Belagavi NewsBelgaum News

*ಸರ್ಕಾರದ ಯೋಜನೆ ಸದುಪಯೋಗ ಪಡೆದುಕೊಂಡು ಉದ್ಯಮಿಯಾಗಿ: ಸಚಿವ ಸತೀಶ ಜಾರಕಿಹೊಳಿ ಕರೆ*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ: ಹಳೆಯ ಸಂಸ್ಕೃತಿಗಳನ್ನು ಗುರುತಿಸಿ ಮುನ್ನಡೆಸಿಕೊಂಡು ಹೋಗಲು ಅನುಕೂಲಕರವಾಗಿವೆ. ಪಿ.ಎಮ್.ಎಫ್.ಎಮ್.ಇ ಯೋಜನೆಯಿಂದ ಇಂತಹ ಯೋಜನೆಗಳು ತುಂಬಾ ಉದ್ಯಮಿಯಾಗಲು ಒಳ್ಳೆಯ ಅವಕಾಶವಿದ್ದು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಜಾರಕಿಹೊಳಿ ನುಡಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಕೃಷಿ ಇಲಾಖೆ ಮತ್ತು ಕೆಪೆಕ್ ಅಮಿಟೆಡ್ ಬೆಂಗಳೂರು ಇವರ ಜಂಟಿ ಸಹಯೋಗದೊಂದಿಗೆ ಮಂಗಳವಾರ (ಜು.08) ನಗರದ ಕೆ.ಪಿ.ಟಿ.ಸಿ.ಎಲ್. ಸಮುದಾಯ ಭವನಲ್ಲಿ ಜರುಗಿದ ಪ್ರಧಾನ ಮಂತ್ರಿಗಳ ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ ಯೋಜನೆಯ ಜಿಲ್ಲಾ ಮಟ್ಟದ ಅರಿವು ಮೂಡಿಸುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ನಿಮ್ಮದೆ ಆದ ಒಂದು ಒಳ್ಳೆಯ ಗುಣಮಟ್ಟದ ಪದಾರ್ಥಗಳನ್ನ ತಯಾರಿಸಿ ಮಾರಾಟ ಮಾಡುವ ಸಲುವಾಗಿ ಸರ್ಕಾರ ಒಂದು ಒಳ್ಳೆಯ ಯೋಜನೆ ನೀಡಿದೆ ಈ ಯೋಜನೆಯಿಂದಾಗಿ ಪದಾರ್ಥಗಳನ್ನು ತಯಾರಿಸಲು ಬೇಕಾಗುವ ಸಾಮಗ್ರಿಗಳನ್ನು ಖರಿದಿಸಲು ಸರ್ಕಾರದಿಂದ ಸಹಾಯಧನ ನೀಡಲಾಗುತ್ತಿದೆ. ವಿವಿಧ ಪ್ರಕಾರದ ತಿಂಡಿ ತಿನಿಸುಗಳ ಸಣ್ಣಪುಟ್ಟ ವ್ಯಾಪಾರ ಮಾಡುವವರು ತಾವು ತಯಾರಿಸುವ ಪದಾರ್ಥಗಳನ್ನು ಹೆಚ್ಚಾಗಿ ಮಾರಾಟ ಮಾಡಿ ಆರ್ಥಿಕವಾಗಿ ಸಬಲರಾಗಬಹುದು ಎಂದು ತಿಳಿಸಿದರು.

