Belagavi NewsBelgaum NewsPolitics
*ಹಳಬರು ಹೋಗ್ತಾರೆ, ಹೊಸಬರು ಬರ್ತಾರೆ; ದೆಹಲಿ ಮಟ್ಟದಲ್ಲಿ ಚರ್ಚೆ; ಸಂಪುಟ ಪುನಾರಚನೆ ಬಗ್ಗೆ ಸಚಿವ ಸತೀಶ್ ಜಾರಕಿಹೊಳಿ ಮಾತು*

ಪ್ರಗತಿವಾಹಿನಿ ಸುದ್ದಿ: ರಾಜ್ಯ ಸಚಿವ ಸಂಪುಟ ಪುನಾರಚನೆ ಬಹುತೇಕ ಖಚಿತವಾಗಿದೆ. ಈ ಬಗ್ಗೆ ಬೆಳಗಾವಿಯಲ್ಲಿ ಪ್ರತಿಕ್ರಿಯಿಸಿರುವ ಸಚಿವ ಸತೀಶ್ ಜಾರಕಿಹೊಳಿ ಹಳಬರು ಹೋಗ್ತಾರೆ, ಹೊಸಬರು ಬರ್ತಾರೆ ಎಂದು ತಿಳಿಸಿದ್ದಾರೆ.
30 ತಿಂಗಳ ಬಳಿಕ ಸಂಪುಟ ಪುನಾರಚನೆ ಮಾಡಬೇಕು ಅಂತಾ ಇತ್ತು. ಈ ಚರ್ಚೆ ಈಗ ಅಂತಿಮ ಹಂತಕ್ಕೆ ಬಂದಿರಬೇಕು. ಹಾಗಾಗಿ ಹಳಬರು ಹೋಗಿ, ಹೊಸಬರು ಬರ್ತಾರೆ. ಯಾರಿಗೆ ಕೊಕ್ ಕೊಡ್ತಾರೆ ಎಂಬುದು ಹೈಕಮಾಂಡ್ ಗೆ ಬಿಟ್ಟಿದ್ದು ಎಂದಿದ್ದಾರೆ.
ನಿನ್ನೆ ಮೊದಲ ಬಾರಿಗೆ ಸಿಎಂ ಸಿದ್ದರಾಮಯ್ಯನವರೇ ಬಹಿರಂಗವಾಗಿ ಹೇಳಿದ್ದಾರೆ. ಹಾಗಾಗಿ ದೆಹಲಿ ಮಟ್ಟದಲ್ಲಿ ಚರ್ಚೆ ಆಗಿದ್ದರೂ ಆಗಿರಬಹುದು. ಸಿಎಂ, ಡಿಸಿಎಂ, ಹೈಕಮಾಂಡ್ ಮಟ್ಟದಲ್ಲಿ ಚರ್ಚೆಯಾಗಿರಬಹುದು ಎಂದರು.



