ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ವಿದ್ಯಾರ್ಥಿಗಳ ಶಿಕ್ಷಣ ಎಷ್ಟು ಮುಖ್ಯವೋ ಅಷ್ಟೇ ಸುರಕ್ಷತೆ ಕೂಡ ಮುಖ್ಯವಾದುದು. ಈ ನಿಟ್ಟಿನಲ್ಲಿ ಶಾಲಾ ಆವರಣಗಳ ಭದ್ರತೆಗೆ ಆದ್ಯತೆ ನೀಡುವುದು ಅಗತ್ಯ ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಹೇಳಿದರು.
ಅವರು, ಬೆಳಗಾವಿ ಗ್ರಾಮೀಣ ಕ್ಷೇತ್ರದ ಸುಳಗಾ (ಯು) ಗ್ರಾಮದ ಶ್ರೀ ಬ್ರಹ್ಮಲಿಂಗೇಶ್ವರ ಪ್ರೌಢಶಾಲೆಯ ಸುತ್ತಮತ್ತ ನೂತನ ಕಾಂಪೌಂಡ್ ಗೋಡೆ ನಿರ್ಮಾಣದ ಕಾಮಗಾರಿಗಳಿಗೆ ಗ್ರಾಮಸ್ಥರ ಸಮ್ಮುಖದಲ್ಲಿ ಭೂಮಿ ಪೂಜೆಯನ್ನು ಕೈಗೊಂಡು ಚಾಲನೆ ನೀಡಿ ಮಾತನಾಡಿದರು.
ಮಕ್ಕಳಿಗೆ ಅಕ್ಷರ ದಾಸೋಹ ಉಣಿಸುವ ಶಾಲೆಗಳ ಸ್ಥಿತಿಗತಿ, ಪಾವಿತ್ರ್ಯ ಕಾಪಾಡುವುದೂ ಅಷ್ಟೇ ಪ್ರಮುಖ ಅಂಶವಾಗಿದ್ದು ಕಾಂಪೌಂಡ್ ಗೋಡೆ ನಿರ್ಮಾಣದ ಅಗತ್ಯದ ಬೇಡಿಕೆಯನ್ನು ಪೂರೈಸಲಾಗಿದೆ ಎಂದು ಅವರು ಹೇಳಿದರು.
ಈ ಸಮಯದ ಗ್ರಾಮದ ಹಿರಿಯರು, ಬಾಬು ಗಡ್ಕರಿ, ಯುವ ಕಾಂಗ್ರೆಸ್ ಮುಖಂಡ ಮೃಣಾಲ್ ಹೆಬ್ಬಾಳಕರ, ಬಾಗಣ್ಣ ನರೋಟಿ, ಡಿ ಡಿ ಪಾಟೀಲ, ಸಂಜಯ ಪಾಟೀಲ, ಕೃಷ್ಣ ಪಾಟೀಲ, ಪ್ರಕಾಶ ಪಾಟೀಲ, ನಿರ್ಮಲಾ ಕಲಕಾಂಬ್ಕರ, ಯಲ್ಲಪ್ಪ ಕಲಕಾಂಬ್ಕರ ಹಾಗೂ ಮುಂತಾದವರು ಉಪಸ್ಥಿತರಿದ್ದರು.
ಅಂಗನವಾಡಿ ಆವರಣದಲ್ಲಿ ಹಾವು ಕಚ್ಚಿ ಬಾಲಕ ಸಾವು
https://pragati.taskdun.com/boy-dies-of-snake-bite-in-anganwadi-premises/
*ಫೆಬ್ರವರಿಯಲ್ಲಿ ರಾಜ್ಯ ಬಜೆಟ್ ಮಂಡನೆ*
https://pragati.taskdun.com/karnataka-budgetfebruarycm-basavaraj-bommaishiggavi/
*ಈ 5 ದೇಶದ ಪ್ರಯಾಣಿಕರಿಗೆ RT-PCR ಕಡ್ಡಾಯ; ಮತ್ತೆ ಕ್ವಾರಂಟೈನ್ ರೂಲ್ಸ್ ಸುಳಿವು ನೀಡಿದ ಸಚಿವರು*
https://pragati.taskdun.com/bf-7-viruscorona-virusinternational-travelersrt-pcr-testmandatory/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