Belagavi NewsBelgaum NewsKannada NewsKarnataka NewsLatestPolitics

*ಮೂರು ಡಿಸಿಎಂ ಹುದ್ದೆ ಹೈಕಮಾಂಡ್‌ ತೀರ್ಮಾನ ಮಾಡಲಿದೆ: ಸಚಿವ ಸತೀಶ ಜಾರಕಿಹೊಳಿ*

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ರಾಜ್ಯಕ್ಕೆ ಮೂರು ಡಿಸಿಎಂ ಹುದ್ದೆ ಅಗ್ಯವಿದೆ ಎಂಬುವುದನ್ನು ಹೈ ಕಮಾಂಡ್‌ ತೀರ್ಮಾನ ಮಾಡಲಿದೆ.  ಸಚಿವ ಕೆ.ಎನ್.ರಾಜಣ್ಣ ಹೇಳಿಕೆ ಬಗ್ಗೆ  ವಿಚಾರಿಸಲು ಕಾಲಾವಕಾಶವಿದೆ.   ಕೇವಲ ಸಚಿವರು ಬೇಡಿಕೆ ಇಟ್ಟಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಸ್ಪಷ್ಟನೆ ನೀಡಿದರು.

ನಗರದಲ್ಲಿ ಮಾದ್ಯಮಗಳೊಂದಿಗೆ ಮಾತನಾಡಿದ ಅವರು,   ಮೂವರು ಡಿಸಿಎಂಗಳನ್ನು ಮಾಡುವಂತೆ ಹೈಕಮಾಂಡ್‌ಗೆ ಪತ್ರವನ್ನು  ಸಚಿವ ಕೆ.ಎನ್‌. ರಾಜಣ್ಣ   ಬರೆದಿರುವ ವಿಚಾರ ತಿಳಿದಿದೆ.   ಸಚಿವ ಕೆ.ಎನ್.ರಾಜಣ್ಣ ಹೇಳಿದ ಮೇಲೆ ಚರ್ಚೆ ಶುರುವಾಗಬಹುದು. ಅವಶ್ಯಕತೆ ಇದೆಯೋ ಅಥವಾ ಇಲ್ಲವೋ ಎನ್ನುವುದು ಪಕ್ಷ ತೀರ್ಮಾನ ಮಾಡಬೇಕು.  ಉಪಮುಖ್ಯಮಂತ್ರಿ ಸ್ಥಾನ ಬೇಕೆಂದು ಬಹಳಷ್ಟು ಜನ ಹೇಳಿದ್ದಾರೆ. ಅವರವರ ಸಾಮರ್ಥ್ಯ ನೋಡಿ ಪಕ್ಷ ಡಿಸಿಎಂ ಮಾಡುತ್ತೆ ಎಂದು ಬೆಳಗಾವಿ ನಗರದಲ್ಲಿ ಪಿಡಬ್ಲ್ಯೂಡಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.

ಕೆ.ಎನ್.ರಾಜಣ್ಣ ಹೇಳಿದ್ದೇನು?

ನಿನ್ನೆ ಸಚಿವ ಕೆ.ಎನ್.ರಾಜಣ್ಣ ಅವರು ಮುಂಬರುವ ಲೋಕಸಭಾ ಚುನಾವಣೆಯನ್ನು ಸುಲಭವಾಗಿ ಗೆಲ್ಲಲು ಮೂರು ಸಮುದಾಯದ ನಾಯಕರುಗಳಿಗೆ ಉಪಮುಖ್ಯಮಂತ್ರಿ ಸ್ಥಾನವನ್ನು ನೀಡಬೇಕು ಎಂದು ಹೈಕಮಾಂಡ್ ಗೆ ಪತ್ರ ಬರೆಯುತ್ತೇನೆ ಎಂದು ಹೇಳಿದ್ದರು.

ಸಚಿವರ ಈ ಹೇಳಿಕೆಗೆ ಕಾಂಗ್ರೆಸ್ ಪಕ್ಷದಲ್ಲಿಯೇ ಹಲವು ಹಿರಿಯ ನಾಯಕರು ಪರ ಹಾಗೂ ವಿರೋಧ ಹೇಳಿಕೆಯನ್ನು ನೀಡಿದ್ದರು. ಇದೀಗ ಸಚಿವ ಸತೀಶ್ ಜಾರಕಿಹೊಳಿಯವರು ನಾನಂತೂ ಡಿಸಿಎಂ ಆಕಾಂಕ್ಷಿ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಸರ್ಕಾರದ ಯೋಜನೆ ರಾಜ್ಯದ ಜನರಿಗೆ ತುಂಬಾ ಉಪಯುಕ್ತವಾಗಿದೆ. ಅದರಲ್ಲಿ 2 ಕೋಟಿ ಜನತೆ ನಮ್ಮ ಪರವಾಗಿ ಇದ್ದಾರೆ ಎಂಬ ನಂಬಿಕೆ ನಮಗಿದೆ ಎಂದು ಹೇಳಿದರು.

ಜಿಲ್ಲೆ ವಿಭಜನೆಗೆ ಕಾಲ ಬಂದೇ ಬರಲಿದೆ:

ಲೋಕಸಭಾ ಚುನಾವಣೆ  ಸಮೀಪಿಸುತ್ತಿದೆ ಜಿಲ್ಲೆ ವಿಭಜನೆ ಬಗ್ಗೆ ಸರ್ಕಾರದ ತೀರ್ಮಾನ ಏನಿದೆ ಎಂಬ ಮಾದ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ  ಸಚಿವ ಸತೀಶ ಜಾರಕಿಹೊಳಿ, ಜಿಲ್ಲೆ ವಿಭಜನೆಗೆ ಕಾಲ ಬಂದೇ ಬರಲಿದೆ. ಬಂದಾಗ ವಿಚಾರ ಮಾಡೋಣ ಎಂದು ಹೇಳಿದರು.

ಗೃಹ ಸಚಿವ ಜಿ.ಪರಮೇಶ್ವರ ಅವರು ಹಾಗೂ ನಾವು  ಶಾಸಕ ಬಿ.ಕೆ. ಹರಿಪ್ರಸಾದ ಮನೆಗೆ ಹೋಗಿರುವುದು ನಿಜ. ಅವರು ನಮ್ಮ ಪಕ್ಷದ  ಹಿರಿಯ ನಾಯಕರು ಬೇಟಿಯಾಗಿ ಪಕ್ಷದ ಬಗ್ಗೆ  ಚರ್ಚೆ ನಡೆಸಿದ್ದೇವೆ ಎಂದು ಹೇಳಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button