Kannada News

ಬೆಳವಡಿ ಮಲ್ಲಮ್ಮ ಉತ್ಸವ ಜ್ಯೋತಿ ಯಾತ್ರೆಯ ವೇಳಾಪಟ್ಟಿ

ಬೆಳವಡಿ ಮಲ್ಲಮ್ಮ ಉತ್ಸವ ಜ್ಯೋತಿ ಯಾತ್ರೆಗೆ ಚಾಲನೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಫೆಬ್ರವರಿ 28 ರಂದು ನಡೆಯುವ ಬೆಳವಡಿ ಮಲ್ಲಮ್ಮ ಉತ್ಸವ-2022ರ ಜ್ಯೋತಿ ಯಾತ್ರೆಗೆ ಶುಕ್ರವಾರ(ಫೆ.25)ರಂದು ಚಾಲನೆ ನೀಡಲಾಯಿತು.
ಮಲ್ಲಮ್ಮನ ತವರೂರಾದ ಶಿರಸಿಯ ಸೋಂದಾದಿಂದ ಜ್ಯೋತಿಯನ್ನು ಬೀಳ್ಕೊಡಲಾಯಿತು. ಸೋಂದಾ- ಯಲ್ಲಾಪುರ- ಹಳಿಯಾಳ- ಅಳ್ನಾವರ- ಖಾನಾಪುರ- ಬೆಳಗಾವಿ ಮತ್ತು ಬೈಲಹೊಂಗಲ ಮಾರ್ಗವಾಗಿ ಸಾಗಿ ಗರಜೂರ -ಸಂಗೊಳ್ಳಿ- ಖೋದಾನಪುರ- ಪಟ್ಟಿಹಾಳ ಮಾರ್ಗದ ಮೂಲಕ ಶಿದ್ಧಸಮುದ್ರ ಗ್ರಾಮದ ಸಿದ್ಧೇಶ್ವರ ದೇವಸ್ಥಾನಕ್ಕೆ ತಲುಪಲಿದೆ.
ನಂತರ ಮಂಗಳವಾರ (ಫೆ.28)ರಂದು ಬೆಳಗ್ಗೆ 7ಗಂಟೆಗೆ ಸಿದ್ಧೇಶ್ವರ ದೇವಸ್ಥಾನದಿಂದ ಜ್ಯೋತಿ ಯಾತ್ರೆ ಬೆಳವಡಿಗೆ ತಲುಪಲು ಸಂಚರಿಸಲಿದೆ.

ಬೆಳವಡಿ ಮಲ್ಲಮ್ಮ ಉತ್ಸವ ಜ್ಯೋತಿ ಯಾತ್ರೆಯ ವೇಳಾಪಟ್ಟಿ :

