಕಾರ್ಯಕ್ರಮಗಳು ನಿಗದಿಯಾಗಿವೆ ಎಂದು ಸತೀಶ್ ಜಾರಕಿಹೊಳಿ ತಿಳಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button