ಈ ಕಾರ್ಯಕ್ರಮಗಳು ಜನರಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮವಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಂಟಿಯಾಗಿ ಸಹಾಯಧನ ನೀಡುತ್ತಿವೆ. ಕೇಂದ್ರ ಸರ್ಕಾರ ರೂ.6 ಲಕ್ಷ ಹಾಗೂ ರಾಜ್ಯ ಸರ್ಕಾರ ರೂ.9 ಲಕ್ಷಗಳ ಸಹಾಯಧನ ನೀಡುತ್ತಿದ್ದು, ಈ ಯೋಜನೆಯಲ್ಲಿ ಹಿಟ್ಟಿನ ಗಿರಣಿ, ಬೆಲ್ಲ ತಯಾರಿಕೆ, ಚಾಕಲೇಟ್, ಸೆಂಡಿಗೆ, ಚಟ್ಟಿ ಪುಡಿಗಳು, ಅಡುಗೆ ಎಣ್ಣೆ ಇಂತಹ ಮುಂತಾದ ಪದಾರ್ಥಗಳನ್ನು ಉತ್ಪಾದನೆ ಮಾಡಿ ಮಾರಾಟ ಮಾಡಬಹುದಾಗಿದೆ ಎಂದರು.

Home add -Advt

ಮಾರುಕಟ್ಟೆಯಲ್ಲಿ ಒಳ್ಳೆಯ ಪದಾರ್ಥಗಳು ಉತ್ತಮ ರೀತಿಯಲ್ಲಿ ಖರೀದಿಸಲ್ಪಡುತ್ತವೆ, ನೀವು ಸಹ ಗುಣಮಟ್ಟದ ಪದಾರ್ಥಗಳನ್ನು ತಯಾರಿಸಿ ವ್ಯಾಪಾರ ವಹಿವಾಟು ಮಾಡಬೇಕು. ಈಗಿರುವಂತಹ ದೊಡ್ಡ ಉದ್ಯಮಿಗಳು ಸಹ ಮೊದಲು ಸಣ್ಣಪುಟ್ಟ ವ್ಯಾಪಾರಗಳನ್ನು ಮಾಡುತ್ತ ಈಗ ದೊಡ್ಡ ಮಟ್ಟದಲ್ಲಿ ಬೆಳೆದಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಜಾರಕಿಹೊಳಿ ಅವರು ತಿಳಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕೆಪೆಕ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಸಿ.ಎನ್.ಶಿವಪ್ರಕಾಶ ಅವರು PMFME ಯೋಜನೆಯು ಮನೆಗಳಲ್ಲಿ ಮಾಡುವಂತಹ ತಿಂಡಿ ಪದಾರ್ಥಗಳು ಹಾಗೂ ಇನ್ನಿತರ ಉತ್ಪನ್ನಗಳನ್ನು ಉತ್ತೇಜಿಸಿ ವ್ಯಾಪಾರ ಮಾಡಲು ಮತ್ತು ಉದ್ಯಮಿ ಆಗಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಂಟಿಯಾಗಿ ಸಹಾಯಧನವನ್ನು ನೀಡಿ ಪ್ರೋತ್ಸಾಹಿಸುತ್ತಿವೆ.

ಸದರಿ ಯೋಜನೆಯ ಸಲುವಾಗಿ ಆಧಿಕಾರಿಗಳು ಇರುತ್ತಾರೆ. ಆಸಕ್ತರು ಕೇವಲ ಅಧಿಕಾರಿಗಳಿಗೆ ತಿಳಿಸಿದರೆ ಆನಲೈನ್ ಮೂಲಕ ಅರ್ಜಿ ಹಾಕಿಸಿ ಅದರ ಸಂಪೂರ್ಣ ಮಾಹಿತಿ ತಿಳಿಸಿ ಸಹಾಯಧನ ಸಿಗುವವರೆಗೆ ನಿಮ್ಮ ಜೊತೆ ಇರುತ್ತಾರೆ. ಅಧಿಕಾರಿಗಳ ಸಹಾಯದಿಂದ ಯೋಜನೆಯ ಮಾಹಿತಿಯನ್ನು ಪಡೆದುಕೊಂಡು ಉದ್ಯಮಿ ಆಗಬಹುದು ಎಂದು ಸಿ.ಎನ್.ಶಿವಪ್ರಕಾಶ ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ ಶಿಂಧೆ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಹೆಚ್.ಡಿ.ಕೋಲೆಕಾರ, ಉಪನಿರ್ದೇಶಕ ಸಲೀಮ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Related Articles

Back to top button