ಬೆಳವಡಿ ಮಲ್ಲಮ್ಮ ಉತ್ಸವ-2022ರ ಜ್ಯೋತಿ ಯಾತ್ರೆಯು ಫೆಬ್ರುವರಿ 26 ರಂದು ಬೆಳಿಗ್ಗೆ 7 ಗಂಟೆಗೆ ಸೋಂದಾದಿಂದ ಜ್ಯೋತಿಯ ಪ್ರಾರಂಭ ಹಾಗೂ ಮೆರವಣಿಗೆ, 10 ಗಂಟೆಗೆ ಸೋಂದಾದಿಂದ ಜ್ಯೋತಿಯ ಬೀಳ್ಕೊಡುಗೆ ಕಾರ್ಯಕ್ರಮ, ಮಧ್ಯಾಹ್ನ 1 ಗಂಟೆಗೆ ಯಲ್ಲಾಪುರದಲ್ಲಿ ಜ್ಯೋತಿಯ ಸ್ವಾಗತ, ಮಧ್ಯಾಹ್ನ 2 ಗಂಟೆಗೆ ಯಲ್ಲಾಪುರದಿಂದ ಜ್ಯೋತಿಯ ಬೀಳ್ಕೊಡುಗೆ. ಸಂಜೆ 4 ಗಂಟೆಗೆ ಹಳಿಯಾಳಕ್ಕೆ ಜ್ಯೋತಿಯ ಆಗಮನ ಮತ್ತು ಪೂಜೆ, 4.30 ಗಂಟೆಗೆ ಹಳಿಯಾಳದಿಂದ ಬೀಳ್ಕೊಡುಗೆ. 5.30 ಗಂಟೆಗೆ ಅಳ್ನಾವರಕ್ಕೆ ಜ್ಯೋತಿಯ ಸ್ವಾಗತ ಹಾಗೂ ಪೂಜೆ, 6 ಗಂಟೆಗೆ ಅಳ್ನಾವರದಿಂದ ಜ್ಯೋತಿಯ ಬೀಳ್ಕೊಡುಗೆ, 7 ಗಂಟೆಗೆ ನಂದಗಡಕ್ಕೆ ಜ್ಯೋತಿಯ ಆಗಮನ, ಪೂಜೆ, 7.30 ಗಂಟೆಗೆ ನಂದಗಡದಿಂದ ಜ್ಯೋತಿಯ ಬೀಳ್ಕೊಡುಗೆ, ರಾತ್ರಿ 8 ಗಂಟೆಗೆ ಖಾನಾಪುರಕ್ಕೆ ಜ್ಯೋತಿಯ ಆಗಮಿಸಲಿದೆ.
ಫೆಬ್ರುವರಿ 27 ರಂದು ಬೆಳಿಗ್ಗೆ 10.30 ಗಂಟೆಗೆ ಖಾನಾಪುರದಿಂದ ಬೀಳ್ಕೊಡುಗೆ.  11.30 ಗಂಟೆಗೆ ಬೆಳಗಾವಿ ನಗರಕ್ಕೆ ಜ್ಯೋತಿಯ ಸ್ವಾಗತ ಹಾಗೂ ಪೂಜೆ, ಮಧ್ಯಾಹ್ನ 12 ಗಂಟೆಗೆ ಬೆಳಗಾವಿಯಿಂದ ಜ್ಯೋತಿಯ ಬೀಳ್ಕೊಡುಗೆ, ಮಧ್ಯಾಹ್ನ 01.30 ಗಂಟೆಗೆ ಬೈಲಹೊಂಗಲದಿಂದದಲ್ಲಿ ಜ್ಯೋತಿಯ ಸ್ವಾಗತ, ಪೂಜೆ, 2.30 ಗಂಟೆಗೆ ಬೈಲಹೊಂಗಲದಿಂದ ಜ್ಯೋತಿಯ ಬೀಳ್ಕೊಡುಗೆ, ಸಂಜೆ 04.30 ಗಂಟೆಗೆ ಕಂಗಾನೂರ-ಗರ್ಜೂರ- ಸಂಗೊಳ್ಳಿ- ಗೋದಾನಶೂರ- ಪಟ್ಟಿಹಾಳ ಮಾರ್ಗದ ಮೂಲಕ ಸಿದ್ದಸಮುದ್ರ ಗ್ರಾಮದ ಶ್ರೀ ಸಿದ್ದೇಶ್ವರ ದೇವಸ್ಥಾನಕ್ಕೆ ಆಗಮಿಸಲಿದೆ.
ಫೆಬ್ರುವರಿ 28 ರಂದು ಮುಂಜಾನೆ 7 ಗಂಟೆಗೆ ಶ್ರೀ ಸಿದ್ದೇಶ್ವರ ದೇವಸ್ಥಾನನದಿಂದ ಬೀಳ್ಕೊಡುಗೆ, 9 ಗಂಟೆಗೆ ಬೆಳವಡಿಗೆ ಜ್ಯೋತಿಯ ಆಗಮಿಸಲಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button