Latest

43 ವರ್ಷದಲ್ಲಿ 53 ಬಾರಿ ಮದುವೆಯಾದ ವ್ಯಕ್ತಿಗೀಗ ಮನಶಾಂತಿ ಬೇಕಂತೆ!

ಪ್ರಗತಿವಾಹಿನಿ ಸುದ್ದಿ, ಅಬುದಾಬಿ:  43 ವರ್ಷಗಳಲ್ಲಿ 53 ಬಾರಿ ಮದುವೆಯಾದ 63 ವರ್ಷದ ಸೌದಿ ಅರೆಬಿಯಾದ ವ್ಯಕ್ತಿಯೊಬ್ಬರು ಈಗ ಮನಶಾಂತಿ ಹುಡುಕುತ್ತಿದ್ದಾರೆ!

20ನೇ ವಯಸ್ಸಿನಲ್ಲಿ ತನಗಿಂತ 6 ವರ್ಷ ಹಿರಿಯಳಾದ ಮಹಿಳೆಯೊಂದಿಗೆ ಮೊದಲ ಮದುವೆಯಾದ ತಮಗೆ ಮಕ್ಕಳಿದ್ದು ಆಗ ಹಲವು ಮದುವೆಗಳಾಗುವ ಬಗ್ಗೆ ಯೋಚಿಸಿರಲಿಲ್ಲ ಎಂದು ಹೇಳಿಕೊಂಡಿರುವ ಅಬ್ದುಲ್ಲಾ ಕೆಲವು ವರ್ಷಗಳ ನಂತರ ಸಂಬಂಧದಲ್ಲಿನ ಸಮಸ್ಯೆಗಳಿಂದ 23ನೇ ವಯಸ್ಸಿನಲ್ಲಿ ಇನ್ನೊಂದು ಮದುವೆಗೆ ಆಲೋಚಿಸಿದರಂತೆ.

ಎರಡನೇ ಮದುವೆ ನಂತರ ಇಬ್ಬರೂ ಪತ್ನಿಯರ ಮಧ್ಯೆ ಕೌಟುಂಬಿಕ ಕಿಡಿ ಹೊತ್ತಿಕೊಂಡ ಹಿನ್ನೆಲೆಯಲ್ಲಿ ಇಬ್ಬರನ್ನೂ ಬಿಟ್ಟು ಮೂರನೇ ಮದುವೆಯಾದರಂತೆ. ಆಮೇಲೆ ಲಾಟರಿ ಹೊಡೆದಂತೆ ಶುರುವಾಯಿತಂತೆ ಅಬ್ದುಲ್ಲಾ ಜೀವನದಲ್ಲಿ ಮದುವೆಗಳ ಸರಣಿ.

ತಮ್ಮ ಸಾಗರೋತ್ತರ ಪ್ರವಾಸಗಳಲ್ಲೂ ಅವರು ಹಲವು ಮದುವೆಯಾಗಿದ್ದಾಗಿ ಹೇಳಿಕೊಂಡಿದ್ದಾರೆ. ಇದೀಗ ಅವರು  ಮದುವೆ ಸರಣಿಗೆ ಪೂರ್ಣವಿರಾಮ ಹಾಕಿದ್ದು ಮನಶಾಂತಿ ಹುಡುಕುತ್ತಿದ್ದಾರಂತೆ.

Home add -Advt

ಒಟ್ಟಾರೆಯಾಗಿ ಒಂದೇ ಮದುವೆಗೆ ಹಣ್ಣುಗಾಯಿ ನೀರುಗಾಯಿ ಆಗುವವರೆದುರು ಅಬ್ದುಲ್ಲಾ ಬರೊಬ್ಬರಿ 53 ಮದುವೆಗಳೊಂದಿಗೆ ತಮ್ಮ ಪರಾಕ್ರಮ ತೋರಿಸಿಬಿಟ್ಟಿದ್ದಾರೆ. ಅಬ್ದುಲ್ಲಾ ಕಥೆ ಕೇಳಿದ ಸಾಮಾಜಿಕ ಜಾಲತಾಣಿಗರೆಲ್ಲ “ಅಬ್ಬಬ್ಬಾ..” ಎಂದು ಉದ್ಗರಿಸಿ ಅವಾಕ್ಕಾಗಿದ್ದಾರೆ !

ಬೈಕ್ ಗೆ ಗುದ್ದಿ ಹೋಟೆಲ್ ಗೆ ನುಗ್ಗಿದ ಕ್ಯಾಂಟರ್; ಇಬ್ಬರು ಸ್ಥಳದಲ್ಲೇ ದುರ್ಮರಣ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button