Kannada NewsLatest

ಕೃಷಿ ಸಚಿವರ ವಿರುದ್ಧ ಭ್ರಷ್ಟಾಚಾರ ಆರೋಪ; ತಕ್ಷಣ ತನಿಖೆಯಾಗಲಿ; ಸತೀಶ್ ಜಾರಕಿಹೊಳಿ ಆಗ್ರಹ

ಪ್ರಗತಿವಾಹಿನಿ ಸುದ್ದಿ; ಗೋಕಾಕ: ಭ್ರಷ್ಟಾಚಾರ ಆರೋಪ ಯಾರೇ ಮೇಲೆ ಕೇಳಿ ಬಂದರೂ ತಕ್ಷಣ ತನಿಖೆ ಆಗಬೇಕು ಎಂದು ಕೆಪಿಸಿಸಿ ಕಾರ್ಯಾಧಕ್ಷ ಸತೀಶ್ ಜಾರಕಿಹೊಳಿ ಅವರು ಹೇಳಿದರು.

ಇಂದು ನಗರದ ಹಿಲ್ ಗಾರ್ಡನ್ ಕಛೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ ಅವರು ಬಿ ಸಿ ಪಾಟೀಲ್ ಅವರ ಮೇಲೆ ಭ್ರಷ್ಟಾಚಾರ ಆರೋಪ ಕೇಳಿ ಬಂದಿದ್ದೂ ಈಗಾಗಲೇ ಎಸಿಬಿಯಲ್ಲಿ ದೂರು ದಾಖಲಾಗಿದೆ, ಸಾಕ್ಷ್ಯಗಳು ಸಿಕ್ಕರೆ ಮುಂದಿನ ಹೋರಾಟ ಮಾಡುತ್ತೆವೆ. ಯಾರೆ ಆಗಲಿ ಭ್ರಷ್ಟಾಚಾರ ಆರೋಪ ಬಂದಾಗ ತಕ್ಷಣ ತನಿಖೆ ಆಗಬೇಕು ಎಂದು ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದರು.

ವಿಧಾನ ಮಂಡಲ ಅಧಿವೇಶನ: ಜನರನ್ನು ತತ್ತರಗೊಳಿಸಿರುವ ಬೆಲೆ ಏರಿಕೆ, ಕುಸಿದಿರುವ ಕಾನೂನು ಸುವ್ಯವಸ್ಥೆ ಸೇರಿದಂತೆ ಹಲವು ವಿಚಾರಗಳನ್ನು ಇಟ್ಟುಕೊಂಡು ಸೆ.13ರಿಂದ ಆರಂಭವಾಗುವ ರಾಜ್ಯ ವಿಧಾನಮಂಡಲ ಅಧಿವೇಶನದಲ್ಲಿ ಧ್ವನಿ ಎತ್ತುವೆವು ಎಂದರು.

ನಂತರ ಗಣೇಶ ಹಬ್ಬಕ್ಕೆ ಕೇವಲ ಎರಡು ದಿನ ಬಾಕಿಯಿದ್ದಾಗ ಸಾರ್ವಜನಿಕ ಸ್ಥಳಗಳಲ್ಲಿ 4 ಅಡಿ, ಮನೆಗಳಲ್ಲಿ 2 ಅಡಿ ಎತ್ತರದ ಗಣೇಶ ಮೂರ್ತಿಗಳ ಮೇಲೆ ಅರ್ಥವಿಲ್ಲದ ನಿರ್ಬಂಧವನ್ನು ವಿಧಿಸುವ ರಾಜ್ಯ ಸರ್ಕಾರದ ಹೊಸ ನಿರ್ಧಾರವು ಮೂರ್ತಿ ತಯಾರಕರ ಜೀವನವನ್ನು ತೊಂದರೆಗೊಳಿಸುತ್ತಿದೆ ಮೊದಲೇ ಮಾರ್ಗಸೂಚಿಗಳನ್ನು ತಿಳಿಸಬೇಕು ಅದನ್ನು ಬಿಟ್ಟು ಸರಕಾರ ಬೆಳಗ್ಗೆ ಒಂದು ಸಂಜೆಯೊಂದು ಮಾರ್ಗಸೂಚಿ ಮಾಡಿ ಜನರನ್ನ ಗೊಂದಲ ಮಾಡುತ್ತಿದೆ ಎಂದು ಹೇಳಿದರು.

ಸೋಮವಾರದಿಂದ ವಿಧಾನ ಮಂಡಲ ಅಧಿವೇಶನ; ಬೊಮ್ಮಾಯಿ ಸರಕಾರಕ್ಕೆ ಮೊದಲ ಅಧಿವೇಶನ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button