Latest

ಪೂಜಾ ಹೆಗ್ಡೆ ಸ್ಕರ್ಟ್ ತುದಿ ಕಚ್ಚಿದ ಸಲ್ಮಾನ್ ಖಾನ್, ನೆಟ್ಟಿಗರಿಂದ ಟ್ರೋಲ್

ಪ್ರಗತಿ ವಾಹಿನಿ ಸುದ್ದಿ ಮುಂಬೈ –  ಬಾಲಿವುಡ್ ನಟ ಸಲ್ಮಾನ್ ಖಾನ್‌ರನ್ನು ಸದಾ ಒಂದಲ್ಲ ಒಂದು ವಿವಾಧ ಸುತ್ತಿಕೊಳ್ಳುತ್ತಲೇ ಇರುತ್ತದೆ. ಸಧ್ಯ ಅವರು ಸ್ಟೇಜ್ ಮೇಲೆ ಡ್ಯಾನ್ಸ್ ಮಾಡುವಾಗ ನಟಿ ಪೂಜಾ ಹೆಗಡೆಯ ಹಿಂಬದಿಯಿಂದ ಬಂದು ಸ್ಕರ್ಟ್ ತುದಿಯನ್ನು ಕಚ್ಚಿದ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದೆ. ಇನ್ನೊಂದೆಡೆ ಸ್ವತಃ ಸಲ್ಮಾನ್ ಖಾನ್ ಮತ್ತು ಪೂಜಾ ಹೆಗಡೆ ಕೂಡ ಈ ಘಟನೆಯಿಂದ ಮುಜುಗರಕ್ಕೆ ಒಳಗಾಗಿದ್ದಾರೆ.

ಆಗಿದ್ದೇನು ?

ದಂಗ್ ದ ಟೂರ್ ಎಂಬ ಮನೋರಂಜನಾ ಕಾರ್ಯಕ್ರಮದಲ್ಲಿ ಸಲ್ಮಾನ್ ಮತ್ತು ಪೂಜಾ ಹೆಗಡೆಯ ನೃತ್ಯವಿದೆ. ಮೊದಲು ಈ ನೃತ್ಯಕ್ಕೆ ನಟಿ ಜಾಕ್ವೇಲಿನ್ ಫರ್ನಾಂಡಿಸ್ ಆಯ್ಕೆಯಾಗಿದ್ದರು. ಆದರೆ ಜಾಕ್ವೇಲಿನ್ ಹೆಸರು ಸಧ್ಯ ಬಹುಕೋಟಿ ವಂಚನೆ ಹಗರಣದ ಸುರೇಶ ಚಂದ್ರಶೇಖರ್ ಅವರ ಜೊತೆ ಸುತ್ತಿಕೊಂಡಿರುವುದರಿಂದ ಜಾಕ್ವೇಲಿನ್ ಬದಲಿಗೆ ನಟಿ ಪೂಜಾ ಹೆಗಡೆ ಸಲ್ಮಾನ್ ಜೊತೆಗಿನ ನೃತ್ಯಕ್ಕೆ ಆಯ್ಕೆಯಾದರು.

ಸಲ್ಮಾನ್‌ರ ಕಿಕ್ ಸಿನೇಮಾದ ಜುಮ್ಮೇ ರಾತ್‌ಕೀ … ಹಾಡಿನ ಈ ನೃತ್ಯದಲ್ಲಿ ಸಲ್ಮಾನ್ ಖಾನ್ ಪೂಜಾ ಹೆಗಡೆಯ ಹಿಂದಿನಿಂದ ಬಂದು ಸ್ಕರ್ಟ್ ತುದಿಯನ್ನು ಕಚ್ಚುವ ಸ್ಟೆಪ್ ಒಂದಿದೆ. ಆದರೆ ಅರಿವಿಲ್ಲದೆ ಪೂಜಾ ಹೆಗಡೆ ತುಂಡು ಸ್ಕರ್ಟ್ (ಬಾಡಿಕಾನ್ ಡ್ರೆಸ್) ಆಗಿದ್ದರಿಂದ ಸಲ್ಮಾನ್‌ಗೆ ಅವರ ಸ್ಕರ್ಟ್ ತುದಿಯನ್ನು ಕಚ್ಚಲು ಸಾಧ್ಯವಾಗಿಲ್ಲ. ಪೂಜಾರ ಹಿಂದೆ ಹಿಂದೆಯೇ ಹೋದ ಸಲ್ಮಾನ್ ಕೊನೆಗೂ ಕಷ್ಟಪಟ್ಟು ಪೂಜಾರ ಸ್ಕರ್ಟ್ ಕಚ್ಚಿದ್ದಾರೆ. ಆದರೆ ಈ ದೃಷ್ಯ ಪೂಜಾ ಸಣ್ಣ ಸ್ಕರ್ಟ್ ತೊಟ್ಟಿದ್ದರಿಂದ ವೀಕ್ಷಕರಿಗೆ ಸ್ವಲ್ಪ ಮುಜುಗರ ತಂದಿದೆ.

Home add -Advt

ಬಳಿಕ ಈ ವಿಡಿಯೋ ಕುರಿತು ನೆಟ್ಟಿಗರು ಹಿಗ್ಗಾ ಮುಗ್ಗಾ ಟ್ರೋಲ್ ಮಾಡಿದ್ದು ಸ್ವತಃ ಸಲ್ಮಾನ್ ಖಾನ್ ಮತ್ತು ಪೂಜಾ ಹೆಗಡೆ ಕೂಡ ಮುಜುಗರ ಅನುಭವಿಸುವಂತಾಗಿದೆ.

ಅವಳಿ ಮಕ್ಕಳಿಗೆ ಜನ್ಮ ನೀಡಿದ ನಟಿ ಅಮೂಲ್ಯ

Related Articles

Back to top button