ಪ್ರಗತಿವಾಹಿನಿ ಸುದ್ದಿ; ಗೋಕಾಕ: ತೈಲ ಬೆಲೆ ಏರಿಳಿಸುವುದರಲ್ಲಿ ಮೋದಿ ಮ್ಯಾಜಿಕ್ ಮ್ಯಾನ್, ಇನ್ನರೆಡು ದಿನಗಳಲ್ಲಿ ತೈಲ ಬೆಲೆ ಯಥಾಸ್ಥಿಗೆ ಬರಲಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಲೇವಡಿ ಮಾಡಿದರು.
ನಗರದ ಹಿಲ್ ಗಾರ್ಡನ್ ನಲ್ಲಿ ಮಾದ್ಯಮದವರೊಂದಿಗೆ ಮಾತನಾಡಿದ ಅವರು, ತೈಲ ಬೆಲೆ ಇಳಿಕೆ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಆಡಳಿತದಲ್ಲಿದಾಗ ಜನರಿಗೆ ಯಾವುದೇ ಹೊರೆಯಾಗಿಲ್ಲ. ಆದರೆ ದೇಶದಲ್ಲಿ ಮೋದಿ ಮ್ಯಾಜಿಕ್ ನಿಂದ ಇದೇಲ್ಲ ಸರ್ಕಸ್ ನಡೆಯುತ್ತಿದೆ ಎಂದರು.
ಬಿಜೆಪಿ ತಮ್ಮಲ್ಲಿರುವ ಹುಳುಕು ಸರಿಪಡಿಸಿಕೊಳ್ಳಲಿ: ರಾಜ್ಯದಲ್ಲಿ ಬಿಜೆಪಿ ಕಟ್ಟಿ ಬೆಳೆಸಿದ ಮಹಾ ನಾಯಕ ಯಡಿಯೂರಪ್ಪ ಅವರನ್ನು ಕಡೆಗೆನಿಸಲಾಗುತ್ತಿದೆ. ಮೊದಲು ತಮ್ಮಲಿರುವ ಹುಳುಕನ್ನುಬಿಜೆಪಿ ಸರಿಪಡಿಸಿಕೊಳ್ಳಲಿ, ಆಮೇಲೆ ವಿರೋಧ ಪಕ್ಷದ ಕುರಿತು ಮಾತನಾಡಲಿ ಎಂದು ಎಚ್ಚರಿಕೆ ನೀಡಿದ ಅವರು, ನಮ್ಮ ಪಕ್ಷದಲ್ಲಿ ಯಾವುದೇ ರೀತಿ ಗೊಂದಲಗಳಿಲ್ಲ. ಒಂದು ವೇಳೆ ಗೊಂದಲಗಳು ಬಂದರೆ ನಾವೇಲ್ಲಾ ಒಂದುಗೂಡಿ ನಮ್ಮಲಿಯೇ ಬಗೆಹರಿಸಿಕೊಳ್ಳುತ್ತೆವೆ. ಮೊದಲು ಬಿಜೆಪಿ ತಮ್ಮಲ್ಲಿರುವ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲಿ ಎಂದು ಚಾಟಿ ಬೀಸಿದರು.
ಕಾಂಗ್ರೆಸ್‌ದಲ್ಲಿ ಕಾರ್ಯಕರ್ತರಿಗೆ ಟಿಕೆಟ್ ನೀಡಿರುವುದು ಒಳ್ಳೆಯ ಬೆಳವಣಿಗೆ, ಇದರಿಂದ ಕಾರ್ಯಕರ್ತರಿಗೆ ಕೆಲಸ ಮಾಡಲು ಹುಮ್ಮಸು ಹೆಚ್ಚಿಸುತ್ತಿದೆ.ಈಗಾಗಲೇ ಕಾಂಗ್ರೆಸ್ ನಿಂದ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗಿದ್ದು, ಅಭ್ಯರ್ಥಿಗಳು ಈಗಾಗಲೇ ಬಾಗಲಕೋಟೆ, ವಿಜಯಪುರ, ಬೆಳಗಾವಿ ಭಾಗದಲ್ಲಿ ಪ್ರಚಾರ ಕೈಗೊಂಡಿದ್ದಾರೆ. ಅಲ್ಲದೇ ನಾಳೆಯೇ ನಾಮಪತ್ರ ಸಲ್ಲಿಕೆ ದಿನದಂದು ಕಾಂಗ್ರೆಸ್ ಘಟನಾಘಟಿ ನಾಯಕರು ಭಾಗವಹಿಸಲಿದ್ದಾರೆ. ಇದಾದ ನಂತರ ಅಭ್ಯರ್ಥಿಗಳ ಪ್ರಚಾರದಲ್ಲಿನಾವೇಲ್ಲರೂ ಭಾಗವಹಿಸಿ ಅವರ ಗೆಲುವಿಗೆ ಶ್ರಮಿಸಲಾಗುವುದು ಎಂದರು.
ಈ ಭಾಗದಲ್ಲಿ ಪ್ರಕಾಶ ಹುಕ್ಕೇರಿ ಅಭಿವೃದ್ದಿ ಕಾರ್ಯಗಳನ್ನು ಮಾಡಿದ್ದಾರೆ. ಅವರಿಗೆ ಮತದಾರರು ಮಣೆ ಹಾಕುವದರಲ್ಲಿ ಎರಡು ಮಾತಿಲ್ಲ. ರಾಜಕೀಯದಲ್ಲಿ ನುರಿತ ನಾಯಕನಿಗೆ ಶಿಕ್ಷಕರ ಹೊಂದಾಣಿಕೆ ಇಲ್ಲದೇ ಇರಬಹುದು, ಆದರೆ ಕೆಲಸ ಮಾಡಲು ಯಾವುದೇ ತೊಂದರೆ ಇಲ್ಲ. ನಮ್ಮ ಪಕ್ಷದಿಂದ ಸಮರ್ಥ ನಾಯಕನನ್ನು ಕಣಕ್ಕೆ ಇಳಿಸಲಾಗಿದೆ. ಗೆಲುವು ನಮ್ಮದೇ ಎಂದು ಸ್ಪಷ್ಟ ಪಡಿಸಿದರು.
ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಪೂಜೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